Advertisement
ಪರಿಷತ್‌ನಲ್ಲಿ ಗುರುವಾರ ಕರ್ನಾಟಕ ಧನ ವಿನಿಯೋಗ ಮಸೂದೆ (ಪೂರಕ ಅಂದಾಜು) ಮಂಡನೆ ಮಾಡಿ ಮಾತನಾಡಿದ ಅವರು, ವೇತನಕ್ಕೆ ತಕ್ಕ ರೀತಿಯ ಕೆಲಸ ನಿಗದಿ ಹಾಗೂ ಮೌಲ್ಯಾಂಕನಕ್ಕೆ ಒತ್ತು ನೀಡಲಾಗು ವುದು. ಐದು ವರ್ಷದ ಯೋಜನೆ ಇದಾಗಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡುವುದಾಗಿ ಅವರು ತಿಳಿಸಿದರು.
ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಈಗಾಗಲೇ 15 ಸಾವಿರ ಶಿಕ್ಷಕರ ನೇಮಕ ಕೈಗೊಳ್ಳಲಾಗಿತ್ತು. ಕೆಲವರು ಕೋರ್ಟ್‌ಗೆ ಹೋಗಿದ್ದರಿಂದ ತಡೆಯಾಗಿದೆ. ಇದಲ್ಲದೆ ಇನ್ನೂ 15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿಶ್ವವಿದ್ಯಾಲಯ ಉಪನ್ಯಾಸರ ನೇಮಕಕ್ಕೆ ಅನುಮತಿ ನೀಡಿದ್ದೇನೆ. ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡಲಾಗಿದೆ ಎಂದರು.
Related Articles
ಕರ್ನಾಟಕ ಧನ ವಿನಿಯೋಗ ಮಸೂದೆಗೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ನೀಡಲಾಯಿತು. ಸಿಎಂ ಬೊಮ್ಮಾಯಿ ಅವರು ಮಸೂದೆ ಮಂಡಿಸಿದರು. ಅಂದಾಜು 2,71,542 ಕೋ. ರೂ.ಗಳ ಬಜೆಟ್ ಗಾತ್ರ ಇದ್ದು, ಮೊದಲ ಬಾರಿಗೆ 14,762 ಕೋಟಿ ರೂ.ಗಳ ಪೂರಕ ಅಂದಾಜು ಮಂಡನೆ ಮಾಡ ಲಾಗಿತ್ತು. ಇದೀಗ 8001.13 ಕೋಟಿ ರೂ.ಗಳ ಪೂರಕ ಅಂದಾಜು ಮಂಡನೆ ಮಾಡುತ್ತಿದ್ದು, ವಿವಿಧ ಆಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳ ಉದ್ದೇಶದೊಂದಿಗೆ ಇದನ್ನು ಕೈಗೊಳ್ಳುತ್ತಿದ್ದೇನೆ. ಒಟ್ಟು ಬಜೆಟ್ ಗಾತ್ರಕ್ಕೆ ಹೋಲಿ ಸಿದರೆ ಎರಡು ಪೂರಕ ಅಂದಾಜುಗಳ ಪ್ರಮಾಣ ಶೇ. 8.38ರಷ್ಟು ಮಾತ್ರ ಆಗಿದೆ ಎಂದು ಹೇಳಿದರು.
Advertisement
ಈ ವರ್ಷ ಸಾಲದ ಮೀತಿ ಮೀರಲ್ಲಕೋವಿಡ್ ಮತ್ತಿತರರ ಕಾರಣ ಗಳಿಂದ ಎದುರಾಗಿದ್ದ ವಿತ್ತೀಯ ಕೊರತೆ ಯನ್ನು ಸರಿಪಡಿಸಿ ಉಳಿತಾಯ ಆರ್ಥಿಕತೆಯನ್ನಾಗಿಸಲು ಪ್ರಯತ್ನ ಮಾಡಲಾಗುವುದು. ಕಳೆದ ವರ್ಷ 71 ಸಾವಿರ ಕೋಟಿ ಸಾಲಕ್ಕೆ ಆವಕಾಶವಿದ್ದರೂ, ನಮ್ಮ ಸಾಲ 63 ಸಾವಿರ ಕೋಟಿ ರೂ. ದಾಟಿಲ್ಲ. ಪ್ರಸಕ್ತ ವರ್ಷವೂ ಸಾಲದ ಮಿತಿ 62 ಸಾವಿರ ಕೋಟಿ ದಾಟದಂತೆ ಪ್ರಯತ್ನ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಶೀಘ್ರ ಶಾಸಕರ ಸಭೆ
ಅಂಬೇಡ್ಕರ್, ಪರಿಶಿಷ್ಟ ಪಂಗಡ ಸೇರಿ ಬಹುತೇಕ ಎಲ್ಲ ನಿಗಮಗಳಲ್ಲಿ ಅನುದಾನದ ಕೊರತೆ ಇಲ್ಲ. ಬಜೆಟ್‌ನಲ್ಲಿ ಮೀಸಲಿಟ್ಟ ಹಣದ ಜತೆಗೆ 800 ಕೋಟಿ ರೂ. ನೀಡಿದ್ದೇನೆ. ಶೀಘ್ರವೇ ಶಾಸಕರ ಸಭೆ ಕರೆದು ನಿಗಮದಲ್ಲಿ ಉಳಿದಿರುವ ಕಡತಗಳನ್ನು ವಿಲೇ ಮಾಡಲು ಸೂಚಿಸಲಾಗುವುದು. ಹೆಚ್ಚಿನ ಅನುದಾನ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪೂರಕ ಅಂದಾಜಿನ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಲೋಕೋಪಯೋಗಿ, ಸಣ್ಣ ನೀರಾವರಿ, ಕಂದಾಯ ಇಲಾಖೆ, ವಸತಿ ಇಲಾಖೆಗೆ ಹೆಚ್ಚಿನ ಅನುದಾನವನ್ನು ವಿಪಕ್ಷಗಳ ಶಾಸಕರು ಕೇಳಿದ್ದು, 3ನೇ ಕಂತಿನ ಪೂರಕ ಅಂದಾಜಿನಲ್ಲಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಶ್ವೇತಪತ್ರ ಹೊರಡಿಸುತ್ತೇನೆ
ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯಡಿ ಹಿಂದೆ ಯಾವ ಸರಕಾರ ಎಷ್ಟೆಷ್ಟು ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಸಿಎಂ ಬೊಮ್ಮಾಯಿ ಪ್ರಕಟಿಸಿದರು.