Advertisement

ಶಾಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕ್ರಮ

02:15 PM Dec 08, 2020 | Suhan S |

ಮಂಡ್ಯ: ತಾಲೂಕಿನ ಮೂರು ಶಾಲೆಗಳನ್ನು ಶಾಸಕ ಎಂ.ಶ್ರೀನಿವಾಸ್‌ ಅವರು ದತ್ತು ಪಡೆದಿದ್ದು, 2020-21ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.

Advertisement

ಮಂಡ್ಯ ನಗರದ ಅರ್ಕೇಶ್ವರ ನಗರದ ಗುತ್ತಲು ಕಾಲೋನಿಯ ಕರ್ನಾಟಕ ಪಬ್ಲಿಕ್‌ ಶಾಲೆ, ತಾಲೂಕಿನ ಬಿ.ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಶಿವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ದತ್ತು ಪಡೆಯಲಾಗಿದೆ.

920 ವಿದ್ಯಾರ್ಥಿಗಳು: ಮೂರು ಶಾಲೆಗಳಿಂದ ಒಟ್ಟು 920 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಗುತ್ತಲು ಕಾಲೋನಿಯಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ 1ರಿಂದ 12ರವರೆಗೆ 740 ವಿದ್ಯಾರ್ಥಿಗಳು, ಬಿ.ಹೊಸೂರು ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 104 ಹಾಗೂ ಶಿವಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ 8ರಿಂದ10ರವರೆಗೆ76 ವಿದ್ಯಾರ್ಥಿಗಳಿದ್ದಾರೆ.

ಶಾಲಾ ಕಟ್ಟಡಗಳ ಸ್ಥಿತಿ ಉತ್ತಮ: ಮೂರು ಶಾಲೆಗಳ ಕಟ್ಟಡಗಳ ಸ್ಥಿತಿ ಉತ್ತಮವಾಗಿದೆ. ನಗರದ ಕರ್ನಾಟಕ ಪಬ್ಲಿಕ್‌ ಶಾಲೆಗೆ10ಕೊಠಡಿಗಳ ಅಗತ್ಯವಿದೆ. ಶಾಸಕರೇ ಖುದ್ದಾಗಿ ತಮ್ಮ ಸ್ವಂತ ಖರ್ಚಿನಲ್ಲಿ 6 ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಜತೆಗೆ ಕೆಲವು ಕೊಠಡಿಗಳ ದುರಸ್ತಿ ಆಗಬೇಕಾಗಿದೆ. ಉಳಿದ ಎರಡು ಶಾಲೆಗಳಲ್ಲಿ ಕೊಠಡಿಗಳು ಉತ್ತಮವಾಗಿದ್ದು, ಆದರೆ ಶಿವಪುರ ಶಾಲೆಯಕೊಠಡಿಗಳಿಗೆ ಚುರಕಿ ಹಾಕಿಸಬೇಕಿದೆ.

ಮೂರು ಶಾಲೆಗಳಿಗಿಲ್ಲ ಕಾಂಪೌಂಡ್‌: ಮೂರು ಶಾಲೆಗಳಿಗೆ ಕಾಂಪೌಂಡ್‌ಗಳಿಲ್ಲ. ಕಾಂಪೌಂಡ್‌ ನಿರ್ಮಾಣಕ್ಕಾಗಿ ಅನುದಾನದ ಅಗತ್ಯವಿದೆ. ಕುಡಿಯುವ ನೀರಿನ ಸೌಲಭ್ಯವಿದ್ದು, ಹೈಟೆಕ್‌ ಶೌಚಾಲಯ ನಿರ್ಮಾಣ ಮಾಡಬೇಕಾಗಿದೆ. ಗುತ್ತಲುಕರ್ನಾಟಕ ಪಬ್ಲಿಕ್‌ ಶಾಲೆಗೆ ಅಗತ್ಯವಾಗಿ ಕಾಂಪೌಂಡ್‌ ನಿರ್ಮಾಣ ಅಗತ್ಯವಿದ್ದು, ರಾತ್ರಿ ವೇಳೆ ಪುಂಡರ ಹಾವಳಿಗೆ ಕಡಿವಾಣ ಹಾಕಬೇಕಾಗಿದೆ. ಶಿವಪುರ ಶಾಲೆಗೆ ಶಾಸಕರೇ ಖುದ್ದಾಗಿ ಕಾಂಪೌಂಡ್‌ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಿದ್ದಾರೆ.

Advertisement

ಅಗತ್ಯ ಶಿಕ್ಷಕರು: ಮೂರು ಶಾಲೆಗಳಲ್ಲಿ ಅಗತ್ಯ ಶಿಕ್ಷಕರಿದ್ದಾರೆ. ಗುತ್ತಲು ಶಾಲೆಯಲ್ಲಿ 10 ಮಂದಿ ಶಿಕ್ಷಕರಿದ್ದಾರೆ. ಇದರಲ್ಲಿ ದೈಹಿಕ ಶಿಕ್ಷಕರಿದ್ದಾರೆ. ಬಿ.ಹೊಸೂರು ಶಾಲೆಯಲ್ಲೂ ದೈಹಿಕ ಶಿಕ್ಷಕರು ಸೇರಿದಂತೆ 6 ಮಂದಿ ಶಿಕ್ಷಕರಿದ್ದರೆ, ಶಿವಪುರ ಶಾಲೆಯಲ್ಲಿ 6 ಮಂದಿ ಶಿಕ್ಷಕರಿದ್ದು, ದೈಹಿಕ, ಸಂಗೀತ ಹಾಗೂ ಹಿಂದಿ ಶಿಕ್ಷಕರ ಹುದ್ದೆಗಳು ಖಾಲಿ ಇದೆ.

