Advertisement

ಸದಾಶಿವ ಆಯೋಗ ವರದಿ ಜಾರಿಗೆ ಕ್ರಮ

01:05 AM Jan 18, 2019 | Team Udayavani |

ಬೆಂಗಳೂರು: “ನ್ಯಾ.ಸದಾಶಿವ ಆಯೋಗ ಸಲ್ಲಿಸಿರುವ ವರದಿ ಜಾರಿ ಸಂಬಂಧ ಕಾನೂನಿನ ವ್ಯಾಪ್ತಿಯಲ್ಲಿರುವ ಗೊಂದಲ ಗಳಿಗೆ ಪರಿಹಾರ ಕಂಡುಕೊಂಡು ತಜ್ಞರೊಂದಿಗೆ ಚರ್ಚಿಸಿ ಮೀಸಲಾತಿ
ಸಂಬಂಧ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

Advertisement

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ನಡೆದ “ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ’ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. “ಬಹುದಿನದ ಬೇಡಿಕೆಯಾಗಿರುವ ನ್ಯಾ.ಸದಾಶಿವ ಆಯೋಗ ಸಲ್ಲಿಸಿರುವ ವರದಿ ಜಾರಿ ಕುರಿತಂತೆ ಈ ಹಿಂದಿನ ಎಲ್ಲ ಸರ್ಕಾರಗಳಿಗೆ ಮನವಿ ಸಲ್ಲಿಸಿರುವುದು ತಿಳಿದಿದೆ. ಸಮ್ಮಿಶ್ರ ಸರ್ಕಾರ ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಿದಟಛಿವಿದೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ನೇತೃತ್ವ ದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲು ವರದಿ ಕುರಿತು ಕಾನೂನಿನ ವ್ಯಾಪ್ತಿಯಲ್ಲಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಂಡು, ಆನಂತರ ಚರ್ಚಿಸಿ ನ್ಯಾಯ ದೊರಕಿಸಿಕೊಡಿಸ ಲಾಗುವುದು’ ಎಂದು ಭರವಸೆ ನೀಡಿದರು.

ನ್ಯಾ.ಸದಾಶಿವ ವರದಿ ಜಾರಿ ಹಾಗೂ ಸಮುದಾಯದ ಅನುದಾನ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಎಚ್‌.ಮುನಿಯಪ್ಪ ಅವರನ್ನು ಅನುಮಾನಿಸಬೇಡಿ. ಇದರಿಂದ ಅವರುಗಳ ನಡುವೆ ಒಡಕಾಗುತ್ತದೆ. ಮುಖ್ಯವಾಗಿ ಕೇಂದ್ರದಲ್ಲಿ ಅವರ ನಾಯಕತ್ವ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರದ ಮೇಲೆ ನಂಬಿಕೆ ಇಡಬೇಕು. ಇದುವರೆಗೆ ಆದಿ ಜಾಂಬವರು ತಾಳ್ಮೆಯಿಂದ ಕಾದಿದ್ದು, ಶೀಘ್ರದಲ್ಲೇ ಅವರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಲಾಗುವುದು ಎಂದರು. ಲೋಕಸಭೆ ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಜನರ ಎಲ್ಲ ಬೇಡಿಕೆ ಗಳನ್ನು ಈಡೇರಿಸಲು ನಾನೇನು ಪರಮಾತ್ಮನಲ್ಲ. ಕೇಂದ್ರದಲ್ಲಿ 524 ಸಂಸದರು, ರಾಜ್ಯ ದಲ್ಲಿ 224 ಶಾಸಕರಿದ್ದಾರೆ. ಅವರು ಯಾರೂ ಹಿಂದುಳಿದವರ, ಪರಿಶಿಷ್ಟರ ಕೆಲಸಗಳಿಗೆ ಧ್ವನಿ ಎತ್ತುತ್ತಿಲ್ಲ. ಎಲ್ಲದಕ್ಕೂ ನನ್ನ ಕಡೆಗೆ ಬೆಟ್ಟು ಮಾಡುತ್ತಾರೆ. ನಾನೇನಾದರೂ ಮುಂದೆ ಹೋದರೆ ಬಲ ನೀಡಲು ಯಾರೂ ಬರುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ವರದಿ ಜಾರಿಗೆ ವಿರೋಧವಿಲ್ಲ: ಡಿಸಿಎಂ
ಪರಿಶಿಷ್ಟರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ಮಾಡುವ ಸಲುವಾಗಿ ಸದಾಶಿವ ಆಯೋಗವನ್ನು ರಚನೆ ಮಾಡಲಾಗಿತ್ತು. ಈ ಆಯೋಗ ವರದಿ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದ ಮಟ್ಟದಲ್ಲಿ ಸಮಗ್ರವಾಗಿ ಚರ್ಚೆಯಾಗಬೇಕು. ಇದನ್ನು ಅನುಷ್ಠಾನ ಮಾಡಲು ನಮ್ಮ ವಿರೋಧವಿಲ್ಲ. ನಾವೆಲ್ಲರೂ ಇದು ಜಾರಿಯಾಗಲೇಬೇಕು ಎಂದು ಬಯಸುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

