Advertisement
ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ಕಾರ್ಕಳ ತಹಶೀಲ್ದಾರರ ಮಾರ್ಗದರ್ಶನದಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಇಲಾಖೆಯ ಆಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಾರಿಗೆಕಟ್ಟೆ ಪೊಲೀಸ್ ಚೆಕ್‌ಪೋಸ್ಟ್ ನಲ್ಲಿ ಕಟ್ಟುನಿಟ್ಟಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಉಡುಪಿ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತನ್ನು ಮಾಡಲಾಗಿದ್ದು ಈಗಾಗಲೇ ಉಡುಪಿಯ ಎಲ್ಲಾ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟನ್ನು ನಿರ್ಮಿಸಲಾಗಿದ್ದು ದಕ್ಷಿಣಕನ್ನಡ ಜಿಲ್ಲೆ ಹಾಗೂ ಉಡುಪಿಯ ಗಡಿಭಾಗವಾಗಿರುವ ಮುಂಡ್ಕೂರು ಜಾರಿಗೆಕಟ್ಟೆಯ ಚೆಕ್ ಪೋಸ್ಟ್ ನಲ್ಲಿಯೂ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.
ಬೆಳ್ಮಣ್ ಚೆಕ್ ಪೋಸ್ಟ್ ಎದುರಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮಹಿಳೆಯರ ಪೈಕಿ ಹಿಂಬದಿ ಸವಾರರು ನಿಯಂತ್ರಣ ತಪ್ಪಿ ರಸ್ತೆ ಬಿದ್ದು ತಲೆಗೆ ಪೆಟ್ಟಾಗಿದ್ದು ಮಹಿಳೆಯನ್ನು ಕೂಡಲೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಎಸ್.ಐ ನಾಗರಾಜ್ ರವರು ಕೂಡಲೇ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು. ಈ ಮೂಲಕ ತನ್ನ ಕಠಿಣ ಕರ್ತವ್ಯದ ನಡುವೆಯೂ ಮಾನವೀಯತೆಯನ್ನು ಮೆರೆದ ಪೊಲೀಸರ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಕಡಿವಾಣ
ದ.ಕ ಜಿಲ್ಲೆಯ ಮೂಡಬಿದಿರೆ ಹಾಗೂ ಕಿನ್ನಿಗೋಳಿ ಭಾಗಗಳಿಂದ ಬರುವ ವಾಹನಗಳಿಗೆ ಜಾರಿಗೆಕಟ್ಟೆ ಚೆಕ್ ಪೋಸ್ಟ್ ನಲ್ಲಿ ಕಡಿವಾಣ ಹಾಕುತ್ತಿದ್ದಾರೆ. ಮಂಗಳೂರು ಭಾಗದಿಂದ ಹಾಗೂ ಹೊರ ರಾಜ್ಯಗಳಿಂದ ಬರುವ ವಾಹನಗಳನ್ನು ತಡೆದು ತಪಾಸಣೆ ನಡೆಸಿ ಕಳುಹಿಸಲಾಗುತ್ತಿದೆ. ಗಡಿ ಭಾಗದಲ್ಲಿ ಬರುವ ಎಲ್ಲಾ ವಾಹನಗಳ ಪ್ರಯಾಣಿಕರನ್ನು ಆರೋಗ್ಯ ಇಲಾಖೆಯ ಸಿಬಂದಿ ತಪಾಸಣೆ ನಡೆಸಿ ಕಳುಹಿಸುತ್ತಿದ್ದಾರೆ.