Advertisement

ಆರೋಗ್ಯ ಕಾರ್ಡ್‌ ವಿತರಣೆಗೆ ಕ್ರಮ

07:11 PM Dec 14, 2020 | Suhan S |

ಹೊಳಲ್ಕೆರೆ: ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಪತ್ರಕರ್ತರಿಗೂ ಆರೋಗ್ಯ ಕಾರ್ಡ ವಿತರಿಸುವುದಾಗಿ ಭರವಸೆ ನೀಡಿದ್ದಾರೆ. ನೂತನ ವರ್ಷಕ್ಕೆ ಆರೋಗ್ಯ ಕಾರ್ಡ್‌ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

Advertisement

ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು ನಿರ್ಮಾಣ ಹಂತದಲ್ಲಿರುವ ಪತ್ರಿಕಾ ಭವನ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಸರಕಾರಿ ನೌಕರರಂತೆ ಪತ್ರಕರ್ತರಿಗೂ ಕೂಡ ಆರೋಗ್ಯ ಕಾರ್ಡ ನೀಡಬೇಕು ಎಂಬ ಮನವಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಂದಿಸಿದ್ದಾರೆ. ಪತ್ರಕರ್ತರ ಕುಟುಂಬಕ್ಕೆ ಐದು ಲಕ್ಷರೂ. ವೈದ್ಯಕೀಯ ವೆಚ್ಚದ ಸೌಲಭ್ಯ ಒದಗಿಸಲು ಆರೋಗ್ಯ ಕಾರ್ಡ ನೀಡಲಾಗುವುದು. ಕೋವಿಡ್‌ -19 ಸಂದರ್ಭದಲ್ಲಿ ರಾಜ್ಯದಲ್ಲಿ 26 ಪತ್ರಕರ್ತರುಮರಣ ಹೊಂದಿದ್ದು,ಅವರ ಕುಟುಂಬಕ್ಕೆ ತಲಾಐದು ಲಕ್ಷ ರೂ. ಪರಿಹಾರ ದೊರಕಿಸಿಕೊಡಲಾಗಿದೆ. ಈ ಸೌಲಭ್ಯವನ್ನು ಮುಂದುವರೆಸುವಂತೆ ಸಿಎಂ ಬಳಿ ಮನವಿ ಮಾಡಲಾಗಿದೆ ಎಂದರು.

ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿಯೂ ಪತ್ರಿಕಾ ಭವನ ನಿರ್ಮಿಸುವ ಗುರಿ ಹೊಂದಲಾಗಿದ್ದು, ಸ್ಥಳಿಯ ಜನಪ್ರತಿನಿಧಿಗಳಸಹಕಾರದಿಂದ ಭವನ ನಿರ್ಮಾಣಕ್ಕೆ ಪತ್ರಕರ್ತರು ಮುಂದಾಗಬೇಕು. ಹೊಳಲ್ಕೆರೆ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಪತ್ರಿಕಾ ಭವನ ಅಪೂರ್ಣಗೊಂಡಿದ್ದು, ಕಾಮಗಾರಿಯನ್ನುಪೂರ್ಣಗೊಳಿಸಲು ರಾಜ್ಯ ಸಂಘ ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್‌. ವೇದಮೂರ್ತಿ ಮಾತನಾಡಿ, ಪತ್ರಕರ್ತರ ನೆರವಿಗಾಗಿ ವೆಲ್‌ಫೇರ್‌ ಫಂಡ್‌ ಸ್ಥಾಪಿಸಬೇಕು. ಹಾಗೆಯೇ ಪತ್ರಿಕಾ ಸಂಘದ ರಾಜ್ಯ ಮಟ್ಟದ ಮಾಸಿಕ ಪತ್ರಿಕೆ ಹೊರ ತಂದು ಎಲ್ಲಾ ಪತ್ರಕರ್ತರುಚಂದಾದಾರರನ್ನಾಗಿ ಮಾಡಬೇಕು. ಈ ಮೂಲಕ ಸ್ಥಳೀಯವಾಗಿ ನಡೆಯುವ ಪತ್ರಕರ್ತರಕಾರ್ಯಕ್ರಮಗಳು, ಆಗು ಹೋಗುಗಳ ಬಗ್ಗೆ ವರದಿ ಮಾಡಲು ಸಹಕಾರಿಯಾಗಲಿದೆ ಎಂದರು. ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್‌.ಬಿ. ಶಿವರುದ್ರಪ್ಪ ಮಾತನಾಡಿ, ಪತ್ರಿಕಾ ಭವನಕಾಮಗಾರಿಯನ್ನು ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲು ಆರ್ಥಿಕಸಂಪನ್ಮೂಲ ಕ್ರೋಢೀಕರಣ ಮಾಡುತ್ತಿರುವುದಾಗಿ ತಿಳಿಸಿದರು.

ಕಾರ್ಯನಿತರ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್‌ಗೌಡಗೆರೆ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಜಾಜೂರು ರಂಗನಾಥ್‌, ತಾಲೂಕು ಪ್ರಧಾನ ಕಾರ್ಯದರ್ಶಿ ರಾಮಗಿರಿ ಯೋಗೀಶ್‌, ಪತ್ರಕರ್ತ ಎಂ.ಎನ್‌. ಅಹೋಬಲಪತಿ, ವಿತರಕ ಎಚ್‌.ಈ. ವಿಶ್ವನಾಥ ಮತ್ತಿತರರು ಇದ್ದರು.

Advertisement

ಕಾರ್ಯನಿರತರಾಗಿರುವ ಪತ್ರಕರ್ತರಿಗೆ ಮಾತ್ರ ನವೀಕರಣ ಹಾಗೂನೋಂದಣಿಗೆ ಅವಕಾಶ ನೀಡಲಾಗಿದೆ.ಗುರುತಿನ ಚೀಟಿ ಇಟ್ಟುಕೊಂಡು ರಾಜಕೀಯಮಾಡಲು ಸಂಘ ಅವಕಾಶ ನೀಡುವುದಿಲ್ಲ.  –ಶಿವಾನಂದ ತಗಡೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next