ಬೆಂಗಳೂರು: ನಗರದ ತಮಿಳು ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಂತ ಕವಿ ತಿರುವಳ್ಳುವರ್ ಅವರ ಜನ್ಮದಿನದ ಅಂಗವಾಗಿ ಹಲಸೂರಿನಲ್ಲಿರುವ ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ತಮಿಳು ಭಾಷಿಕರು ಕನ್ನಡ ಕಲಿತು ಕನ್ನಡಿಗರೊಂದಿಗೆ ಬಾಂಧವ್ಯದಿಂದ ಇದ್ದಾರೆ. ಅವರು ಕನ್ನಡ ಕಲಿಯಲು ಅನುಕೂಲವಾಗುವಂತೆ ತಮಿಳು ಶಾಲೆಗಳಲ್ಲಿ ಕನ್ನಡ ಶಿಕ್ಷಕರು ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು ಎಂದರು. ಬೆಂಗಳೂರಿನಲ್ಲಿ ತಮಗೆ ಜಾಗ ನೀಡುವಂತೆ ತಮಿಳು ಸಂಘ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ.
ಈ ಕುರಿತು ಪರಿಶೀಲಿಸಿ ಸರ್ಕಾರಿ ಜಾಗ ಗುರುತಿಸಿ ಸಂಘಕ್ಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಮತ್ತು ಚೆನ್ನೈನಲ್ಲಿ ಬಸವಣ್ಣನವರ ಪ್ರತಿಮೆಗಳಿವೆ. ಇವು ಕರ್ನಾಟಕ ಮತ್ತು ತಮಿಳುನಾಡಿನ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸಲು ಸಹಕಾರಿಯಾಗಿವೆ ಎಂದ ಸಿಎಂ, ಮನುಷ್ಯನ ಅಭಿವ್ಯಕ್ತಿ ಸಾಧನವಾಗಿರುವ ಭಾಷೆ, ಭಾವನೆಗಳನ್ನು ಕೆರಳಿಸಬಾರದು.
ಬಾಂಧವ್ಯ ಬೆಸೆಯಬೇಕು ಎಂದು ಹೇಳಿದರು. ಮುಖ್ಯಮಂತ್ರಿಯಾದ ಬಳಿಕ ಪ್ರತಿ ವರ್ಷ ಇಲ್ಲಿಗೆ ಬಂದು ತಿರುವಳ್ಳುವರ್ ಅವರಿಗೆ ಗೌರವ ಸಲ್ಲಿಸುತ್ತೇನೆ. 9 ವರ್ಷದ ಹಿಂದೆ ಪ್ರತಿಮೆ ಆನಾವರಣ ಆದಾಗಲೂ ಪ್ರತಿಪಕ್ಷ$ನಾಯಕನಾಗಿ ಇಲ್ಲಿಗೆ ಬಂದಿ¨ªೆ. ತಿರುವಳ್ಳುವರ್ ಯುಗದ ಕವಿ. ಶ್ರೇಷ್ಠ ಸಂತ ಮತ್ತು ದಾರ್ಶನಿಕ.
ಅವರ ಸಾಹಿತ್ಯ ಸರ್ವಕಾಲಿಕ ಆದರ್ಶ. ನಮ್ಮ ನಾಡಿನಲ್ಲಿ ಬಸವಣ್ಣನವರಂತೆ ತಿರುವಳ್ಳುವರ್ ಕೂಡ ಸಾಮಾಜಿಕ ನ್ಯಾಯ ಮತ್ತು ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸಿದವರು ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ$ದಿನೇಶ್‌ಗುಂಡೂರಾವ್, ಸಚಿವರಾದ ಕೆ.ಜೆ.ಜಾರ್ಜ್, ರೋಷನ್‌ಬೇಗ್, ಮೇಯರ… ಸಂಪತ್‌ರಾಜ… ಮತ್ತಿತರರು ಇದ್ದರು.