Advertisement

ಬಿಡಾಡಿ ದನ ನಿಯಂತ್ರಣಕ್ಕೆ ಕ್ರಮ

07:20 PM Aug 31, 2020 | Suhan S |

ಮೂಡಿಗೆರೆ: ಪಟ್ಟಣದಲ್ಲಿ ಜಾನುವಾರುಗಳ ಹಾವಳಿ ಅತಿಯಾಗಿದ್ದು ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸಾರ್ವಜನಿಕರು ಪಪಂಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಪಪಂ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

Advertisement

ಪಪಂ ಮುಖ್ಯಾಧಿಕಾರಿ ಕೃಷ್ಣೇಗೌಡ ಅವರು, ಜಾನುವಾರು ಮಾಲೀಕರು ತಮ್ಮ ಜಾನುವಾರುಗಳನ್ನು ತಮ್ಮ ಮನೆಯಲ್ಲೇ ಕಟ್ಟಿಹಾಕುವಂತೆ ಒಂದು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಇದಾವುದಕ್ಕೂ ಬೆಲೆ ನೀಡದೆ ಇದ್ದ ಗೋವು ಮಾಲೀಕರ ನಿರಾಸಕ್ತಿಯನ್ನು ಕಂಡ ಅಧಿಕಾರಿಗಳು ಕೂಡಲೇ ಕಾರ್ಯರೂಪಕ್ಕೆ ಇಳಿದು ಜಾನವಾರು ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಬೀದಿಗಳಲ್ಲಿ ಅಲೆಯುತ್ತಿದ್ದ ಕೆಲವು ಜಾನುವಾರುಗಳಲ್ಲಿ ಕೈಗೆ ಸಿಕ್ಕ ಐದು ಜಾನುವಾರುಗಳನ್ನು ಕಚೇರಿಯ ಆವರಣದಲ್ಲೆ ಕೂಡಿ ಹಾಕಿದ್ದರು. ರಾಸುಗಳ ಮಾಲೀಕರು ಕಚೇರಿಗೆ ಬಂದು ಬಿಡಿಸಿಕೊಂಡು ಹೋಗದೇ ಇದ್ದಲ್ಲಿ ಕೂಡಿಟ್ಟಿರುವಂತಹ ರಾಸುಗಳನ್ನು ಗೋಶಾಲೆಗೆ ಕಳಿಸಿ ಕೊಡುವುದಾಗಿ ಮಾಹಿತಿ ನೀಡಿದ್ದರು. ಜಾನುವಾರುಗಳನ್ನು ಕೂಡಿ ಹಾಕಿ ಒಂದು ವಾರವಾದರೂ ಜಾನುವಾರುಗಳ ಮಾಲೀಕರು ಬಾರದೆ ಇದ್ದುದನ್ನು ಕಂಡು ಕೂಡಿಹಾಕಿದ್ದ ಜಾನುವಾರುಗಳನ್ನು ಹಾಸನ ಜಿಲ್ಲೆಯ ಬಾಣಾವಾರದ ಶ್ರೀ ಭಗವಾನ್‌ ಗೋಶಾಲೆ ಟ್ರಸ್ಟ್‌ಗೆ ಕಳುಹಿಸಿಕೊಡಲಾಗಿದೆ.

ಐದು ಜಾನುವಾರುಗಳಲ್ಲಿ ಮೂರು ಹಸು, ಎರಡು ಹೋರಿಗಳಿದ್ದು ಅವುಗಳನ್ನು ಮುತುವರ್ಜಿಯಿಂದ ಬಿಟ್ಟು ಬಂದಿದ್ದು. ಇನ್ನು ಮುಂದಿನ ದಿನಗಳಲ್ಲಿ ಪಟ್ಟಣದ ಬೀದಿಗಳಲ್ಲಿ ಜಾನುವಾರುಗಳು ಓಡಾಡುವುದು ಕಂಡರೆ ಅವುಗಳನ್ನು ಗೋಶಾಲೆಗೆ ಕಳಿಸುವುದಾಗಿ ಮುಖ್ಯಾ ಧಿಕಾರಿ ಕೃಷ್ಣೇಗೌಡರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಕೆಲವು ಮಾಲೀಕರು ಹಸುವಿನ ಹಾಲನ್ನು ಕರೆದುಕೊಂಡು ನಂತರ ಅವುಗಳನ್ನು ರಸ್ತೆಗೆ ಬಿಡುತ್ತಿದ್ದಾರೆ. ಇದರಿಂದಾಗಿ ವಾಹನಗಳ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಕೆಲವು ಅಪರಿಚಿತರು ರಾತ್ರಿ ಸಮಯದಲ್ಲಿ ಬೀದಿಯಲ್ಲಿರುವಂತಹ ಜಾನುವಾರುಗಳನ್ನು ಕಸಾಯಿಖಾನೆಗೆ ಒಯ್ಯುತ್ತಿರುವ ಪ್ರಕರಣಗಳು ಹೆಚಾಗಿದ್ದು ಗೋವುಗಳ ರಕ್ಷಣೆ ಪ್ರತಿಯೊಬ್ಬರದ್ದಾಗಿದ್ದು ಅವುಗಳನ್ನು ಉಳಿಸುವ ಸದುದ್ದೇಶದಿಂದ ಗೋಶಾಲೆಗೆ ಕಳಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕರಾದ ಶರತ್‌ ಕುಮಾರ್‌, ಮಮತ, ಆರೋಗ್ಯಾಧಿಕಾರಿ ಪ್ರಕಾಶ್‌, ಕೃಷ್ಣಯ್ಯ ಮತ್ತಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next