Advertisement

ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಕ್ರಮ

02:27 PM Oct 20, 2020 | Suhan S |

ಮಾಗಡಿ: ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಎನ್‌ಎಂ ವಸತಿ ಗೃಹ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎ. ಮಂಜುನಾಥ್‌ ತಿಳಿಸಿದರು.

Advertisement

ಪಟ್ಟಣದಜಗಜೀವನರಾಮ್‌ಬಡಾವಣೆಯಲ್ಲಿರುವ ತಾಲೂಕು ಬೆನ್ನುಹುರಿ ಅಪಘಾತ ಅಂಗವಿಕಲರ ಸಂಘ, ಸಮರ್ಥನಂ ಅಂಗವಿಕಲ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಂಗ ವಿಕಲರಿಗೆ ಆಹಾರ ಪದಾರ್ಥ ಕಿಟ್‌ ವಿತರಣಾಸಮಾರಂಭದಲ್ಲಿ ಮಾತನಾಡಿದರು. ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ಮತ್ತುನಾನು ಸಚಿವ ಡಾ.ಸುಧಾಕರ್‌ ಅವರನ್ನು ಭೇಟಿ ಮಾಡಿ ಅನುದಾನ ಮಂಜೂರಾತಿಗೆ ಮನವಿ ಮಾಡಲಾಗಿತ್ತು.ಆರೋಗ್ಯ ಸಚಿವ ಡಾ.ಸುಧಾಕರ್‌ ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಎನ್‌ಎಂ ವಸತಿ ಗೃಹ ನಿರ್ಮಿಸಲು ಹಣ ಬಿಡುಗಡೆಗೊಳಿಸಿದ್ದಾರೆ. ಪಿಎಚ್‌ಸಿ ಕೇಂದ್ರ ನಿರ್ಮಾಣಕ್ಕೆ ತಲಾ 3.80 ಕೋಟಿ ರೂ. ಹಾಗೂ ಮಾಗಡಿ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ 4 ಕೋಟಿ ಮಂಜೂರಾತಿ ನೀಡಿದ್ದಾರೆ ಎಂದು ತಿಳಿಸಿದರು.

ತಾಯಿ ಮಗು ಆಸ್ಪತ್ರೆ ಮಂಜೂರಾತಿಗೆ ಮನವಿ ಮಾಡಿದ್ದು, ಸ್ಥಳ ಗುರುತಿಸಲು ಸೂಚಿಸಿದ್ದಾರೆ. ಬಿಡದಿಯಲ್ಲಿ ಟೋಯೊಟಾ ಕಂಪನಿ 9 ಕೋಟಿಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಲು ಮುಂದೆಬಂದಿದೆ. ಅನುಮತಿ ಸಿಕ್ಕ ನಂತರ ಕಾಮಗಾರಿ ಆರಂಭವಾಗಲಿದೆ ಎಂದರು.

ನೀತಿ ಸಂಹಿತೆ ಅಡ್ಡಿ: ಪಟ್ಟಣದಲ್ಲಿ ಒಳಚರಂಡಿ ಸಮಸ್ಯೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿಚರ್ಚಿಸಬೇಕಿದೆ. ಈಗ ನೀತಿ ಸಂಹಿತೆಯಿದ್ದು, ಚುನಾವಣೆ ನಂತರ ಸಭೆ ಕರೆದು ಚರ್ಚಿಸಿ ಒಳಚರಂಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಪುರಸಭಾಧ್ಯಕ್ಷ ಗಾದಿಗೆ ಚರ್ಚೆ: ಅಧ್ಯಕ್ಷ ಸ್ಥಾನದ ಮೀಸಲಾತಿ ಸರಿಯಿಲ್ಲ ಎಂದು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಶೀಘ್ರದಲ್ಲಿಯೇಸದಸ್ಯರು ಹಾಗೂ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು ಎಂದರು.

Advertisement

250 ಮಂದಿ ಅಂಗವಿಕಲರಿಗೆ ಆಹಾರ ಪದಾರ್ಥಗಳ ಕಿಟ್‌ ವಿತರಣೆ: ತಾಲೂಕಿನಲ್ಲಿಅಂಗವಿಕಲಕರು ಸಂಕಷ್ಟಕ್ಕೆ ಸಮರ್ಥನಂ ಅಂಗವಿಕಲ ಸಂಸ್ಥೆ ಮುಂದೆ ಬಂದಿದ್ದು, 250 ಆಹಾರ ಪದಾರ್ಥಗಳ ಕಿಟ್‌ ವಿತರಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪುರಸಭಾ ಸದಸ್ಯರಾದ ಕೆ.ವಿ.ಬಾಲರಘು, ವಿಜಯರೂಪೇಶ್‌, ಎಂ.ಎನ್‌.ಮಂಜುನಾಥ್‌,ರಮೇಶ್‌, ವೆಂಕಟೇಶ್‌, ಬೆನ್ನುಹುರಿ ಅಪಘಾತ ಅಂಗವಿಕಲರ ಸಂಘದ ಅಧ್ಯಕ್ಷ ಸೀತಾರಾಮು, ಕಾರ್ಯದರ್ಶಿನಾಗೇಂದ್ರಕುಮಾರ್‌,ವ್ಯವಸ್ಥಾಪಕ ಪ್ರವೀಣ್‌, ಸಮರ್ಥನಂ ಸಂಸ್ಥೆ ಪದಾಧಿಕಾರಿಗಳು, ಬಿ.ಆರ್‌.ಗುಡ್ಡೇಗೌಡ, ಬೋರ್‌ವೆಲ್‌ ನರಸಿಂಹಯ್ಯ, ಜೆಡಿಎಸ್‌ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next