Advertisement
ಪುತ್ತೂರಿನಲ್ಲಿ ವರ್ತಕರೊಂದಿಗೆ ಮಾ. 25ರಂದು ರಾತ್ರಿ ನಿರೀಕ್ಷಣಾ ಮಂದಿರದಲ್ಲಿ ಮಾತುಕತೆ ನಡೆಸಿದ ಅವರು ಸಮಸ್ಯೆ ಬಾರದಂತೆ ತಮ್ಮ ಕಡೆಯಿಂದಾಗುವ ಸಹಕಾರ ನೀಡುವ ಭರವಸೆ ನೀಡಿದರು.
Related Articles
ಪೆಟ್ರೋಲ್ ಪಂಪ್, ದಿನಸಿ ಅಥವಾ ಮೆಡಿಕಲ್‌ನಲ್ಲಿ ವರ್ತಕರಿಗೆ, ಕೆಲಸ ಮಾಡುವ ಸಿಬಂದಿ ಅಥವಾ ಇದಕ್ಕೆ ಸಂಬಂಧಿಸಿದ ಉತ್ಪನ್ನಗಳಿಗೆ ಕೆಲಸ ಮಾಡುವ ಉದ್ದೇಶದಿಂದ ಬರುವಾಗ ಅಡಚಣೆ ಆಗುತ್ತದೆ ಎಂದಿದ್ದರೆ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಕಾರ್ಯನಿರ್ವಹಣಾಧಿಕಾರಿಯವರ ಟಾಸ್ಕ್ಪೋರ್ಸ್ ಸಮಿತಿ ಇದೆ. ಆ ಸಮಿತಿಯ ಮೂಲಕ ಐಡಿ ತೋರಿಸಿ ಪಾಸ್ ಪಡೆದುಕೊಳ್ಳಬಹುದು. ಈ ಪಾಸ್‌ನ್ನು ಬೇರೆ ಉದ್ದೇಶಕ್ಕೆ ಉಪಯೋಗಿಸಬೇಡಿ ಎಂದು ಹೇಳಿದರು.
Advertisement
ತಹಶೀಲ್ದಾರ್ ರಮೇಶ್ ಬಾಬು, ಡಿವೈಎಸ್ಪಿ ದಿನಕರ್ ಶೆಟ್ಟಿ, ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ, ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಕುಸುಮಾಧರ್, ನಗರ ಪೊಲೀಸ್ ಠಾಣೆ ಎಸ್‌ಐ ಜಂಬುರಾಜ್ ಮಹಾಜನ್ ಉಪಸ್ಥಿತರಿದ್ದರು.
ನೀರು, ವಿದ್ಯುತ್ ಸೌಲಭ್ಯಎಲ್ಲ ಕಡೆಗಳಲ್ಲೂ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಪೂರ್ಣ ರೀತಿಯಲ್ಲಿ ನಡೆಯಲಿದೆ. ಎಲ್ಲಿಯೂ ಅಡಚಣೆ ಆಗದಂತೆ ಕಾರ್ಯನಿರ್ವಹಿಸಲಾಗಿದೆ. ಪಡಿತರ ಸೌಲಭ್ಯದಲ್ಲೂ ತೊಂದರೆ ಆಗುವುದಿಲ್ಲ. ದಿನವಹಿ ಸಾಮಗ್ರಿಗಳ ಕುರಿತು ವರ್ತಕರ ಜತೆ ಮಾತು ಕತೆ ನಡೆಸಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಸೆಲ್ವಮಣಿ ಆರ್. ತಿಳಿಸಿದರು. ಮಾಹಿತಿ ಮರೆಮಾಚುವ ಪ್ರಯತ್ನ
ಗಡಿಭಾಗಕ್ಕೆ ಹೊಂದಿಕೊಂಡಿರುವ ಪುತ್ತೂರು ತಾಲೂಕು ವ್ಯಾಪ್ತಿಗೆ ಕೋವಿಡ್ 19 ಸಂಬಂಧಿತ ಭೀತಿ ಹೆಚ್ಚಾಗಿದ್ದು, ಸುರಕ್ಷತಾ ಕ್ರಮಗಳ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಎಸ್ಪಿ, ದ.ಕ.ಜಿ.ಪಂ. ಸಿಇಒ ಅವರು ಪ್ರಥಮ ಬಾರಿಗೆ ಭೇಟಿ ನೀಡಿದರೂ ಮಾಧ್ಯಮಗಳಿಗೆ ಮಾಹಿತಿಯನ್ನು ಮರೆಮಾಚಲಾಗಿತ್ತು. ಕೋವಿಡ್ 19 ನಿರ್ಮೂಲನೆಯ ದೃಷ್ಟಿಯಿಂದ ಪೊಲೀಸ್, ಆರೋಗ್ಯ ಇಲಾಖೆ ಸಿಬಂದಿಯಂತೆ ಮಾಧ್ಯಮ ಸಿಬಂದಿಯೂ ನಿರಂತರ ಶ್ರಮಿಸುತ್ತಿದ್ದರೂ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಅಗತ್ಯ ಸಂದರ್ಭದಲ್ಲಿ ಮಾಹಿತಿ ಮರೆಮಾಚುತ್ತಿರುವ ಕುರಿತು ಮಾಧ್ಯಮ ಮಿತ್ರರು, ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.