ಹಿಂದಿನ ಹಾಗೂ ಪ್ರಸ್ತುತ ಸರಕಾರ ಶೋಷಿತ ಸಮುದಾಯಗಳ ಅಭಿವೃದಿಟಛಿಗಾಗಿ ಮೊದಲ ಬಾರಿಗೆ ಜನಸಂಖ್ಯೆ ಆಧಾರದ ಮೇಲೆ ಶೇ.24.1 ರಷ್ಟು ಹಣವನ್ನು ಮೀಸಲಿಟ್ಟಿದೆ. ಅಂಬೇಡ್ಕರ್‌ ನಿಗಮ ಹಾಗೂ ಆದಿ ಜಾಂಬವ ಅಭಿವೃದಿಟಛಿ ನಿಗಮಕ್ಕೆ ತಲಾ ಒಂದು ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು

Advertisement

ಮುನಿಯಪ್ಪ- ಖರ್ಗೆ ವಾಕ್ಸಮರ
ಕಾರ್ಯಕ್ರಮದಲ್ಲಿ ಕೆ.ಎಚ್‌. ಮುನಿಯಪ್ಪ ಅವರು ಮಾತನಾಡುವ ವೇಳೆ ಸಮುದಾಯದ ಸಾಕಷ್ಟು ಮಂದಿ ನ್ಯಾ.ಸದಾಶಿವ ಆಯೋಗ ಜಾರಿಗೆ ಘೋಷಣೆ ಕೂಗುತ್ತಿದ್ದರು. ಈ ವೇಳೆ ಮುನಿಯಪ್ಪ ಅವರು ಸದಾಶಿವ ಆಯೋಗದ ವರದಿ ಜಾರಿ ಕುರಿತು ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದರು. ನಂತರ ಖರ್ಗೆಯವರು ತಮ್ಮ ಭಾಷಣದಲ್ಲಿ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ನನ್ನನ್ನು ಮುಂದೆ ನೂಕಿ ಹಿಂದೆ ಉಳಿಯುವವರಿದ್ದಾರೆ. ಪರಿಶಿಷ್ಟರ
ಪ್ರತಿಯೊಂದು ಸಮಸ್ಯೆ ಕುರಿತು ನನ್ನ ಹೆಸರು ಮಧ್ಯೆ ತರುತ್ತಾರೆ. ಇಲ್ಲಿ ಸಾಕಷ್ಟು ಜನ ಸಂಸದರು, ಶಾಸಕರು ಇದ್ದಾರೆ ಎಂದು ಮುನಿಯಪ್ಪ ವಿರುದಟಛಿ ಪರೋಕ್ಷವಾಗಿ ಅಸಮಾಧಾನ ಹೊರ
ಹಾಕಿದರು. ಇದರ ಜತೆಗೆ ಕೆಲ ಬೆಂಬಲಿಗರು ಖರ್ಗೆ ಭಾಷಣ ಮಾಡುವಾಗ ಕೂಗಾಟ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next