Advertisement

ಹೆಚ್ಚಿನ ಬೆಲೆಗೆ ಗೊಬ್ಬ ರ ಮಾರಿದರೆ ಕ್ರಮ

07:02 PM Jun 16, 2021 | Girisha |

ಸಿಂದಗಿ: ಪಟ್ಟಣ ಸೇರಿದಂತೆ ಆಲಮೇಲ, ದೇವರಹಿಪ್ಪರಗಿ ಪಟ್ಟಣಗಳಲ್ಲಿನ ಕೀಟನಾಶಕ, ಬೀಜ ಮತ್ತು ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಕೃಷಿ ಅಧಿ  ಕಾರಿಗಳು ಮಂಗಳವಾರ ಏಕ ಕಾಲಕ್ಕೆ ದಿಢೀರ್‌ ಭೇಟಿ ನೀಡಿ ರಸಗೊಬ್ಬರಗಳ ದಾಸ್ತಾನು ಪರಿವೀಕ್ಷಣೆ ಮಾಡಿ ರಸಗೊಬ್ಬರಗಳ ಸ್ಟಾಕ್‌ ಮತ್ತು ಮಾರಾಟದ ಅಂಕಿ ಸಂಖ್ಯೆಯನ್ನು ಪಡೆದುಕೊಂಡು ಮಾರಾಟಗಾರರಿಗೆ ಸಲಹೆ ಸೂಚನೆ ನೀಡಿದ್ದಾರೆ.

Advertisement

ಸಿಂದಗಿ- ಪಟ್ಟಣದಲ್ಲಿ ಕೃಷಿ ಅಧಿಕಾರಿ ಶಿವಾನಂದ ಹೂವಿನಳ್ಳಿ ಅವರು ಎಪಿಎಂಸಿ ಯಾರ್ಡ್‌ ಮತ್ತು ಪಟ್ಟಣದಲ್ಲಿರುವ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ದಿಢೀರ್‌ ಭೇಟಿ ನೀಡಿ ದಾಸ್ತಾನಿನ ಬಗ್ಗೆ ಪರಿಶೀಲನೆ ಮಾಡಿ ಮಾತನಾಡಿ, ಕೇಂದ್ರ ಸರಕಾರ ಮೇ 20ರಂದು ಸೂಚನಾ ಸಂಖ್ಯೆ 23011/1/2021ಕ್ಕೆ ಅನುಗುಣವಾಗಿ ಪಿ ಮತ್ತು ಕೆ ರಸಗೊಬ್ಬರಗಳ ಎನ್‌ಬಿಎಸ್‌ ದರಗಳನ್ನು ಪರಿಷ್ಕರಿಸಿದೆ. ಆ ಪ್ರಕಾರ ಮೇ 20ರಂದು ಚಾಲನೆ ಬರುವಂತೆ ಇಫೂ ಕಂಪನಿಗಳ ಡಿಎಪಿ, ಎನ್‌ಪಿ ಮತ್ತು ಎನ್‌ಪಿಕೆ ರಸಗೊಬ್ಬರಗಳ ದರಗಳನ್ನು ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಡಿಎಪಿ ರಸಗೊಬ್ಬರದ ಬೆಲೆ 1200 ರೂ., 10-26-26 ರಸಗೊಬ್ಬರದ ಬೆಲೆ 1175 ರೂ., 12-32-16 ರಸಗೊಬ್ಬರದ ಬೆಲೆ 1185 ರೂ., 20-20-0-13 ರಸಗೊಬ್ಬರದ ಬೆಲೆ 975 ರೂ., 15-15-15 ರಸಗೊಬ್ಬರದ ಬೆಲೆ 1140 ರೂ. ದರ ನಿಗದಿ ಮಾಡಲಾಗಿದೆ. ತಾಲೂಕಿನ ಎಲ್ಲಾ ರಸಗೊಬ್ಬರ ವಿತರಕರು ಹಾಗೂ ರಿಟೇಲ್‌ ವ್ಯಾಪಾರಿಗಳು ಇಫೂ ಕಂಪನಿ ರಸಗೊಬ್ಬರಗಳನ್ನು ಕೇಂದ್ರ ಸರಕಾರ ನಿಗದಿಪಡಿಸಿದ ಎಂಆರ್‌ಪಿಗಳಲ್ಲಿ ಮಾರಾಟ ಮಾಡಬೇಕು. ರಸಗೊಬ್ಬರಗಳನ್ನು ಹೆಚ್ಚಿನ ದರದಲ್ಲಿ ಮಾರಿದರೆ ರಸಗೊಬ್ಬರ ನಿಯಂತ್ರಣ 1985 ಆದೇಶದನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ರಸಗೊಬ್ಬರ ಮಾರಾಟಗಾರರು ತಮ್ಮ ಮಾರಾಟ ಪರವಾನಿಗೆ ಪತ್ರ ನವಿಕರಿಸಿಕೊಳ್ಳಬೇಕು. ರಸಗೊಬ್ಬರ ಸೇರಿದಂತೆ ಇನ್ನಿತರ ಮಾರಾಟ ವಸ್ತುಗಳ ಬೆಲೆಯನ್ನು ರೆಟ್‌ ಬೊರ್ಡ್‌ನಲ್ಲಿ ನಮೂದಿಸಬೇಕು. ಇದರಿಂದ ವ್ಯಾಪಾರಸ್ಥ ಮತ್ತು ರೈತರ ಮಧ್ಯೆ ಯಾವುದೇ ತಕರಾರು ಬರುವುದಿಲ್ಲ ಎಂದು ಹೇಳಿದರು. ರಸಗೊಬ್ಬರ ಮಾರಾಟಗಾರರು ಗುಣಮಟ್ಟದ ಬಿತ್ತನೆ ಬೀಜಗಳನ್ನು, ರಸಗೊಬ್ಬರ, ಕ್ರೀಮಿನಾಶಕ ಔಷ ಧಗಳನ್ನು ಮಾರಾಟ ಮಾಡಬೇಕು. ಸಾವಯವ ಗೊಬ್ಬರವೆಂದು ರಾಸಾಯನಿಕ ಔಷ ಧ ಮಾರಾಟ ಮಾಡಿದಲ್ಲಿ, ಅನ  ಧಿಕೃತ ಬೀಜ, ರಸಗೊಬ್ಬರ ಮಾರಾಟ ಮಾಡಿದಲ್ಲಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು. ನಂತರ ರಸಗೊಬ್ಬರ ದಾಸ್ತಾನಿನ ಗೊದಾಮಿಗೆ ಭೇಟಿ ನೀಡಿ ದಾಸ್ತಾನಿನ ವಿವರ ಪಡೆದರು.

