ಕಲಬುರಗಿ: ಆನೆ ದಾಳಿಯಿಂದ ಜನರು ಸಾವನ್ನಪ್ಪುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಹೀಗಾಗಿ ಆನೆ ದಾಳಿ ತಡೆಯಲು ಇಲಾಖೆಯಿಂದ ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಅರಣ್ಯ ನೌಕರರ ಸಂಘದ ದಿನದರ್ಶಿಕೆ, ಡೈರಿ ಬಿಡುಗಡೆಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಆನೆಕಲ್ ದಲ್ಲಿ ಆನೆ ತುಳಿತದಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಆನೆ ದಾಳಿಯಿಂದ ಜನರ ಸಾವಿನ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚನೆ ಮಾಡಲಾಗುತ್ತದೆ. ವರದಿ ಸಂಗ್ರಹಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ.ಪ್ರಮುಖವಾಗಿ
ಆನೆ ಕಾರಿಡರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ, ತತಕ್ಷಣ ಯಾವುದೇ ಕೆಲಸ ಆಗುವುದಿಲ್ಲ. ಆನೆ ದಾಳಿ ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡುವ ಸಲಹೆ ಬಂದಿದೆ ಎಂದು ವಿವರಣೆ ನೀಡಿದರು.
30 ಕಿಮೀ ರೈಲ್ವೆ ಕಿಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುಮೋದನೆ ಕೊಟ್ಟಿದ್ದೇವೆ. ಇನ್ನೂ 300 ಕಿಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುಮೋದನೆ ಕೊಡುತ್ತೇವೆ. ರೈಲ್ವೆ ಕಂದಕ, ಸೋಲಾರ್ ಫಿನಿಷಿಂಗ್ ನಿರ್ಮಾಣ ಮಾಡುತ್ತಿದ್ದೇವೆ. ಆನೆ ಕಾರ್ಯಪಡೆಗೆ ಎಲ್ಲಾ ರೀತಿಯ ತರಬೇತಿ ನೀಡಿ ಆನೆ ದಾಳಿ ತಡೆಯಲು ಕ್ರಮ ಕೈಗೊಳ್ಳುತ್ತೇವೆ. ಅಗತ್ಯ ಸಲಕರಣೆಗಳು ನೀಡಿ ಸೋಷಿಯಲ್ ಮೀಡಿಯಾ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಆನೆ ದಾಳಿಯಿಂದ ಮೃತಪಟ್ಟರೆ 15 ಲಕ್ಷ ರೂಪಾಯಿ ಪರಿಹಾರ ಕೊಡಲಾಗಿದೆ. ಸಿಬ್ಬಂದಿಗಳು ಮೃತಪಟ್ಟರೆ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಹೊರಗುತ್ತಿಗೆ ನೌಕರರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಸಚಿವ ಖಂಡ್ರೆ ತಿಳಿಸಿದರು.
ಎಲ್ಲ ಪೀಠಗಳು ನಮಗೆ ಪವಿತ್ರ:
ಎಲ್ಲಾ ಪೀಠಗಳು ನಮಗೆ ಅತ್ಯಂತ ಪವಿತ್ರವಾದವು. ರಂಭಾಪುರಿ ಜಗದ್ಗುರುಗಳ ಕಾರಿನ ಮೇಲೆ ಚಪ್ಪಲಿ ಎಸೆತ ಘಟನೆಯನ್ನ ತೀವ್ರವಾಗಿ ಖಂಡಿಸುತ್ತೇವೆ.ಯಾವುದೇ ಭಕ್ತಾದಿಗಳು ಸಮಸ್ಯೆ ಇದ್ದರೆ ಪೂಜ್ಯರ ಜೊತೆ ಸಮಾಲೋಚನೆ ಮಾಡಬೇಕಿತ್ತು. ಹಿಂಸೆಗೆ ಇಳಿದು ಅವರಿಗೆ ಅಪಮಾನ ಮಾಡುವುದು ಸಹಿಸಿಕೊಳ್ಳೊಕೆ ಆಗುವುದಿಲ್ಲ. ಕೃತ್ಯ ಎಸಗಿಸವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.
ಕಮಲ್‌ನಾಥ್ ಕಾಂಗ್ರೆಸ್ ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಖಂಡ್ರೆ,ಬರೋರು ಬರ್ತಾರೆ. ಹೋಗೋರು ಹೋಗ್ತಾರೆ.. ಕೋಟ್ಯಾಂತರ ಕಾರ್ಯಕರ್ತರು ಪಕ್ಷದಲ್ಲಿದ್ದಾರೆ. ಪಕ್ಷಕ್ಕೆನು ನಷ್ಟವಿಲ್ಲ. ನಾವ್ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.