Advertisement

Kumbhashi ಅನಧೀಕೃತ ಅಂಗಡಿಗಳ ತೆರವಿಗೆ ಕ್ರಮ: ಜಿಲ್ಲಾಧಿಕಾರಿ

08:19 PM Aug 25, 2024 | Team Udayavani |

ತೆಕ್ಕಟ್ಟೆ: ರಾ.ಹೆ.66 ಚತುಷ್ಪಥ ರಸ್ತೆ ಕಾಮಗಾರಿಯ ಸಂದರ್ಭ ಸರ್ವಿಸ್‌ ರಸ್ತೆ ನಿರ್ಮಾಣವಾಗದ ಕಾರಣ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಈ ಕುರಿತು ಸಭೆ ಕರೆದು ಹೆದ್ದಾರಿಯ ಎರಡು ಕಡೆ ಸರ್ವಿಸ್‌ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.

Advertisement

ಜಿಲ್ಲೆಯ ಹೆಜಮಾಡಿ, ಬ್ರಹ್ಮಾವರ, ತೆಕ್ಕಟ್ಟೆ ಸಹಿತ ಹೆಚ್ಚಿನ ಕಡೆಗಳಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣವಾಗಲಿದೆ. ರಾ.ಹೆ.66ರ ಎರಡು ಕಡೆಗಳಲ್ಲಿ ಸಮರ್ಪಕವಾದ ಒಳಚರಂಡಿ ಸಮಸ್ಯೆ ಹಾಗೂ ರಸ್ತೆ ಇಕ್ಕೆಲದಲ್ಲಿ ಹೊಂಡಗುಂಡಿಗಳಿದ್ದು, ಈ ನಡುವೆ ಅಪಾಯಕಾರಿ ರಸ್ತೆ ಅಂಚುಗಳಿಂದಾಗಿ ಮಳೆಗಾಲದಲ್ಲಿ ಸ್ಥಳೀಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಹೆದ್ದಾರಿ ಪ್ರಾಧಿಕಾರದವರ ಗಮನಕ್ಕೆ ತರಲಾಗಿದೆ. ರಾ.ಹೆ.66ಕ್ಕೆ ಗ್ರಾಮೀಣ ಸಂಪರ್ಕ ರಸ್ತೆಗಳು ಸಂಧಿಸುವ ಬಲಭಾಗಗಳಲ್ಲಿ ಅನಧೀಕೃತವಾಗಿರುವ ಅಂಗಡಿ, ಜಾಹಿರಾತು ನಾಮಫಲಕಗಳು ರಸ್ತೆಯನ್ನೇ ಆವರಿಸಿದ್ದು, ವಾಹನ ಸವಾರರಿಗೆ ಗೊಂದಲ ಏರ್ಪಟ್ಟು ಸಂಭವನೀಯ ಅವಘಡಗಳು ಸಂಭವಿಸುವ ಸಾಧ್ಯತೆಗಳಿರುವ ಭಾಗಗಳನ್ನು ಪರಿಶೀಲಿಸಿ ತತ್‌ಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾ ಕುಮಾರಿ ಅವರು ಹೇಳಿದರು.

ಅವರು ಆ.25 ರಂದು ಕುಂಭಾಶಿ ಗ್ರಾ.ಪಂ. ವ್ಯಾಪ್ತಿಯ ಕೊರಗ ಕಾಲನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಉದಯವಾಣಿ ಜತೆ ಮಾತನಾಡಿದರು.

ಈ ಸಂದರ್ಭದಲ್ಲಿ ಕೊರಗ ಶ್ರೇಯೋಭಿವೃದ್ಧಿ ಸಂಘ (ರಿ), ಕುಂದಾಪುರ ಇದರ ಅಧ್ಯಕ್ಷ ಗಣೇಶ್‌ ವಿ., ಕುಂಭಾಶಿ ಗ್ರಾಮ ಪಂಚಾಯತ್‌ ಇದರ ಅಧ್ಯಕ್ಷ ಆನಂದ ಪೂಜಾರಿ, ಪಿಡಿಒ ಜಯರಾಮ ಶೆಟ್ಟಿ, ಕೊರಗ ಮುಖಂಡರಾದ ಗಣೇಶ್‌ ಬಾರಕೂರು, ಶೇಖರ್‌ ಮರವಂತೆ, ಲಕ್ಷ್ಮಣ್‌ ಬೈಂದೂರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next