Advertisement

ಪಪಂ ಅಧಿಕಾರಿಗಳಿಂದ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ

02:20 PM Apr 27, 2019 | Team Udayavani |

ನರೇಗಲ್ಲ: ಪಟ್ಟಣದ ವಾರ್ಡ್‌ ನಂ. 3ರ ಆಶ್ರಯ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವ ಪ್ರಸಂಗವಿತ್ತು. ಇದಕ್ಕೆ ಪ.ಪಂ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿ, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

Advertisement

ಆಶ್ರಯ ಕಾಲೋನಿಗೆ ಭೇಟಿ ನೀಡಿ ಅಲ್ಲಿರುವ ನೀರಿನ ಸಮಸ್ಯೆ ಮತ್ತು ಕೊಳವಿ ಬಾವಿ ಪರೀಶಿಲನೆ ನಡೆಸಿದ್ದಾರೆ. ಈ ವೇಳೆ ಪ.ಪಂ ಮುಖ್ಯಾಧಿಕಾರಿ ಎಸ್‌.ಎಸ್‌. ಹುಲ್ಲಮ್ಮನವರ ಮಾತನಾಡಿ, ಸತತವಾಗಿ ಮಳೆ ಕೈಕೊಟ್ಟಿರುವುದರಿಂದ ಪ್ರತಿಯೊಂದು ಕೊಳವಿ ಬಾವಿಗಳಲ್ಲಿರುವ ನೀರು ಕೆಳಮಟ್ಟಕ್ಕೆ ಹೋಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬೋರ್‌ಗಳನ್ನು ಬಳಕೆ ಮಾಡಿಕೊಂಡು ನಗರದ ನಿವಾಸಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಒಂದು ವಾರದೊಳಗೆ ಆಶ್ರಯ ಕಾಲೋನಿಯಲ್ಲಿರುವ ಕೊಳವಿ ಬಾವಿಯನ್ನು ಆಳಗೊಳಿಸುವ (ಪುನಶ್ಚೇತನ) ಮೂಲಕ ವಾರ್ಡ್‌ನ ಜನರಿಗೆ ನೀರು ಸರಬರಾಜು ಮಾಡಲಾಗುವುದು. ಈ ಕೊಳವಿ ಬಾವಿಯ ಸುತ್ತಮುತ್ತಲಿನ ಗುಡಿಸಲುಗಳನ್ನು ಬೋರ್‌ವೆಲ್ ವಾಹನ ಬಂದಾಗ ತೆರವುಗೊಳಿಸಿ ಕೆಲಸಕ್ಕೆ ಸಹಕಾರ ನೀಡಬೇಕು. ಕುಡಿಯುವ ನೀರು ಅಮೂಲ್ಯವಾಗಿದೆ. ಅದನ್ನು ಮಿತವಾಗಿ ಬಳಸಬೇಕು. ಪ್ರತಿ ಜೀವಿಗೂ ಬದುಕಲು ನೀರು ಬೇಕು. ಹೀಗಾಗಿ ಜಲ ಮೂಲಗಳ ಸಂರಕ್ಷಣೆ ಮಾಡುವುದು ಹಾಗೂ ನೀರು ಪೋಲು ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಕುರಿತು ಸಹಾಯವಾಣಿ ಸಂಖ್ಯೆ 08381-268228 ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದರು.

ಪ.ಪಂ ಸಹಾಯಕ ಅಭಿಯಂತರ ವಿ.ಪಿ. ಕಾಟೇವಾಲೆ, ಇಸ್ಮಾಯಿಲ್ ಮನಿಯಾರ, ನಾಗಪ್ಪ ಮಾರನಬಸರಿ, ಮಲ್ಲಯ್ಯ ಗುರುವಡೇಯವರ ಇದ್ದರು.

ಪಟ್ಟಣದ ವಾರ್ಡ್‌ ನಂ. 3ರ ಆಶ್ರಯ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಉದಯವಾಣಿ ಪತ್ರಿಕೆಯಲ್ಲಿ ಏ. 25ರಂದು ನೀರಿನ ಸಾಲು-ಕೇಳುವಿರಾ ಗೋಳು ಎಂಬ ತಲೆ ಬರಹದೊಂದಿಗೆ ಸಚಿತ್ರ ವರದಿ ಪ್ರಕಟಗೊಂಡಿತ್ತು. ಇದೀಗ ವರದಿಗೆ ಸ್ಪಂದಿಸಿದ ಪ.ಪಂ ಅಧಿಕಾರಿಗಳು ಆಶ್ರಯ ಕಾಲೋನಿಗೆ ಭೇಟಿ ನೀಡಿ ಅಲ್ಲಿರುವ ನೀರಿನ ಸಮಸ್ಯೆ ಮತ್ತು ಕೊಳವಿ ಬಾವಿ ಪರೀಶಿಲನೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next