Advertisement

ಜಡೆ ಜಗಳ ಸಲ್ಲದು,ಅಧಿಕಾರಿಗಳ ಮೇಲೆ ಕಡಿವಾಣ ಅಗತ್ಯವಿದೆ: ಪ್ರಹ್ಲಾದ್ ಜೋಶಿ

05:54 PM Feb 20, 2023 | Team Udayavani |

ಧಾರವಾಡ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಆರೋಪ, ಪ್ರತ್ಯಾರೋಪದಂತಹ ಅನಾರೋಗ್ಯಕರ ಬೆಳವಣಿಗೆಗೆ ಕಡಿವಾಣ ಅಗತ್ಯವಿದ್ದು, ಹೀಗಾಗಿ ಈ ಮಹಿಳಾ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯದಲ್ಲಿ ವಿವಿಧ ಪಕ್ಷಗಳ ನಾಯಕರು ನೀಡುವ ಹೇಳಿಕೆ ರಾಜಕೀಯ ವ್ಯವಸ್ಥೆಯ ಭಾಗ. ಆದರೆ ಅಧಿಕಾರಿಗಳು ಈ ರೀತಿ ಪರಸ್ಪರ ಕೆಸರಾಟ, ಎರಚುತ್ತಿರುವುದು ಸರಿಯಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಷಯ ಅತ್ಯಂತ ದುರ್ದೈವ. ಪರಸ್ಪರ ದೂರುಗಳಿದ್ದರೆ ಸಂಬಂಧಪಟ್ಟವರಿಗೆ ದೂರು ಸಲ್ಲಿಸಬೇಕಿತ್ತು. ಆದರೆ ಈ ರೀತಿ ಪತ್ರಿಕಾ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂದರು.

ಶಾಸ್ತ್ರೀಯ ಭಾಷೆ ಸ್ಥಾನಮಾನ ಕಚೇರಿಯ ವಿಳಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಕಚೇರಿಗೆ ಕೊಡಬೇಕಿರುವ ಜಾಗ ಅಂತಿಮ ಆಗಿರಲಿಲ್ಲ. ಈಗ ಜಾಗ ನಿರ್ಧರಿಸಿ, ಪ್ರಸ್ತಾವನೆ ಕಳುಹಿಸಿದ್ದಾರೆ. ಅದಕ್ಕೆ ಸಂಬಂದಿಸಿದಂತೆ ದಾಖಲೆಗಳ ಅಗತ್ಯವೂ ಇತ್ತು. ಅದನ್ನು ಸಂಸ್ಕೃತಿ ಮಂತ್ರಾಲಯು ಈಗಾಗಲೇ ತಿಳಿಸಿದೆ. ಮೋದಿ ಸರಕಾರವು ಕನ್ನಡ, ಕರ್ನಾಟಕದ ಬಗ್ಗೆ ಅಭಿಮಾನ ಹೊಂದಿದ್ದು, ಹೀಗಾಗಿ ನಾವು ಕಚೇರಿ ಮಾಡುತ್ತೇವೆ. ಇದರಲ್ಲಿ ಯಾವುದೇ ರಾಜಕಾರಣ ಮಾಡಲು ಹೊರಟಿಲ್ಲ. ಆದರೆ ಮೈಸೂರಿನಲ್ಲಿ ಸ್ಥಳೀಯವಾಗಿ ಕೆಲ ವಿಷಯವಿತ್ತು. ಈಗ ಅದೆಲ್ಲವೂ ಈಗ ನಿವಾರಣೆಯಾಗಲಿದೆ ಎಂದರು.

7ನೇ ವೇತನ ಆಯೋಗದ ಬಗ್ಗೆ ಸಿಎಂ ಜತೆ ಮಾತನಾಡುವೆ. ಈ ವಿಷಯದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಇದು ರಾಜ್ಯ ಸರಕಾರದ ವಿಷಯ. ಹೀಗಾಗಿ ಸಿಎಂ ಅವರೊಂದಿಗೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next