ಕನಕಪುರ: ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಬೆಡ್ ಗಳ ಕೊರತೆ ನಿವಾರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ್ ತಿಳಿಸಿದರು.
ತಾಲೂಕಿನ ಹಾರೋಹಳ್ಳಿ ಹೋಬಳಿ ಚಂದ್ರಮ್ಮ ದಯಾನಂದ್ ಸಾಗರ್ ಆಸ್ಪತ್ರೆ ವೈದ್ಯಾಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೊರತೆ ಬರಲ್ಲ: ಕೋವಿಡ್ ಸಂದರ್ಭವನ್ನು ಜಿಲ್ಲೆಯಲ್ಲಿ ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ದಯಾನಂದ್ ಆಸ್ಪತ್ರೆಯಲ್ಲಿ ಲಭ್ಯವಿರುವ ಅವಕಾಶ ಬಳಸಿಕೊಳ್ಳಲು ಭೇಟಿ ನೀಡಿದ್ದೇನೆ. ಆಡಳಿತ ಮಂಡಳಿಜತೆ ಮಾತು ಕತೆ ನಡೆಸಿದ್ದೇನೆ. ಈಗಾಗಲೇ ಆಸ್ಪತ್ರೆಯಲ್ಲಿ 100 ಆಕ್ಸಿಜನ್, 50 ಸಾಮಾನ್ಯ ಬೆಡ್‌ಮೀಸಲಿಟ್ಟಿದ್ದಾರೆ. 100 ಬೆಡ್ ಮೀಸಲಿರಿಸುವ ಭರವಸೆ ನೀಡಿದ್ದಾರೆ. ಹೆಚ್ಚುವರಿ ಬೆಡ್‌ಗಳಿಗೆ ಆಕ್ಸಿಜನ್‌ಕೊರತೆ ಇದ್ದು ಪೂರೈಸಲು ಸರ್ಕಾರ ಸಿದ್ಧವಾಗಿದೆ. ರಾಜ್ಯದಲ್ಲಿ ಆಕ್ಷಿಜನ್ ಕೊರತೆ ಇದೆಯಾದರೂನಮ್ಮಜಿಲ್ಲೆಯಲ್ಲಿ ಯಾವುದೇ ಕೊರತೆ ಬಾರದ ಹಾಗೆ ನಿಭಾಯಿಸುತ್ತಿದ್ದೇವೆಂದರು.
ಭಯ ಪಡಬೇಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭೀಣಿ, ಬಾಣಂತಿಯರ ಪಕ್ಕದ ವಾರ್ಡ್ ನಲ್ಲಿ ಸೋಂಕಿತರು ಇರುವ ಅಪಾಯದ ಬಗ್ಗೆ ಪ್ರತಿ ಕ್ರಿಯಿಸಿ, ಇಡೀ ರಾಜ್ಯದಲ್ಲಿ ರಾಮನಗರ ಒಂದೇ ಜಿಲ್ಲೆಯಲ್ಲಿ ಮಾತ್ರ ರೆಗ್ಯುಲರ್ ಆಸ್ಪತ್ರೆಗಳನ್ನು ಕೋವಿಡ್- 19ಗೆ ಬಳಕೆಮಾಡಲಾಗುತ್ತಿದೆ. ಸೋಂಕಿ ತರ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಕೋವಿಡ್ ಆಸ್ಪತ್ರೆಗಳಿಗೆಸ್ಥಳಾಂತರಿಸಲಾಗುತ್ತಿದೆ. ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ನಿಯಂತ್ರಣಕ್ಕೆ ಕ್ರಮ: ಜಿಲ್ಲಾ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅವ್ಯವಸ್ಥೆ ಬಗ್ಗೆ ಪ್ರತಿಕ್ರಿಯಿಸಿದ ಅವರು,ಜಿಲ್ಲಾ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೆಚ್ಚಿನ ಸಮಸ್ಯೆ ಇಲ್ಲ. ನೀರಿನ ಸಮಸ್ಯೆಯನ್ನು ಪರಿಹರಿಸಲಾಗಿದೆ. ಬೇರೆಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ಜಿಲ್ಲೆಯಲ್ಲಿಆಸ್ಪತ್ರೆ ಸೌಲಭ್ಯ, ವೈದ್ಯರು, ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬಹಳಷ್ಟು ನಿಯಂತ್ರಣ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ವ್ಯವಸಾಯ ಉತ್ಪಾದನಾ ವಲಯ ಎಂದಿನಂತೆ ನಡೆಯಲಿವೆ. ಕಟ್ಟಡ ಕಾಮಗಾರಿಮುಂದುವರಿಯಲಿವೆ. ಹೆಚ್ಚು ಜನ ಸೇರುವ ಗಾರ್ಮೆಂಟ್ಸ್ ಉದ್ಯಮಕ್ಕೆ ನಿಷೇಧ ಮಾಡಲಾಗಿದೆ. ಕೋವಿಡ್ ಹರಡದಂತೆ ತಡೆಯಲು ಮುಂದಿನ 14 ದಿನಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮ ಕೈಗೊಂಡಿದ್ದೇವೆಂದರು.
ಪಡಿತರ ವಿತರಣೆ: ಬಡವರಿಗೆ ವರದಾನವಾಗಿದ್ದ ಪಡಿತರ ಕಡಿತಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಕಳೆದ ಸರ್ಕಾರ 5 ಕೆ.ಜಿ.ಪಡಿತರ ನೀಡುತ್ತಿತ್ತು. ಆದರೆ ವ್ಯಾಪಕವಾಗಿ ಪಡಿತರ ಕಾಳಸಂತೆಯಲ್ಲಿಮಾರಾಟವಾಗುತ್ತಿತ್ತು. ಅದಕ್ಕೆ ಕಡಿವಾಣ ಹಾಕುವುದರ ಜತೆಗೆ ರೈತರಿಗೂ ಅನುಕೂಲವಾಗುವಂತೆ ರೈತರಿಂದ ರಾಗಿ ಖರೀದಿ ಮಾಡಿ 3 ಕೆ.ಜಿ, ರಾಗಿ 2 ಕೆ.ಜಿ.ಅಕ್ಕಿನೀಡಲಾಗುತ್ತಿದೆ. ವಿತರಣೆಯಲ್ಲಿ ಕಡಿಮೆಯಾಗಿಲ್ಲ ಎಂದರು.
ಈ ವೇಳೆ ಎಸ್‌ಪಿ ಗಿರೀಶ್, ಜಿಲ್ಲಾಧಿಕಾರಿ ರಾಕೇಶ್, ಸಿಇಒ ಇಕ್ರಂ, ಡಿಎಚ್‌ಒ ನಿರಂಜನ್, ಆರ್‌ಸಿಎಚ್ ಡಾ.ಪದ್ಮಾ, ತಹಶೀಲ್ದಾರ್ ವಿಶ್ವನಾಥ್, ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ಮುರುಳೀಧರ್ ಮತ್ತಿತರರು ಉಪಸ್ಥಿತರಿದ್ದರು.