Advertisement

ಬಸ್‌ ಕೊರತೆ ನೀಗಿಸಲು ಕ್ರಮ: ಕಳಸದ್‌ 

02:51 PM Dec 06, 2021 | Team Udayavani |

ರಾಮನಗರ: ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಸೂಚಿಸಲಾಗಿದೆ. ಸಂಸ್ಥೆಯ ಅಧಿಕಾರಿಗಳೇಖುದ್ದು ಸ್ಥಳಗಳಿಗೆ ಭೇಟಿ ಕೊಟ್ಟು ಈ ವಿಚಾರದಲ್ಲಿಪರಿಶೀಲನೆ ನಡೆಸಿ ಸೂಕ್ತವಾಗಿ ಸ್ಪಂದಿಸುತ್ತಾರೆ ಎಂದುಕೆಎಸ್‌ಆರ್‌ಟಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ.ಸಿ ಕಳಸದ್‌ ತಿಳಿಸಿದರು.

Advertisement

ಪರಿಷತ್‌ ಚುನಾವಣೆ ಹಿನ್ನೆಲೆ ಸಿದ್ಧತೆಗಳ ಪರಿಶೀಲನೆಗೆ ಆಗಮಿಸಿದ್ದ ಅವರು ಜಿಲ್ಲಾ ಕೇಂದ್ರರಾಮನಗರದ ಬಸ್‌ ನಿಲ್ದಾಣ, ವಿಭಾಗೀಯ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಬಸ್‌ಗಳ ಸೌಕರ್ಯಸಿಗುತ್ತಿಲ್ಲ, ಜಿಲ್ಲೆಯಲ್ಲಿ 3500 ಪಾಸ್‌ ವಿತರಿಸಲಾಗಿದೆ. ಆದರೆ 40 ಬಸ್‌ಗಳು ಮಾತ್ರ ಸಂಚರಿಸುತ್ತವೆ. ಹೀಗಾಗಿ ತಮಗೆ ಅನಾನುಕೂಲವಾ ಗುತ್ತಿದೆಎಂಬ ಕಾರಣಕ್ಕೆ ಪ್ರತಿಭಟನೆಗಳು ನಡೆಯುತ್ತಿವೆಎಂದು ಸುದ್ದಿಗಾರರು ಗಮನ ಸೆಳೆದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.

ಬೆಂಗಳೂರು ಕಡೆ ಪ್ರಯಾಣಿಕರು ಹೆಚ್ಚು: ಕೋವಿಡ್‌ ಸೋಂಕು ಕಡಿಮೆಯಾದ ನಂತರ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ.ರಾಮನಗರದಿಂದ ಬೆಂಗಳೂರು ಕಡೆಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚು. ಆದರೆ, ಆ ಕಡೆಯಿಂದಇಲ್ಲಿಗೆ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಬಸ್‌ಗಳನ್ನು ರೀ-ಡಿಪ್ಲಾಯಿಂಟ್‌ ಮಾಡುವ ಅವಶ್ಯಕತೆ ಇದೆ. ಈ ವಿಚಾರದಲ್ಲಿ ತಾವು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಹೊಸ ಬಸ್‌ಗಳನ್ನು ಖರೀದಿಸಿಲ್ಲ: ಕೋವಿಡ್‌ ಕಾರಣ 2 ವರ್ಷಗಳಿಂದ ಹೊಸಬಸ್‌ಗಳನ್ನು ಸರ್ಕಾರ ಖರೀದಿ ಮಾಡಿಲ್ಲ. ಕೆಎಸ್‌ಆರ್‌ಟಿಸಿ ನಿಯಮಗಳಪ್ರಕಾರ 9 ಲಕ್ಷ ಕಿ.ಮೀ.ಸಂಚರಿಸಿರುವ ಬಸ್ಸುಗ ಳು ಅಥವಾ 6 ವರ್ಷ ಓಡಾಟ ನಡೆಸಿರುವ ಬಸ್‌ಗಳನ್ನು ಸ್ಟಾಪ್‌ಗೆ ಕಳುಹಿಸಬೇಕು. ಆದರೆ ಬಸ್‌ಗಳ ಕೊರತೆ ಇರುವ ಕಾರಣ ಸಂಚಾರ ಯೋಗ್ಯವಾಗಿರುವ ಕೆಲವು ಬಸ್‌ಗಳನ್ನು ಓಡಿಸಲಾಗುತ್ತಿದೆ. ಆದರೆ ಪ್ರಯಾಣಿಕರ ಸುರಕ್ಷತೆಗೆ ರಾಜಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಬಸ್‌ಗಳ ಕೊರತೆ ಇರುವವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

