Advertisement

ಅಕ್ರಮ ಚಟುವಟಿಕೆ ನಿರ್ಮೂಲನೆಗೆ ಕ್ರಮ: ನಂಜುಂಡ ಸ್ವಾಮಿ

05:50 PM Nov 22, 2020 | Suhan S |

ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣದಲ್ಲಿ ಮಿತಿ ಮೀರಿ ನಡೆಯುತ್ತಿರುವ ಮಟ್ಕಾ-ಜೂಜಾಟ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಬೇರು ಸಮೇತ ಕಿತ್ತೂಗೆಯಲು ಕ್ರಮಕೈಗೊಳ್ಳಲಾಗುವುದು ಎಂದು ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಟ್ಕಾ, ಜೂಜಾಟ, ಅಕ್ರಮಮರಳು ಸಾಗಾಣಿಕೆ ಸೇರಿದಂತೆ ಇನ್ನಿತರ ಕಾನೂನು ಬಾಹಿರಚಟುವಟಿಕೆಗಳನ್ನು ನಿರ್ಮೂಲನೆಗೊಳಿಸಲು ಕಾರ್ಯತಂತ್ರ ರೂಪಿಸಿದ್ದೇವೆ. ಜಿಲ್ಲೆಯಲ್ಲಿನಿರ್ಮಾಣಗೊಂಡಿರುವ ಹಟ್ಟಿ ಸೇರಿ ವಿವಿಧನೂತನ ಕಚೇರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಕೋವಿಡ್‌ ಅಡ್ಡಿಯಾಗಿದ್ದು, ಉದ್ಘಾಟನೆ ನೆರವೇರಿಸಲು ಸದ್ಯದಲ್ಲೇ ರಾಯಚೂರಿನಲ್ಲಿ ಸಭೆ ಕರೆಯಲಾಗುವುದು ಎಂದರು.ಹಟ್ಟಿ ಠಾಣೆ ಸೇರಿ ಹಲವೆಡೆ ಹೆಚ್ಚುವರಿ ಪಿಎಸೈ ಹಾಗೂ ಸಿಬ್ಬಂದಿಗಳ ಭರ್ತಿ ಕಾರ್ಯ ನಡೆಯಬೇಕಿದೆ. ಖಾಸಗಿ ಕಂಪನಿಗಳ ಉದ್ಯೋಗದ ಆಸೆಯಿಂದ ಕಾನ್ಸ್‌ಟೇಬಲ್‌ ಹುದ್ದೆಗೆ ಭರ್ತಿಯಾದ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಕಾನ್‌ಟೇಬಲ್‌ ಹುದ್ದೆ ಭರ್ತಿ ಮಾಡಿಕೊಂಡರು

ಸ್ಥಾನ ಭರ್ತಿಯಾಗುತ್ತಿಲ್ಲವಾದ್ದರಿಂದ ಸಿಬ್ಬಂದಿಗಳ ಕೊರತೆ ಕಾಣುತ್ತಿದೆ. ಪೇದೆ ಹುದ್ದೆಗಳ ಭರ್ತಿಗೆ ಮುಂದಾಗುತ್ತೇವೆ. ವಲಯದಲ್ಲಿ ಪೊಲೀಸ್‌ ಅಧಿ ಕಾರಿ- ಸಿಬ್ಬಂದಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ, ಕರ್ತವ್ಯ ಪಾಲನೆ, ಕಾರ್ಯ ವೈಖರಿ

ಕುರಿತು ಮೇಲಿಂದ ಮೇಲೆ ಠಾಣೆಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಲಾಗುತ್ತಿದೆ. ಇಲಾಖೆ ಜನಸ್ನೇಹಿಯಾಗಿ, ಸಾಮಾನ್ಯ ವ್ಯಕ್ತಿ ಕಚೇರಿಗೆ ನೇರವಾಗಿ ಬಂದು ನ್ಯಾಯ ಪಡೆದುಕೊಳ್ಳುವಂತಾಗಲು ಶ್ರಮವಹಿಸಿ ಬಳ್ಳಾರಿ ವಲಯವನ್ನು ಮಾದರಿ ವಲಯವನ್ನಾಗಿ ಮಾಡಲಾಗುವುದು ಎಂದರು.

ಗಣಿ ಕಂಪನಿ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ್‌, ಮುಖ್ಯ ಆಡಳಿತ ಜಾಗೃತ ಹಾಗೂ ಸುರಕ್ಷಾ ಅಧಿಕಾರಿ ವಿಶ್ವನಾಥ್‌ ನಾರಾಯಣ್‌ ಬ್ರಿಗೇಡಿಯರ್‌, ಎಸ್ಪಿ ಪ್ರಕಾಶ್‌ ನಿಕ್ಕಂ, ಹೆಚ್ಚುವರಿ ಎಸ್ಪಿ ಶ್ರೀಹರಿಬಾಬು, ಡಿವೈಎಸ್ಪಿ ಎಸ್‌.ಎಸ್‌ ಹುಲ್ಲೂರ್‌, ಸಿಪಿಐ ಮಹಾಂತೇಶ್‌ ಸಜ್ಜನ್‌ಆರ್‌.ನದಾಫ್‌, ಪಿಎಸೈ ಮುದ್ದುರಂಗಸ್ವಾಮಿ, ಚನ್ನಪ್ಪ ರಾಠೊಡ್‌, ಹುಚ್ಚರೆಡ್ಡಿ ಸೇರಿದಂತೆ ಇತರರು ಇದ್ದರು.

Advertisement

 

ಪಟ್ಟಣದ ಅಕ್ರಮಗಳ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾನೂನು ಸುವ್ಯವಸ್ಥೆ ಪಾಲನೆ ನಮ್ಮ ಆದ್ಯ ಕರ್ತವ್ಯವಾಗಿದೆ. ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸ್ಪಂದಿಸುವ ಮತ್ತು ಕಾರ್ಯನಿರ್ವಹಿಸುವ ರೀತಿ ಕುರಿತು ಪ್ರತಿ ಠಾಣೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಎಂ.ನಂಜುಂಡಸ್ವಾಮಿ, ಐಜಿಪಿ ಬಳ್ಳಾರಿ ವಲಯ

Advertisement

Udayavani is now on Telegram. Click here to join our channel and stay updated with the latest news.

Next