Advertisement

ಕುಡಿಯುವ ನೀರಿನ ಯೋಜನೆ ಜಾರಿಗೆ ಕ್ರಮ

02:26 PM Oct 30, 2021 | Team Udayavani |

ಮರಿಯಮ್ಮನಹಳ್ಳಿ: ಪಟ್ಟಣಕ್ಕೆ ಪ್ರತ್ಯೇಕ ಕುಡಿಯುವ ನೀರಿನ ಯೊಜನೆ ಜಾರಿಗೆತರಲು ಪ್ರಯತ್ನಿಸಲಾಗುವುದು ಎಂದು ವಿಜಯನಗರ ಜಿಲ್ಲೆ ಜಿಲ್ಲಾಧಿ ಕಾರಿಅನಿರುದ್ಧ ಶ್ರವಣ್‌ ಹೇಳಿದರು.

Advertisement

ಅವರು ಶುಕ್ರವಾರ ಪಟ್ಟಣ ಪಂಚಾಯಿತಿಯಲ್ಲಿ 15ನೇ ಹಣಕಾಸಿನಯೋಜನೆಯ 2021-22ನೇಸಾಲಿನಲ್ಲಿ ಕೈಗೊಳ್ಳಬೇಕಾಗಿರುವ 1 ಕೋಟಿ 13 ಲಕ್ಷ ರೂ. ಮೊತ್ತದಕಾಮಗಾರಿಗಳ ಬಗ್ಗೆ ಪರಿಶೀಲಿಸಲು ಭೇಟಿ ನೀಡಿ ಮಾತನಾಡಿದರು.

ಪಟ್ಟಣ ಪಂಚಾಯಿತಿಗೆಬೇಕಾಗಿರುವ ಕುಡಿಯುವ ನೀರಿನಯೋಜನೆ ಬಗ್ಗೆ ಮನವಿಗಳು ನಮ್ಮ ಗಮನಕ್ಕೆ ಬಂದಿವೆ.ಮುಂದಿನ ದಿನಮಾನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ಪಟ್ಟಣ ಪಂಚಾಯಿತಿಯಲ್ಲಿ ಕಾಯಂ ಇಂಜಿನಿಯರ್‌ ಹಾಗೂಸಿಬ್ಬಂದಿ ಕೊರತೆಯಿದೆ. ಅದನ್ನು ಹಂತಹಂತವಾಗಿ ಸಿಬ್ಬಂದಿಗೆ ಕೊಡಲಾಗುವುದು. ಕೊರೊನಾ ಲಸಿಕೆ ನಮ್ಮ ಜಿಲ್ಲೆಯಲ್ಲಿ ಸುಮಾರು ಶೇ.85ರಷ್ಟು ಜನರಿಗೆ ಮೊದಲ ಡೋಸ್‌ ಹಾಕಲಾಗಿದೆ ಆಗಿದೆ. ಇನ್ನೂ ಹೆಚ್ಚುಹೆಚ್ಚು ಲಸಿಕೆಗಳನ್ನು ತ್ವರಿತಗತಿಯಲ್ಲಿ ಹಾಕಲಾಗುವುದು ಎಂದರು.

ವಿವಿಧ ಸ್ಥಳಗಳಿಗೆ ಭೇಟಿ: ಪಟ್ಟಣದ ಖ್ಯಾತ ಜನಪದ ಕಲಾವಿದೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜುಮ್ಮ ಜೋಗತಿ ಅವರ ಮನೆಗೆ ಭೇಟಿನೀಡಿ ಅಲ್ಲಿನ ವಾರ್ಡಿನ ಸಮಸ್ಯೆಗಳನ್ನು ಆಲಿಸಿದರು.

Advertisement

ಶಾಲಾ ಆವರಣದಲ್ಲಿ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಮಾತನಾಡಿ ವಿಚಾರಿಸಿದರು. 8ನೇ ವಾರ್ಡಿನಲ್ಲಿರುವ ಬಾಲಕರ ಹಾಸ್ಟೆಲ್‌ಗೆ ಭೇಟಿನೀಡಿ ಮಕ್ಕಳೊಂದಿಗೆ ಚರ್ಚಿಸಿದರು. ನಗರೋತ್ಥಾನ ಅನುದಾನದಲ್ಲಿ ನಿರ್ಮಿಸಿ ಬಳಕೆಯಾಗದೇ ನಿಂತಿರುವ ನೀರಿನ ಟ್ಯಾಂಕ್‌ ಪರಿಶೀಲಿಸಿದರು.

ಹೊಸಪೇಟೆ ತಹಸೀಲ್ದಾರ್‌ ಎಚ್‌. ವಿಶ್ವನಾಥ, ಮುಖ್ಯಾಧಿಕಾರಿ ಫಕೃದ್ದೀನ್‌, ಕಂದಾಯ ನಿರೀಕ್ಷಕ ಅಂದಾನಗೌಡ, ಪಟ್ಟಣ ಪಂಚಾಯಿತಿ ಪ್ರಭಾರಿ ಅಭಿಯಂತರ ಮಂಜುನಾಥಪಾಟೀಲ್‌, ಸ್ಥಾಯಿ ಸಮಿತಿ ಅಧ್ಯಕ್ಷಎಸ್‌. ನವೀನ್‌ ಕುಮಾರ್‌, ಸದಸ್ಯ ಆದಿಮನಿ ಹುಸೇನ್‌ ಭಾಷಾ, ಹಿರಿಯ ಆರೋಗ್ಯ ಸಹಾಯಕಿ ಲತಾ ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next