Advertisement

ದಲಿತರಿಗೆ ಅಸ್ಪೃಶ್ಯರಾಗಿ ಕಂಡರೆ ಕ್ರಮ

12:34 PM Oct 24, 2021 | Team Udayavani |

ಹುಣಸಗಿ: ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಸುರಪುರ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸತ್ಯನಾರಾಯಣ ಅವರು ಬೊಮ್ಮಗುಡ್ಡ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ವರದಿ ಪಡೆದರು.

Advertisement

ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸತ್ಯನಾರಾಯಣ ಮಾತನಾಡಿ, ಹೊಟೇಲ್‌ಗ‌ಳಲ್ಲಿ ಕುಡಿಯುವ ನೀರು ಅಥವಾ ಖರೀದಿಸಲು ಬಂದ ದಲಿತರಿಗೆ ಅಸ್ಪೃಶ್ಯತೆ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅಸ್ಪೃಶ್ಯತೆ ತೋರುವ ಹೊಟೇಲ್‌ಗ‌ಳನ್ನು ಮುಚ್ಚಿಸಲು ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಈಗಾಗಲೇ ಗ್ರಾಮದಲ್ಲಿ 13 ಜನರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದು, ಅನ್ಯಾಯ ದೌರ್ಜನ್ಯಕ್ಕೆ ಒಳಗಾದ ಕುಟುಂಬದವರಿಗೆ ಇಲಾಖೆ ವತಿಯಿಂದ ಪರಿಹಾರ ನೀಡುವುದಾಗಿ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಡಾ| ಸಿ.ಬಿ. ವೇದಮೂರ್ತಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಕಾನೂನಿನ ಅರಿವು ಮೂಡಿಸಿದರು. ಹೊಟೇಲ್‌ ತಾರತಮ್ಯತೆ, ದೇವಸ್ಥಾನ ಒಳಗೆ ಪ್ರವೇಶ ನಿರ್ಬಂಧಿಸುವುದು ಕಾನೂನು ಪ್ರಕಾರ ಅಪರಾಧ. ಯಾವುದೇ ಕಾರಣಕ್ಕೂ ಅಸ್ಪೃಶ್ಯತೆ ಮೂಲಕ ತಾರತಮ್ಯತೆ ಮಾಡಬಾರದು ಎಂದು ಗ್ರಾಮಸ್ಥರಿಗೆ ಅರಿವು ಮೂಡಿಸಿದರು.

ಮುಂದೆ ದಲಿತ ಕೇರಿಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದಾಗಲಿ ಅಥವಾ ದೌರ್ಜನ್ಯ ಮಾಡುವುದಾಗಲಿ ನಡೆದಾಗ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಸೌಹಾರ್ದತೆಯೊಂದಿಗೆ ಇರಬೇಕು ಎಂದು ತಿಳಿಸಿದರು. ಕೊಡೇಕಲ್‌ ಪಿಎಸ್‌ಐ ಭಾಷುಮೀಯಾ, ಸಮಾಜ ಕಲ್ಯಾಣ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next