ಯಳಂದೂರು: ಜಿಲ್ಲೆಯ ಪ್ರಸಿದಟಛಿ ವನ್ಯ ಧಾಮ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ರಕ್ಷಿತ ಅರಣ್ಯ (ಬಿಆರ್‌ಟಿ) ಪ್ರದೇಶದಲ್ಲಿ ಲಂಟಾನ ಕಳೆಗಳನ್ನು ಬುಡಸಮೇತ ತೆಗೆದು ಆ ಸ್ಥಳದಲ್ಲಿ ಕಾಡು ಹುಲ್ಲು ಬೆಳೆಸುವ ಪ್ರಕ್ರಿಯೆ ಆರಂಭಗೊಂಡಿದೆ. ಸಸ್ಯಾಹಾರಿ ಪ್ರಾಣಿಗಳನ್ನು ಹೆಚ್ಚಿಸಿದರೆ, ಎಲ್ಲಾ ಮಾಂಸಹಾರಿ ಪ್ರಾಣಿಗಳೂ ಇಲ್ಲೇ ನೆಲೆಯಾಗುತ್ತವೆ ಎಂಬ ವೈಜ್ಞಾನಿಕ ದೃಷ್ಟಿ ಕೋನದಿಂದ ಇದನ್ನು ಬೆಳೆಸುವ ಕಾರ್ಯ ಸದ್ದಿಲ್ಲದೆ ಸಾಗಿದೆ. ಈಗ ಈ ಸ್ಥಳವೆಲ್ಲಾ ಹಸಿರು ಮಯವಾಗಿದ್ದು ವಿಶ್ವ ಪರಿಸರ ದಿನಕ್ಕೆ ಸಾಕ್ಷಿಯಾಗಿದೆ.
ಹುಲ್ಲು ಬೆಳೆಸುವಿಕೆ: ಕಾಡಿಗೆ ಕಂಟಕವಾದ ಲಂಟಾನ ಬೆಳದು ಪೊದೆಗಳಾಗಿದೆ. ಇದು ಬೆಳೆದ ಸ್ಥಳದಲ್ಲಿ ಯಾವುದೇ ಹುಲ್ಲು ಬೆಳೆ ಯುವುದಿಲ್ಲ. ಅಲ್ಲದೆ ಪ್ರಾಣಿಗಳ ಸ್ವತ್ಛಂದ ಓಡಾಟಕ್ಕೂ ತೊಡಕಾಗುತ್ತದೆ. ಇಡೀ ಕಾಡನ್ನೇ ಆವರಿಸಿರುವ ಇದನ್ನು ಹಂತಹಂತ ವಾಗಿ ತೆರವುಗೊಳಿಸಿ ಈ ಸ್ಥಳದಲ್ಲಿ ಆ ಕಾಡು ಹುಲ್ಲನ್ನು ಬೆಳೆಸುವುದು, ಆ ಮೂಲಕ ಸಸ್ಯಾಹಾರಿ ಕಾಡು ಪ್ರಾಣಿಗಳ ಸಂಖ್ಯೆಯನ್ನು ವೃದಿಟಛಿಸುವುದು ಅರಣ್ಯ ಇಲಾಖೆ ಉದ್ದೇಶವಾಗಿದೆ.
ಕಳೆದ ವರ್ಷದಿಂದಲೇ ಆಯ್ದ ಸ್ಥಳಗಳಲ್ಲಿ ನಡೆಯುತ್ತಿದೆ. ಆಗ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುವುದಿಲ್ಲ ಎಂಬ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಯಳಂದೂರು ವಲಯದಲ್ಲಿ 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಲಂಟಾನ ತೆರವುಗೊಳಿಸಿ ಹುಲ್ಲು ಬೆಳೆಸುತ್ತಿದ್ದು, ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹುಲ್ಲು ಸಮೃದವಾಗಿ ಬೆಳೆದಿದೆ.
3 ವರ್ಷ ಅರಣ್ಯ ಇಲಾಖೆ ನಿರ್ವಹಣೆ: ಬಿಆರ್‌ಟಿ ಯಳಂದೂರು ವಲಯದಲ್ಲಿ 50 ಎಕರೆ ಪ್ರದೇಶದಲ್ಲಿ ಲಂಟಾನ ಸಸಿ ತೆರವುಗೊಳಿಸಿ ಹುಲ್ಲು ಬೆಳೆಸಲಾಗುತ್ತಿದೆ. ಈ ಸ್ಥಳದಲ್ಲಿ ಮತ್ತೆ ಬೇರೆ ಸಸ್ಯಗಳು ಬೆಳೆಯದಂತೆ 3 ವರ್ಷ ಅರಣ್ಯ ಇಲಾಖೆಯೇ ನಿರ್ವಹಣೆ ಮಾಡಲಿದೆ. ಹುಲ್ಲು ಸಮೃದಟಛಿವಾಗಿ ಬೆಳೆದರೆ ಸಸ್ಯಹಾರಿ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚುತ್ತದೆ.
ಜತೆಗೆ ಮಾಂಸಹಾರಿ ಪ್ರಾಣಿಗಳ ವೃದಿಯೂ ಆಗುತ್ತದೆ. ಕಾಡಿನ ಆಹಾರ ಸರಪಳಿಗೆ ಪೂರಕವಾಗಿದೆ. ಇದರ ಪ್ರಮಾಣ ಮತ್ತಷ್ಟು ಹೆಚ್ಚಿಸುವ ಉದ್ದೇಶವೂ ಇಲಾಖೆಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಕ್ರಮ ವಹಿಸಲಾಗುವುದು ಎಂದು ಆರ್‌ಎಫ್ಒ ಮಹದೇವಯ್ಯ ತಿಳಿಸಿದ್ದಾರೆ.
* ಫೈರೋಜ್‌ಖಾನ್