ಕೆರೂರ: ಇಲ್ಲಿನ ಪೊಲೀಸ್ ಸಿಬ್ಬಂದಿ ವಸತಿಗೃಹಗಳ ಸಮಸ್ಯೆ ಮತ್ತು ಠಾಣೆಯಲ್ಲಿ ವ್ಯಾಪ್ತಿಗೆ ತಕ್ಕಂತೆ ಸಿಬ್ಬಂದಿ ಕೊರತೆ ಅಧಿಕಾರಿಗಳ ಮೂಲಕ ಗಮನಕ್ಕೆ ಬಂದಿದ್ದು, ಶೀಘ್ರ ಬಗೆಹರಿಸುವುದಾಗಿ ನೂತನ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದಲ್ಲಿ ಅಹಿತಕರ ಘಟನೆ ಜರುಗದಂತೆ ಸಮರ್ಪಕ ರೀತಿಯಲ್ಲಿ ಜಾಗೃತಿಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಕೆರೂರ ಪಿಎಸ್‌ಐ ಚಂದ್ರಶೇಖರ ಹೆರಕಲ್ ಅವರಿಂದ ಠಾಣೆ ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮಾಹಿತಿ ಪಡೆದರು. ಡಿವೈಎಸ್‌ಪಿ ಗಿರೀಶ, ಸಿಪಿಐ ಕೆ.ಎಸ್. ಹಟ್ಟಿ, ಎಎಸ್‌ಐ ಎಂ.ಎಚ್. ಹೊಸಮನಿ, ಐ.ಎಂ. ಹಿರೇಗೌಡರ, ಎನ್.ಎಸ್.ಸಿಮಾನಿ, ಎಫ್.ವೈ. ತಳವಾರ, ಶಶಿ ಮಸೂತಿ, ಆರ್.ಎಚ್.ಬಿಂಗಿ, ಎಮ್.ಆರ್. ಹೊನ್ನಾನಾಯ್ಕರ, ಎನ್.ಪಿ. ರೇಶ್ಮಿ, ಮಲ್ಲು ಕೂಡಗಿ, ಯಲ್ಲಪ್ಪ ಪೂಜಾರಿ, ವಿ.ಆರ್. ನಡುವಿನಮನಿ, ಗುರು ಒಡೆಯರ, ಎಸ್.ಎಸ್. ಕುಲಕರ್ಣಿ, ಆರತಿ ಸಂಗನಾಳ ಇದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಎಸ್ಪಿ ಲೋಕೇಶ ಅವರನ್ನು ಭೇಟಿಯಾದ ಸ್ಥಳೀಯ ಭಜಂತ್ರಿ (ಕೊರಮ) ಸಮಾಜದ ಪ್ರಮುಖರು, ತಮ್ಮ ಸಮುದಾಯ ಯುವಕ ಐಪಿಎಸ್ ಅಧಿಕಾರಿಯಾಗಿ ಮಾಡಿದ ಸಾಧನೆಯನ್ನು ಅಭಿನಂದಿಸಿ ಸನ್ಮಾನಿಸಿದರು. ಭಜಂತ್ರಿ ಸಮಾಜದ ಅಧ್ಯಕ್ಷ ವೆಂಕಣ್ಣ ಭಜಂತ್ರಿ, ಶಿವು ಸಣ್ಣಕ್ಕಿ, ನಾಗಪ್ಪ ಭಜಂತ್ರಿ, ದುರಗಪ್ಪ ಭಜಂತ್ರಿ, ಉಮೇಶ ಭಜಂತ್ರಿ ಇದ್ದರು.