Advertisement
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಂಬೆ ವೆಂಟೆಡ್ ಡ್ಯಾಂ ಅಣೆಕಟ್ಟನ್ನು 4 ಮೀಟರ್‌ನಿಂದ 6 ಮೀಟರ್‌ವರೆಗೆ ಏರಿಕೆ ಮಾಡುವ ಸಂದರ್ಭ ಮುಳುಗಡೆ ಯಾಗುವ ಭೂಮಿಯ ಪರಿಹಾರ ಬಾಕಿ ಇರುವ ಬಗ್ಗೆ ರೈತರು ಸಭೆಯಲ್ಲಿ ಗಮನ ಸೆಳೆದಾಗ, ಸಂತ್ರಸ್ತರಿಗೆ ಪ್ರಕರಣವಾರು ಚರ್ಚಿಸಿ ಮುಂದಿನ 15 ದಿನಗಳಲ್ಲಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
Related Articles
ಅಡಿಕೆಗೆ ಬೆಂಬಲ ಬೆಲೆ ಕುರಿತಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸ ಲಾಗುವುದು ಎಂದು ಡಿಸಿ ಹೇಳಿದರು.
Advertisement
ಶುಲ್ಕ ರಹಿತ ಆಧಾರ್ ಲಿಂಕ್ಕೃಷಿ ಪಂಪುಸೆಟ್‌ಗಳಿಗೆ ಮೀಟರ್ ಅಳವಡಿಕೆ ಮಾಡಿಲ್ಲ. ಆದರೂ ಮೆಸ್ಕಾಂ ನವರು ಕೃಷಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್ ಕಡ್ಡಾಯ ಗೊಳಿಸಿರುವುದು ಖಂಡನೀಯ. ಆಧಾರ್ ಲಿಂಕ್‌ಗೆ ಕೆಲವೆಡೆ 500 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ದರು. ಜಿಲ್ಲಾಧಿಕಾರಿ ಮಾತನಾಡಿ, ಆಧಾರ್ ಲಿಂಕ್‌ಗೆ ಶುಲ್ಕ ವಸೂಲಿ ಅನಗತ್ಯ ಎಂದು ತಿಳಿಸಿದರು. ಈ ನಡುವೆ ಮೆಸ್ಕಾಂ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆಧಾರ್ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಆದರೆ ಇದಕ್ಕೆ ಮೆಸ್ಕಾಂ ಯಾವುದೇ ಶುಲ್ಕ ವಿಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ರೈತ ಮುಖಂಡರಾದ ಶ್ರೀಧರ ಶೆಟ್ಟಿ ಬೈಲುಗುತ್ತು, ರವಿಕಿರಣ ಪುಣಚ, ಮನೋಹರ ಶೆಟ್ಟಿ, ಭಾರತೀಯ ಕಿಸಾನ್ ಸಂಘ ಪುತ್ತೂರು ಅಧ್ಯಕ್ಷ ಸುಬ್ರಾಯ ಶೆಟ್ಟಿ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ರೈತರ ಅಹವಾಲುಗಳು
– ಹೊರ ರಾಜ್ಯ-ದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಅಡಿಕೆಯನ್ನು ನಮ್ಮ ಜಿಲ್ಲೆಯ ಉತ್ತಮ ಗುಣಮಟ್ಟದ ಅಡಿಕೆಯ ಜತೆ ಕಲಬೆರಕೆ ಮಾಡಿಕೊಂಡು ಹೊರ ದೇಶಗಳಿಗೆ ರಫ್ತು ಮಾಡುವ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು.
-ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.
-ದ.ಕ.ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳಲ್ಲಿ ಮಂಗನ ಹಾವಳಿ ವಿಪರೀತವಾಗಿವೆ. ಆದ್ದರಿಂದ “ಮಂಕಿ ಪಾರ್ಕ್’ ಸ್ಥಾಪನೆಯಾಗಬೇಕು. ಮಂಗನ ಉಪಟಳದಿಂದ ಬೆಳೆ ಹಾನಿಗೆ ಒಳಗಾದರೆ ಸೂಕ್ತ ಪರಿಹಾರ ನೀಡಬೇಕು.
– ರೈತರ ಕೋವಿಗೆ ಈ ಹಿಂದಿನಂತೆ ತಾಲೂಕು ಮಟ್ಟದಲ್ಲೇ ತಹಶೀಲ್ದಾರ್‌ರಿಂದ ಒಪ್ಪಿಗೆ ಸಿಗಬೇಕು. ವಿದ್ಯುತ್ ಲೈನ್‌ಗೆ ವಿರೋಧ
ಉಡುಪಿಯ ಯುಪಿಸಿಎಲ್‌ನಿಂದ ಕಾಸರಗೋಡಿಗೆ 440 ಕೆ.ವಿ. ವಿದ್ಯುತ್ ಲೈನ್ ಅಳವಡಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಯೋಜನೆಯನ್ನು ಬೇಕಿದ್ದರೆ, ಸಮುದ್ರ ಮಾರ್ಗ, ಹೆದ್ದಾರಿ ಅಥವಾ ರೈಲ್ವೇ ಮಾರ್ಗದ ಮೂಲಕ ಮಾಡಲಿ ಎಂದು ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು ವಿರೋಧಿಸಿದರು. ಡಿಸಿಯವರು ಮಾತನಾಡಿ, ಇದು ಸರಕಾರದ ಯೋಜನೆ ಯಾಗಿದೆ. ರೈತರ ಹೋರಾಟಕ್ಕೆ ವಿರೋಧವಿಲ್ಲ. ಆದರೆ ರೈತರ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಯೋಜನೆಯನ್ನು ಕೈಗೆತ್ತಿ ಗೊಂಡಿರುವ ಸಂಸ್ಥೆಯ ಜತೆ ಚರ್ಚೆ ನಡೆಸಲು ಸಭೆಯ ವ್ಯವಸ್ಥೆ ಮಾಡುತ್ತೇನೆ ಎಂದರು.