ಆಲಮೇಲ: ಆಲಮೇಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿ ಕಾರಿ ಯಾಸ್ಮಿನ್‌ ಮೊಕಾಶಿ ಅವರು ಪಟ್ಟಣದಲ್ಲಿರುವ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ದಿಢೀರ್‌ ಭೇಟಿ ನೀಡಿ ದಾಸ್ತಾನಿನ ಬಗ್ಗೆ ಪರಿವೀಕ್ಷಣೆ ಮಾಡಿದರು. ನಂತರ ಮಾತನಾಡಿದ ಅವರು, ಮುಂಗಾರು ಹಂಗಾಮಿಗಾಗಿ ರೈತರಿಗೆ ಗುಣಮಟ್ಟದ ಕೀಟನಾಶಕ, ಬೀಜ, ರಸಗೊಬ್ಬರ ದೊರೆಯಬೇಕು ಎನ್ನುವುದು ಸರ್ಕಾರ ಮತ್ತು ಕೃಷಿ ಇಲಾಖೆ ಉದ್ದೇಶವಾಗಿದೆ.

Advertisement

ಈ ಉದ್ದೇಶದ ದುರ್ಬಳಕೆ ಮಾಡಿಕೊಳ್ಳದೇ ನಕಲಿ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದ ಉತ್ಪನ್ನಗಳು ಎಂದು ನಂಬಿಸಿ ರೈತರಿಗೆ ಮೋಸ ಮಾಡಬಾರದು. ರೈತರಿಗೆ ರಸಗೊಬ್ಬರಗಳನ್ನು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿರುವುದು ಇಲಾಖೆ ಗಮನಕ್ಕೆ ಬಂದರೆ ಅಂಥ ಅಂಗಡಿಗಳ ಪರವಾನಿಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು. ನಂತರ ರಸಗೊಬ್ಬರ ದಾಸ್ತಾನಿನ ಗೊದಾಮಿಗೆ ಭೇಟಿ ನೀಡಿ ದಾಸ್ತಾನಿನ ವಿವರ ಪಡೆದರು.

ದೇವರಹಿಪ್ಪರಗಿ: ದೇವರಹಿಪ್ಪರಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿ ಕಾರಿ ಸೋಮನಗೌಡ ಬಿರಾದಾರ ಪಟ್ಟಣದಲ್ಲಿರುವ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಂತರ ಮಾತನಾಡಿದ ಅವರು, ರಸಗೊಬ್ಬರ ಅಂಗಡಿಯಲ್ಲಿ ರಸಗೊಬ್ಬರ ಬೆಲೆಯ ನಾಮಫಲಕದ ಮೇಲೆ ನಮೂದಿಸಬೇಕು. ರೈತರು ಖರೀದಿಸುವ ರಸಗೊಬ್ಬರಕ್ಕೆ ರಸೀದಿ ನೀಡಬೇಕು. ನಿಗದಿತ ಬೆಲೆಗಿಂತ ಹೆಚ್ಚಿನ ಹಣ ರೈತರಿಂದ ವಸೂಲಿ ಮಾಡಿದರೆ, ರೈತಾಪಿ ವರ್ಗದಿಂದ ಕೃಷಿ ಇಲಾಖೆಗೆ ದೂರು ಬಂದಲ್ಲಿ ಅಂಥ ಅಂಗಡಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next