Advertisement

ಹಬ್ಬಗಳ ಹಿನ್ನೆಲೆ ಅಡುಗೆ ಎಣ್ಣೆ ದರ ಇಳಿಕೆ

08:31 AM Sep 12, 2021 | Team Udayavani |

ಹೊಸದಿಲ್ಲಿ: ಹಬ್ಬಗಳ ಋತುವಿನಲ್ಲಿ ಅಡುಗೆ ಎಣ್ಣೆಗಳ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸುವುದಕ್ಕಾಗಿ ಕೇಂದ್ರ ಸರಕಾರವು ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಆಮದು ಸುಂಕವನ್ನು ಶೇ. 2.11ರಷ್ಟು ಕಡಿಮೆ ಮಾಡಿದೆ. ಸುಂಕ ಇಳಿಕೆಯಿಂದಾಗಿ ಪ್ರತೀ ಲೀಟರ್‌ ಅಡುಗೆ ಎಣ್ಣೆಯ ಬೆಲೆ 4 ರೂ.ಗಳಿಂದ 5 ರೂ.ಗಳ ವರೆಗೆ ಕಡಿಮೆಯಾಗಲಿದೆ.

Advertisement

ಇದರಿಂದ ಕೇಂದ್ರ ಸರಕಾರಕ್ಕೆ 1,100 ಕೋಟಿ ರೂ. ಆದಾಯ ನಷ್ಟವಾಗಲಿದೆ ಎಂದು ಕೇಂದ್ರ ಆಹಾರ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಮೂರು ಕಚ್ಚಾ ಮತ್ತು ಸಂಸ್ಕರಿತ ದರ್ಜೆಯ ಎಣ್ಣೆಗಳ ಆಮದು ಸುಂಕ ತಗ್ಗಿಸಲಾಗಿದೆ.

ವಿತ್ತ ಸಚಿವಾಲಯದ ಪ್ರಕಟನೆಯ ಪ್ರಕಾರ ಕಚ್ಚಾ ತಾಳೆ ಎಣ್ಣೆಯ ಆಮದು ಸುಂಕವನ್ನು ಶೇ. 10ರಿಂದ ಶೇ. 2.5ಕ್ಕೆ, ಕಚ್ಚಾ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಆಮದು ಸುಂಕವನ್ನು ಶೇ. 7.5ರಿಂದ ಶೇ. 2.5ಕ್ಕೆ ಇಳಿಕೆ ಮಾಡಲಾಗಿದೆ.

ಈ ಕ್ರಮದಿಂದ ತಾಳೆ ಎಣ್ಣೆ, ಸೋಯಾಬೀನ್‌  ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಬೆಲೆ ಶೇ. 24.75ರಷ್ಟು ಕಡಿಮೆಯಾಗುವ ನಿರೀಕ್ಷೆಯನ್ನು ಸರಕಾರ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next