Advertisement

ನೀರಿನ ಸಮಸ್ಯೆ ನಿವಾರಣೆಗೆ ಕ್ರಮ

09:03 AM Feb 10, 2019 | Team Udayavani |

ಆಳಂದ: ಬೇಸಿಗೆಯಲ್ಲಿ ಯಾವುದೇ ಹಳ್ಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಪಂ ಕಚೇರಿಯಲ್ಲಿ ಕರೆದ ನೀರಿನ ತುರ್ತು ಕಾರ್ಯಪಡೆ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಪಾಲ್ಗೊಂಡ ಸಭೆಯಲ್ಲಿ ಅವರು ಮಾತನಾಡಿದರು.

ಬೇಸಿಗೆ ನೀರಿನ ಸಮಸ್ಯೆ ನಿವಾರಣೆ ಅನುದಾನದಲ್ಲಿ ಶಾಶ್ವತ ಕ್ರಮ ಕೈಗೊಳ್ಳಲು ಆಗದು. ಗಂಭೀರ ಸಮಸ್ಯೆ ನಿವಾರಣೆಗೆ ಹಾಗೂ ನೀರಿಲ್ಲದೆ ಇರುವ ಹಳ್ಳಿಗಳಲ್ಲಿ ತುರ್ತು ಅಗತ್ಯ ಕ್ರಮಕ್ಕೆ ಬೇಡಿಕೆಯಿಟ್ಟು ಕೆಲಸ ಮಾಡಬೇಕು. 14ನೇ ಹಣಕಾಸು ಯೋಜನೆ ಅನುದಾನವನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಬೇಕು. ಮೊದಲ ಕಂತಿನಲ್ಲಿ ಜಿಲ್ಲಾಧಿಕಾರಿಗಳು ನೀಡಿದ 25 ಲಕ್ಷ ರೂ. ಯಾವುದಕ್ಕೂ ಸಾಲದು, 50 ಲಕ್ಷ ರೂ. ಕುಡಿಯುವ ನೀರಿನ ಕೆಲಸಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ತಹಸೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಅವರು, ತುರ್ತು ಸಂದರ್ಭದಲ್ಲಿ ಮನೆ, ಮನೆಗೆ ನೀರು ಕೊಡಲು ಸಾಧ್ಯವಿಲ್ಲ. ಅಲ್ಲಲ್ಲಿ ಸಾಮೂಹಿಕವಾಗಿ ನೀರು ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದರು.

ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಮುಖಂಡ ವೀರಣ್ಣಾ ಮಂಗಾಣೆ, ಮಲ್ಲಣ್ಣಾ ನಾಗೂರೆ, ಗ್ರೇಡ್‌-2 ತಹಶೀಲ್ದಾರ್‌ ಬಿ.ಜಿ. ಕುದರಿ, ಶಿರಸ್ತೇದಾರ ಶ್ರೀನಿವಾಸ ಕುಲಕರ್ಣಿ, ಡಾ| ಸಂಜಯ ರೆಡ್ಡಿ, ಜೆಸ್ಕಾಂ ಎಇಇ ಮಾಣಿಕರಾವ್‌ ಕುಲಕರ್ಣಿ, ಮೊಹ್ಮದ ಸಲೀಂ, ತಾಪಂ ಸದಸ್ಯ ಪ್ರಭು ಸರಸಂಬಿ, ಇಒ ಅನಿತಾ ಕೊಂಡಾಪುರ, ತಡಕಲ್‌ ಗ್ರಾಪಂ ಅಧ್ಯಕ್ಷ ಶಿವುಪುತ್ರಪ್ಪ ಬೆಳ್ಳೆ, ನಿಂಬರಗಾ ಅಧ್ಯಕ್ಷ ಅಮೃತ ಬಿಬ್ರಾಣಿ, ಕವಲಗಾ ಅಧ್ಯಕ್ಷ ಭೀಮಾಶಂಕರ ಝಳಕಿ, ಮುನ್ನೊಳ್ಳಿ ಅಧ್ಯಕ್ಷ ಸಿದ್ಧರೂಡ ಬುಜುರ್ಕೆ, ಇಂಜಿನಿಯರ್‌ ಸಂಗಮೇಶ ಹಾಗೂ ಇನ್ನಿತರ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಪಾಲ್ಗೊಂಡಿದ್ದರು.

Advertisement

44 ಹಳ್ಳಿಗಳಲ್ಲಿ ನೀರಿನ ಸಮಸ್ಯೆ
143 ಹಳ್ಳಿ ಮತ್ತು 45 ತಾಂಡಾಗಳು ಸೇರಿ ಒಟ್ಟು 188 ಹಳ್ಳಿಯ ಪೈಕಿ ಈಗಾಗಲೇ 44 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ದಿನಗಳಂತೆ ಸಮಸ್ಯೆ ಹೆಚ್ಚತೊಡಗಿದೆ. ಈಗಾಗಲೇ 38 ಕೊಳವೆ ಬಾವಿ ತೋಡಿದ್ದು, ಅವುಗಳಲ್ಲಿ ಆರು ವಿಫಲವಾಗಿದ್ದು, 12 ಕೊಳವೆ ಬಾವಿಗೆ ಮೋಟಾರ್‌ ಅಳವಡಿಸಿ ನೀರು ಒದಗಿಸಲಾಗುತ್ತಿದೆ. ಇನ್ನುಳಿದವುಗಳಿಗೆ ಗ್ರಾಪಂನಲ್ಲಿನ ವಿಫಲ ಕೊಳವೆ ಬಾವಿ ಪಂಪಸೆಟ್‌ಗಳನ್ನು ಹೊಸ ಕೊಳವೆಗೆ ಅಳವಡಿಸಿ ನೀರು ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. •ಮಲ್ಲಿಕಾರ್ಜುನ ಕಾರಬಾರಿ, ಎಇಇ, ಜಿಪಂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next