Advertisement
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‌ರಾಜ್ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಸ್ವತ್ಛ ಸರ್ವೇಕ್ಷಣ ಗ್ರಾಮೀಣ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
2008ರಲ್ಲಿ ರಾಷ್ಟ್ರೀಯ ಕಾನೂನು ಆಯೋಗವು ಗ್ರಾಮ ನ್ಯಾಯಾ ಲಯಗಳನ್ನು ಸ್ಥಾಪಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಅದರಂತೆ ಕಾಯ್ದೆಯೊಂದನ್ನು ತರ ಲಾಗಿದ್ದು, ರಾಷ್ಟ್ರಪತಿಗಳ ಅಂಕಿತ ಬೀಳಬೇಕಿದೆ. ರಾಜ್ಯದಲ್ಲಿ 2 ಅಥವಾ 3 ಗ್ರಾ.ಪಂ.ಗೊಂದು ಗ್ರಾಮ ನ್ಯಾಯಾಲಯ ಸ್ಥಾಪಿಸುವ ಪ್ರಸ್ತಾವನೆ ಇದೆ. ಈ ಪ್ರಕಾರ ಹಂತ ಹಂತವಾಗಿ ಸರಿಸುಮಾರು 2 ಸಾವಿರ ಗ್ರಾಮ ನ್ಯಾಯಾಲಯಗಳು ರಚನೆಯಾಗ ಲಿದ್ದು, ಸ್ಥಳೀಯ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಗ್ರಾಮಸ್ಥರು ನಗರಗಳಿಗೆ ಅಲೆದಾಡುವುದು ತಪ್ಪ ಬೇಕು, ತ್ವರಿತಗತಿಯಲ್ಲಿ ನ್ಯಾಯ ಸಿಗಬೇಕು ಎಂಬುದು ಇದರ ಉದ್ದೇಶ. ಯಾವುದೇ ಪ್ರಕರಣವನ್ನು 3ಕ್ಕಿಂತ ಹೆಚ್ಚು ಬಾರಿ ಮುಂದೂಡ ಬಾರದು, 6 ತಿಂಗಳೊಳಗಾಗಿ ಇತ್ಯರ್ಥ ಪಡಿಸಬೇಕು, ಈ ಮೂಲಕ ಗ್ರಾಮ ಗಳನ್ನು ವ್ಯಾಜ್ಯ ಮುಕ್ತ ಮಾಡಬೇಕು ಎಂಬ ದೂರದೃಷ್ಟಿಯನ್ನು ಇರಿಸಿಕೊಳ್ಳಲಾಗಿದೆ.
Related Articles
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಪಂಚಾಯತ್‌ಗಳಿಗೆ ಹೊಣೆಗಾರಿಕೆ ತರುವ ಸಲುವಾಗಿ ಪಂಚತಂತ್ರ-2 ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು, ಸಂಪನ್ಮೂಲ ಕ್ರೋಡೀಕರಣಕ್ಕೂ ಒತ್ತು ನೀಡಲಾಗುತ್ತಿದೆ. ಎಲ್ಲರ ಸಲಹೆ ಪಡೆದು ಪಂಚಾಯತ್ ವ್ಯವಸ್ಥೆಯನ್ನು ಬಲಗೊಳಿಸಲಾಗುತ್ತಿದೆ. ಪಂಚಾ ಯತ್‌ರಾಜ್ ಕಾಯ್ದೆ ಜಾರಿಗೆ ಬಂದು 30 ವರ್ಷಗಳು ಕಳೆದಿರುವುದರಿಂದ ಮುಂದಿನ ತಿಂಗಳು ಇದರ ಸಂಭ್ರಮಾ ಚರಣೆ ನಡೆಸಲಾಗುತ್ತದೆ. ಪಿಡಿಒಗಳ ವರ್ಗಾವಣೆಗೂ ಕೌನ್ಸೆಲಿಂಗ್ ಪದ್ಧತಿ ಅನುಸರಿಸಲು ಸರಕಾರ ಇರಾದೆ ಹೊಂದಿದೆ. ಪಂಚಾಯತ್ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳಾಗಿ ಉನ್ನತ ಮಟ್ಟಕ್ಕೇರಿಸಲಾಗುತ್ತಿದೆ. ಇದೆಲ್ಲದರೊಂದಿಗೆ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಲು ಪಂಚಮಿತ್ರ ಸಹಾಯವಾಣಿಯನ್ನು 2 ತಿಂಗಳಲ್ಲಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳ ಲಾಗುತ್ತಿದ್ದು, ಇದರಿಂದ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement