Advertisement

“ಕಲಬೆರಕೆ ಉತ್ಪನ್ನ ಮಾರಾಟ ಮಾಡಿದರೆ ಕ್ರಮ’

10:12 PM Nov 12, 2020 | mahesh |

ಉಡುಪಿ: ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಕಲಬೆರಕೆ ಉತ್ಪನ್ನಗಳ ತಯಾರಕರು ಸೇರಿದಂತೆ ಮಾರಾಟಗಾರರ ಮೇಲೆ ಕಾನೂನಿನ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿ.ಪಂ.ನ ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಹಾರ ಸುರಕ್ಷೆಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಪರವಾನಿಗೆ ಕಡ್ಡಾಯ
ಆಹಾರ ಉದ್ಯಮಿಗಳು ತಮ್ಮ ಆಹಾರ ತಯಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಎಫ್.ಎಸ್‌.ಎಸ್‌.ಐ. ಅಡಿಯಲ್ಲಿ ತಪ್ಪದೇ ಕಾನೂನಿನ ಅನ್ವಯ ನೋಂದಣಿ ಮಾಡಿ ಪರವಾನಿಗೆ ಪಡೆಯಬೇಕು. ಕಾಂಡಿಮೆಂಟ್ಸ್‌ ತಯಾರಕರು ಹಾಗೂ ಚಿಲ್ಲರೆ ವ್ಯಾಪಾರಿಗಳು ತಪ್ಪದೇ ತಯಾರಿಸಿದ ದಿನಾಂಕ ಹಾಗೂ ಬಳಕೆ ಅವಧಿ ಮುಗಿಯುವ ಅವಧಿಯ ದಿನಾಂಕಗಳನ್ನು ಟ್ರೇನಲ್ಲಿ ಪ್ರದರ್ಶಿಸಬೇಕು. ತಪ್ಪಿದ್ದಲ್ಲಿ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಹೇಳಿದರು.

ಪರಿಶೀಲನೆ ನಡೆಸಿ
ಜಿಲ್ಲೆಗೆ ಹೊರಗಿನಿಂದ ಬರುವ, ಇಲ್ಲಿಂದ ಹೋಗುವ ಮೀನುಗಳು ಕೆಡದಂತೆ ಮಾಡಲು ರಾಸಾಯನಿಕಗಳನ್ನು ಬಳಸುತ್ತಿರುವ ಬಗ್ಗೆ ಕೇಳಿ ಬರುತ್ತಿದ್ದು, ಅಧಿಕಾರಿಗಳು ಆ ಮೀನುಗಳನ್ನು ಪರೀಕ್ಷೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಗನವಾಡಿಯಲ್ಲಿ ವಿತರಿಸುವ ಆಹಾರ, ಬೀದಿ ಬದಿ, ಹೊಟೇಲ್‌ಗ‌ಳಲ್ಲಿ ಸ್ವತ್ಛತೆ, ಆಹಾರ ತಯಾರಿಕೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಕರಿದ ಎಣ್ಣೆ ಮರುಬಳಕೆ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ವೈ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಸುಧೀರ್‌ ಚಂದ್ರ ಸೂಡ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ವಾಸುದೇವ, ಹಿರಿಯ ಆಹಾರ ಸುರಕ್ಷಿತ ಅಧಿಕಾರಿ ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು.

ನೋಂದಣಿ ಅಗತ್ಯ
ಪ್ರಸಾದ ವಿನಿಯೋಗ ಮಾಡುವ ಆರಾಧನಾ ಲಯಗಳು ಕಡ್ಡಾಯವಾಗಿ ನೋಂದಣಿ ಮಾಡು ವುದರೊಂದಿಗೆ ಪರವಾನಿಗೆ ಪಡೆಯಬೇಕು. ಪ್ರಸಾದ ತಯಾರಿಕಾ ಕೋಣೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಯಾವುದೇ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next