Advertisement

ಸಕ್ರಮೀಕರಣ ಕಾರ್ಯ ಚುರುಕುಗೊಳಿಸಿ: ನಾಯ್ಕ

03:03 PM Nov 09, 2017 | |

ದಾವಣಗೆರೆ: ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ರಾಷ್ಟ್ರಪತಿಗಳ ಅಂಕಿತ ದೊರಕಿದ್ದು, ನಿಯಮಾವಳಿ ರೂಪಿಸಲಾಗುತ್ತಿದೆ. ದಾವಣಗೆರೆ ತಾಲೂಕಿಗೆ ಸಂಬಂಧಿಸಿದ ಸಕ್ರಮೀಕರಣ ದಾಖಲೆ ಸಿದ್ದಪಡಿಸಿಕೊಳ್ಳಲು ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ನಾಯ್ಕ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷರೂ ಆಗಿರುವ ಕೆ. ಶಿವಮೂರ್ತಿ ನಾಯ್ಕ ಬುಧವಾರ ತಹಶೀಲ್ದಾರ್‌ರ ಕಚೇರಿಯಲ್ಲಿ ನಡೆದ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಕುರಿತ ಸಭೆಯಲ್ಲಿ ಮಾತನಾಡಿ, ಭೂ ಸುಧಾರಣಾ ಕಾಯ್ದೆಗೆ ವಾಸಿಸುವವನೇ ಭೂ ಒಡೆಯ ಎಂಬ ತಿದ್ದುಪಡಿಗೆ ಅಂಕಿತ ದೊರೆತಿರುವುದರಿಂದ ಹಟ್ಟಿ-ತಾಂಡ-ಹಾಡಿಗಳಲ್ಲಿ ವಾಸಿಸುತ್ತಿರುವ ಭೂ ರಹಿತರಿಗೆ ಅನುಕೂಲವಾಗಲಿದೆ ಎಂದರು.

ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್‌ ಸಂತೋಷಕುಮಾರ್‌, ಲಂಬಾಣಿ ತಾಂಡ, ವಡ್ಡರಹಟ್ಟಿ, ಗೊಲ್ಲರಹಟ್ಟಿ, ನಾಯಕನಹಟ್ಟಿ, ಮಜಿರೆ ಗ್ರಾಮ, ದೊಡ್ಡಿ, ಕಾಲೋನಿ ವಿವಿಧ ಕ್ಯಾಂಪುಗಳು ಸೇರಿದಂತೆ 22 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. 10 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ದೊರೆತಿದೆ. ಮತ್ತಿ ಕಂದಾಯ ಗ್ರಾಮವಾಗಿದೆ ಎಂದರು. ಮತ್ತಿ ಗ್ರಾಮಕ್ಕೆ ಸಂಬಂಧಿ ಸಿದಂತೆ ಕಂದಾಯ ಗ್ರಾಮವಾಗಿ ಪರಿವರ್ತಿಸಲು ತೆಗೆದುಕೊಳ್ಳಬೇಕಾದ ಕ್ರಮ ಶೀಘ್ರವಾಗಿ ಕೈಗೊಳ್ಳುವಂತೆ ಹಾಗೂ ಇನ್ನುಳಿದ ಹಾಡಿ-ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕೈಗೊಳ್ಳಬೇಕಾದ ಕ್ರಮ ವಹಿಸಿ ಎಂದು ಶಾಸಕರು ತಿಳಿಸಿದರು.

ಚನ್ನಗಿರಿ ಮತ್ತು ಹೊನ್ನಾಳಿಯಲ್ಲಿ ಅರಣ್ಯ ಪ್ರದೇಶಗಳ ಸರ್ವೆಗೆ ಸಂಬಂಧಿಸಿದಂತೆ ಕೆಲಸ ಮುಗಿದಿದೆ. ಆದರೆ ಬುಡಕಟ್ಟು ಜನಾಂಗದವರೇ ಹೆಚ್ಚಿರುವ ಗುಡಾಳು, ಗುಮ್ಮನೂರು, ಹುಚ್ಚವ್ವನಹಳ್ಳಿ ಸೇರಿದಂತೆ ದಾವಣಗೆರೆಯಲ್ಲಿ ಸರ್ವೆ ಮಾಡಿ ವರದಿ ನೀಡಿಲ್ಲ. ಇದರಿಂದ ಸಕ್ರಮೀಕರಣಕ್ಕೆ ಅನಾನುಕೂಲವಾಗಲಿದೆ. ಹಾಗಾಗಿ ಇಲ್ಲಿ ಇದುವರೆಗೂ ಒಂದು ಹಕ್ಕುಪತ್ರ ವಿತರಿಸಲಾಗಿಲ್ಲ. ಆದ್ದರಿಂದ ಶೀಘ್ರ ಕ್ರಮ ಜರುಗಿಸುವಂತೆ ಸಂಬಂಧಿ ಸಿದ ಅರಣ್ಯಇಲಾಖೆ ಅಧಿಕಾರಿಗೆ ಶಿವಮೂರ್ತಿ ನಾಯ್ಕ ಸೂಚಿಸಿದರು.

ಗೊಲ್ಲರಹಟ್ಟಿಗಳಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗಲು ರಸ್ತೆ-ಸಾರಿಗೆ ವ್ಯವಸ್ಥೆಗೆ ಆಗ್ರಹಿಸುತ್ತಿದ್ದಾರೆ. ಇಂತಹ 62 ಸಾವಿರ
ಜನವಸತಿಗೆ ಪ್ರತ್ಯೇಕ ಯೋಜನೆ ಮತ್ತು ಅನುದಾನ ದೊರಕಬೇಕಿದೆ. ಈ ನಿಟ್ಟಿನಲ್ಲಿ ಆಗಬೇಕಾದ ಸರ್ವೇ ಕಾರ್ಯ ಸೇರಿದಂತೆ ಪೂರಕ ಕೆಲಸಗಳನ್ನು ಶೀಘ್ರವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಹಳ್ಳಿಗಳಲ್ಲಿನ ಗೋಮಾಳ ಒತ್ತುವರಿ ಹೆಚ್ಚುತ್ತಿದೆ. ಒತ್ತುವರಿ ತೆರವುಗೊಳಿಸುವ ಕಾರ್ಯವಾಗಬೇಕು. ಪಿಡಿಒ, ಇಒ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಬೇಕು ಎಂದರು.

Advertisement

ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಬಸವರಾಜಪ್ಪ, ಶಿವಗನಾಯ್ಕ, ನಳಿನಮ್ಮ, ದಾವಣಗೆರೆ ತಾಲೂಕು ಪರ್ಯಾವೇಕ್ಷಕರಾದ ನಾಗಭೂಷಣ, ಚುನಾವನಾ ಶಿರಸ್ತೇದಾರ್‌ ರಾಜೇಶ್‌ಕುಮಾರ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next