ಗುಣಮಟ್ಟದ ಶಿಕ್ಷಣ: 3 ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಅದರಂತೆ ಶಿವಪುರ ಹಾಗೂ ಗುತ್ತಲು ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿದೆ.

ಕ್ರೀಡಾಂಗಣ ಅಭಿವೃದ್ಧಿ ಅಗತ್ಯ: ಮೂರು ಶಾಲೆಗಳಲ್ಲಿ ವಿಸ್ತೀರ್ಣವಾದ ಕ್ರೀಡಾಂಗಣವಿದೆ. ಆದರೆ, ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗಿಲ್ಲ. ಕ್ರೀಡಾಂಗಣದ ಸ್ವಚ್ಛತೆ,  ಅಗತ್ಯಕ್ರೀಡಾ ಸಾಮಗ್ರಿ,ಹಳ್ಳ ಗುಂಡಿಗಳನ್ನು ಮುಚ್ಚಿಸಿ ಸಮತಟ್ಟು ಮಾಡಬೇಕಾಗಿದೆ. ಮೂರು ಶಾಲೆಗಳವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಗುತ್ತಲುಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಗ್ರಂಥಾಲಯ ವಿದೆ. ಆದರೆ, ಇನ್ನುಳಿದ ಬಿ.ಹೊಸೂರು ಹಾಗೂ ಶಿವಪುರ ಶಾಲೆಯಲ್ಲಿ ಪ್ರತ್ಯೇಕ ಕೊಠಡಿಗಳಿಲ್ಲ. ಈ ಎರಡು ಶಾಲೆಗಳಿಗೆ ಗ್ರಂಥಾಲಯ ಅಗತ್ಯವಾಗಿದೆ.

ಬಿಸಿಯೂಟದ ವ್ಯವಸ್ಥೆ ಉತ್ತಮ: ಮೂರು ಶಾಲೆಗಳಲ್ಲಿ ಎಸ್‌ಡಿಎಂಸಿ ಇದ್ದು, ಸಕ್ರಿಯವಾಗಿವೆ. ಗುತ್ತಲು ಕರ್ನಾಟಕ ಪಬ್ಲಿಕ್‌ ಶಾಲೆಗೆ ಶಾಸಕರೇ ಅಧ್ಯಕ್ಷರಾಗಿದ್ದರೆ, ಉಳಿದ ಎರಡು ಶಾಲೆಗಳಲ್ಲಿ ಪೋಷಕರು ಅಧ್ಯಕ್ಷರಾಗಿದ್ದು, ಶಾಲೆಯ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಹಕಾರನೀಡುತ್ತಿದ್ದಾರೆ. ಮೂರು ಶಾಲೆ ಗಳಲ್ಲಿ ಬಿಸಿಯೂಟದ ವ್ಯವಸ್ಥೆ ಉತ್ತಮವಾಗಿದೆ. ಮಕ್ಕಳ ಅಡುಗೆಗೆ ಪ್ರತ್ಯೇಕ ಕೊಠಡಿಗಳಿದ್ದು, ಪ್ರತಿ ದಿನ ಮಕ್ಕಳಿಗೆ ಗುಣಮಟ್ಟದ ಊಟ ನೀಡಲಾಗುತ್ತಿದೆ.

ಸಮಗ್ರ ಅಭಿವೃದ್ಧಿಗೆ ಆದ್ಯತೆ :  ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮೂರುಶಾಲೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲು ಸಂಕಲ್ಪಮಾಡಿದ್ದೇನೆ. ಅದಕ್ಕಾಗಿಅನುದಾನ ಕೊರತೆಇದೆ.ಅನುದಾನಬಿಡುಗಡೆಯಾದಂತೆಶಾಲೆಗಳನ್ನುಅಭಿವೃದ್ಧಿಪಡಿಸುತ್ತೇನೆ.ಈ ಮೂರು ಶಾಲೆಗಳನ್ನುಮಾದರಿ ಶಾಲೆಯ ಗುರಿಹೊಂದಿದ್ದೇನೆ.ಶಾಲೆಗೆ ಬೇಕಾದ ಅಗತ್ಯ ಮೂಲ ಸೌಲಭ್ಯಗಳಾದ ಕುಡಿಯುವ ನೀರು ಹೈಟೆಕ್ ‌ಶೌಚಾಲಯ, ಕ್ರೀಡಾಂಗಣಅಭಿವೃದ್ಧಿ,  ಕೊಠಡಿಗಳ ದುರಸ್ತಿ ಮಾಡಲಾಗುವುದು ಎಂದು ಶಾಸಕಎಂ.ಶ್ರೀನಿವಾಸ್‌ ತಿಳಿಸಿದ್ದಾರೆ.

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next