Advertisement
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಬಾರಿಗೆ ಬುಧವಾರ ರಂಗಾಯಣಕ್ಕೆ ಭೇಟಿ ನೀಡಿದ ಅವರು, ಇಡೀ ಆವರಣದಲ್ಲಿ ಸುತ್ತಾಡಿ ರಂಗಾಯಣ ಹಾಗೂ ಇಲ್ಲಿನ ಕಲಾವಿದರ ಬಗ್ಗೆ ತಿಳಿದು ಕೊಂಡರು.
ಇಲ್ಲಿನ ಮಹತ್ವ, ಇದರ ಹಿನ್ನೆಲೆ, ಇಲ್ಲಿನ ಬೇಕು-ಬೇಡಗಳ ಬಗ್ಗೆ ತಿಳಿಯಿತು ಎಂದರು. ನಾಡಿನಲ್ಲಿ ಕಲೆ ಮತ್ತು ಭಾಷೆ ಹೆಚ್ಚಾಗಿ ಬೆಳೆಯಬೇಕು. ರಂಗಾಯಣ ಕಲೆ ಮತ್ತು ಭಾಷೆ ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೊಸತನ ನಿರ್ಮಾಣ ಮಾಡುವ ಕಾರ್ಯಗಳನ್ನು ಮಾಡುತ್ತಿದೆ. ಇಂತಹ ರಂಗಾಯಣವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕಾಗಿದೆ ಎಂದರು.
Related Articles
Advertisement
ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ: ಮೊದಲ ಬಾರಿಗೆ ರಂಗಾಯಣಕ್ಕೆ ಆಗಮಿಸಿದ ಸಚಿವ ವಿ.ಸುನೀಲ್ ಕುಮಾರ್‌ಅವರಿಗೆ ರಂಗಾಯಣಕಲಾವಿದರು ಭರ್ಜರಿ ಮನರಂಜನೆ ನೀಡುವಲ್ಲಿ ಯಶಸ್ವಿಯಾದರು. ಸಚಿವರಿಗಾಗಿಯೇ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ನಾನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.ರಂಗಾಯಣದ ಸಂಚಾರಿ ರಂಗಘಟಕ ಕಲಾವಿದರ “ರಂಗಗೀತೆ’ ಗಾಯನ, ಭಾರತೀಯ ರಂಗಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಕೋಲಾಟ’, ರಂಗಾಯಣದ ಬೀದಿ ನಾಟಕ ಕಲಾವಿದರ “ಸಮಾನತೆ ಗೀತೆ’ ಗಾಯನ ಕೇಳಿದ ಸಚಿವರು ಖುಷಿ ಪಟ್ಟರು. ಬಳಿಕ ಭೂಮಿ ಗೀತ ರಂಗ ವೇದಿಕೆಯಲ್ಲಿ ರಂಗಾಯಣ ಕಲಾವಿದರು ಪ್ರಸ್ತುತ ಪಡಿಸಿದ “ಪರ್ವ’ ನಾಟಕದ ಕೆಲ ದೃಶ್ಯಗಳನ್ನು ವೀಕ್ಷಿಸಿದರು. ಈ ವೇಳೆ ರಂಗಾಯಣನಿರ್ದೇಶಕಅಡ್ಡಂಡ ಸಿ.ಕಾರ್ಯಪ್ಪ ಸಚಿವರಿಗೆ ರಂಗಾಯಣದ ಬಗ್ಗೆ ಪರಿಚಯ ಮಾಡಿಕೊಟ್ಟರು. ಈ ವೇಳೆ ಶಾಸಕ
ಎಲ್.ನಾಗೇಂದ್ರ, ಅರಗು ಮತ್ತು ಬಣ್ಣದ ಕಾರ್ಖಾನೆಯ ಅಧ್ಯಕ್ಷ ಎನ್.ವಿ ಫಣೀಶ್, ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಇತರರಿದ್ದರು.