Advertisement

ಮೀನುಗಾರರ ಮನೆಗಳ ರಕ್ಷಣೆಗೆ ಕ್ರಮ: ಕೋಟ

07:53 AM Jun 22, 2020 | mahesh |

ಉಳ್ಳಾಲ: ಉಳ್ಳಾಲದಿಂದ ಕಾರವಾರ ವರೆಗಿನ 320 ಕಿ.ಮೀ. ಕಡಲ ತಡಿಯಲ್ಲಿ ಕಡಲಿನ ಪ್ರಕ್ಷುಬ್ಧತೆ ಅಧಿಕವಾಗಿರುವುದರಿಂದ ಅತ್ಯಂತ ಹೆಚ್ಚು ಹಾನಿಗೀಡಾದ ಪ್ರದೇಶಗಳನ್ನು ಗುರುತಿಸಿ ತುರ್ತು ತಡೆಗೋಡೆ ನಿರ್ಮಿಸಲು ಆದೇಶ ನೀಡಲಾಗಿದೆ. ಸೋಮೇಶ್ವರ ಉಚ್ಚಿಲದಲ್ಲಿ ಮೀನುಗಾರರ ಮನೆಗಳ ರಕ್ಷಣೆಗೆ ಈ ಕೂಡಲೇ ತುರ್ತು ಕಾಮಗಾರಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಸೋಮೇಶ್ವರ ಉಚ್ಚಿಲದ ಕಡಲ್ಕೊರೆತ ಪ್ರದೇಶವನ್ನು ರವಿವಾರ ವೀಕ್ಷಿಸಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಮೀನುಗಾರರು ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಮಾಡುವ ಅನಿವಾರ್ಯತೆ ಇರುವುದರಿಂದ ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳ ಜತೆಗೆ ಮಾತನಾಡಿದ್ದೇನೆ. ತುರ್ತಾಗಿ ಕಲ್ಲು ಗಳನ್ನು ಜೋಡಿಸಲು ಬೇಕಾದಂತಹ ಅನುಮತಿ ಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಅ ಧಿಕಾರಿಗಳನ್ನು ಕರೆದು ಯಾವುದೇ ಮೀನುಗಾರರಿಗೆ ತೊಂದರೆಯಾಗದಂತೆ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ಕೊಡಲಾಗಿದೆ ಎಂದರು.

ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ ಪಂಡಿತ್‌ ಹೌಸ್‌, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಕಾರ್ಯದರ್ಶಿ ಸತೀಶ್‌ ಕುಂಪಲ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಪಕ್ಷದ ನಾಯಕರಾದ ಚಂದ್ರಶೇಖರ ಉಚ್ಚಿಲ, ಚಂದ್ರಹಾಸ ಅಡ್ಯಂತಾಯ, ರವಿಶಂಕರ ಸೋಮೇಶ್ವರ, ನವೀನ್‌ ಪಾದಲ್ಪಾಡಿ, ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ವಾಣಿ ವಿ. ಆಳ್ವ, ಅಧ್ಯಕ್ಷ ರಾಜೇಶ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next