ಬಸ್‌ ಬೇ ನಿರ್ಮಾಣ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಮೈಸೂರು ಕಡೆಗೆ ಹೋಗುವ ಬಸ್‌ಗಳಿಗೆನಿಲ್ದಾಣವಿಲ್ಲ ಎಂದು ಸುದ್ದಿಗಾರರು ಗಮನ ಸೆಳೆದಾಗಪ್ರತಿಕ್ರಿಯಿಸಿದ ಅವರು ಐಜೂರು ವೃತ್ತದ ಬಳಿಬಸ್‌ ಬೇ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ ಎಂದರು. ಹಾಲಿಇರುವ ಬಸ್‌ ನಿಲ್ದಾಣ ಚಿಕ್ಕದು ಎಂದು ಒಪ್ಪಿಕೊಂಡವ್ಯವಸ್ಥಾಪಕ ನಿರ್ದೇಶಕರು ಸ್ಥಳೀಯ ನಗರಸಭೆಭೂಮಿ ಕೊಟ್ಟರೆ ನಿಲಾœಣವನ್ನು ವಿಸ್ತರಿಸುವುದಾಗಿ ತಿಳಿಸಿದರು.

Advertisement

ವ್ಯವಸ್ಥಾಪಕ ನಿರ್ದೇಶಕರ ಭೇಟಿಯ ವೇಳೆ ಇಲ್ಲಿನ ವಿಭಾಗೀಯ ನಿಯಂತ್ರಣಾ ಧಿಕಾರಿ ಲಕ್ಷ್ಮಣಸ್ವಾಮಿ, ವಿಭಾಗೀಯ ಸಂಚಲನಾಧಿಕಾರಿ ಪುರುಷೋತ್ತಮ,ವಿಭಾಗೀಯ ತಾಂತ್ರಿಕ ಶಿಲ್ಪಿ ಚಿನ್ನಚುಂಚಯ್ಯ, ಭದ್ರತಾಮತ್ತು ಜಾಗೃತಾಧಿಕಾರಿ ಶಿವ ಪ್ರಕಾಶ್‌, ಘಟಕ ವ್ಯವಸ್ಥಾಪಕ ಶೇಷುಮೂರ್ತಿ ಮತ್ತಿತರರು ಇದ್ದರು.

ವೇತನ ಸಮಸ್ಯೆಪರಿಹರಿಸುವ ಭರವಸೆ : ಕೆಎಸ್‌ಆರ್‌ಟಿಸಿ ಸಿಬ್ಬಂದಿ ವೇತನ ಪಾವತಿ ಸಮಸ್ಯೆಕೆಲವೇ ದಿನಗಳಲ್ಲಿ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದು ಸಂಸ್ಥೆಯ ಎಂ.ಡಿ. ಶಿವಯೋಗಿ ಸಿ. ಕಳಸದ್‌ ತಿಳಿಸಿದರು. ಕೋವಿಡ್‌ ಕಾರಣ ಸಂಸ್ಥೆಯ ಆದಾಯ ಕ್ಷೀಣಿಸಿದೆ. ಸಿಬ್ಬಂದಿ ವೇತನ ಪಾವತಿಯಲ್ಲಿ ವ್ಯತ್ಯಯವಾಗಿದೆ. ಸೆಪ್ಟಂಬರ್‌ ಮತ್ತು ಅಕ್ಟೋಬರ್‌ ತಿಂಗಳುಗಳಲ್ಲಿ ಅರ್ಧ ವೇತನ ಪಾವತಿಸಲಾಗಿತ್ತು. ಇನ್ನು 2-3 ದಿನಗಳಲ್ಲಿಬಾಕಿ ವೇತನ ಪಾವತಿಸಲಾಗುವುದು. ಇನ್ನು 15ದಿನಗಳಲ್ಲಿ ವೇತನ ಸಮಸ್ಯೆ ನೀಗಲಿದ್ದು, ಸಂಸ್ಥೆಯಆರ್ಥಿಕ ಸ್ಥಿತಿ ಸುಧಾರಿಸಲು ಆದ್ಯತೆ ನೀಡಲಾಗಿದೆ ಎಂದರು.

ಬಸ್‌ ನಿಲ್ದಾಣಗಳಲ್ಲಿ ಕಳುವು ಪ್ರಕರಣಗಳು ಹೆಚ್ಚಾಗುತ್ತಿರುವ ವಿಚಾರವನ್ನುಸುದ್ದಿಗಾರರು ವ್ಯವಸ್ಥಾಪಕ ನಿರ್ದೇಶಕ ಕಳಸದ್‌ಅವರ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರುಬಸ್‌ ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾಅಳವಡಿಸುವ ವಿಚಾರದಲ್ಲಿ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಗಳ ಬಳಿ ಚರ್ಚಿಸುವುದಾಗಿ ಕೆಎಸ್‌ ಆರ್‌ಟಿಸಿ ಎಂ.ಡಿ ಕಳಸದ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next