Advertisement

ಬಡವರ ಅಭಿವೃದ್ಧಿಗೆ ಕ್ರಮ ಅಗತ್ಯ

12:24 PM May 21, 2018 | |

ಶಿವಮೊಗ್ಗ: ಯಾವುದೇ ಸಂಘಟನೆಗಳು ಆಯಾ ಜಾತಿಯ ಜನರಿಗೆ ಮಾತ್ರ ಎಂದು ಸೀಮಿತವಾಗದೆ ಇಡೀ ಸಮಾಜಕ್ಕೆ ನೆರವು ನೀಡಲು ಮುಂದಾಗಬೇಕು ಎಂದು ಕಾಂಗ್ರೆಸ್‌ ಮುಖಂಡ ಎಸ್‌. ಪಿ. ದಿನೇಶ್‌ ಹೇಳಿದರು.
ನಗರದ ಎಟಿಎನ್‌.ಸಿ.ಸಿ. ಕಾಲೇಜಿನ ಚಂದನ ಸಭಾಂಗಣದಲ್ಲಿ ಭಾವಸಾರ ವಿಜನ್‌ ಇಂಡಿಯಾ ಹಾಗೂ ಗೋಲ್ಡನ್‌ ಲ್ಯಾಡರ್‌ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಸಮಾಜದ ಎಲ್ಲ ಬಡವರನ್ನು ಕೂಡ ಮೇಲೆತ್ತುವ ಕೆಲಸ ನಡೆಯಬೇಕಿದೆ. ಜಾತಿ,ಧರ್ಮ, ಪಂಥ ಎಂದು ವಿಭಜನೆಯ
ದೃಷ್ಟಿಯಿಂದ ನೋಡಬಾರದು. ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಅವರ ಕುಟುಂಬಗಳಿಗೆ
ಆಧಾರವಾಗಬೇಕು. ಬಡ ವರ್ಗದ ಮಕ್ಕಳಿಗೆ ಮಾರ್ಗದರ್ಶನ ನೀಡುವಂತಹ ಕೆಲಸಗಳನ್ನು ಮಾಡುವ ಮೂಲಕ
ಸಾರ್ವಜನಿಕ ಸಂಸ್ಥೆಗಳು ತಮ್ಮ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ಹೇಳಿದರು.

ಉದ್ಯೋಗದ ಕನಸು ಕಾಣುತ್ತಿರುವ ಯುವ ಪೀಳಿಗೆಗೆ ಮಾರ್ಗದರ್ಶನದ ಅವಶ್ಯಕತೆ ಇದೆ. ಇದನ್ನು ಕೇವಲ ಸರ್ಕಾರಗಳು ಮಾತ್ರ ಮಾಡದೆ ಸರ್ಕಾರೇತರ ಸಂಸ್ಥೆಗಳು ಕೂಡ ಇದರಲ್ಲಿ ಕೈ ಜೋಡಿಸುವಂತಾಗಬೇಕು. ಆಗ ಮಾತ್ರ ವಿಫುಲವಾದ ಉದ್ಯೋಗವಕಾಶಗಳು ಸಿಗುವಂತಾಗುತ್ತದೆ.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬಾಹುಸಾರ ವಿಜನ್‌ ಅಂತಹ ಸಂಸ್ಥೆಗಳು ಈ ರೀತಿಯಲ್ಲಿ ಕಾರ್ಯ
ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಪ್ರಸ್ತುತ ಸಮಾಜದ ಯುವ ಪೀಳಿಗೆಯ ಮೇಲೆ ಹೆಚ್ಚಿನ
ಜವಬ್ದಾರಿ ಇದೆ ಎಂದು ಅವರು ನುಡಿದರು.

ಉದ್ಯೋಗ ಮೇಳದಲ್ಲಿ ಮ್ಯಾವಿಂಟಂ ಟೆಕ್‌ ಸಲ್ಯೂಷನ್‌, ಡಿ.ಎಕ್ಸ್‌ಇ ಟೆಕ್ನಾಲಜಿ, ನೆಕಿಯರ್‌ ಬಿಜಿನೆಸ್‌, ಯುರೆಕಾ
ಫೋಬ್ಸ್, ಎಚ್‌ಜಿಎಸ್‌, ಶಕ್ತಿ ಗ್ರೂಪ್ಸ್‌, ಕ್ಯಾರಿಯರ್‌ ಲಾಂಚ್‌, ಶ್ರೀವತ್ಸ ಟೆಕ್ನಾಲಜಿ, ಏಜಿಸ್‌, ಸೇರಿದಂತೆ ಎಂಟು
ಸಂಸ್ಥೆಗಳು ಭಾಗಿಯಾಗಿದ್ದವು. ಸುಮಾರು 1,200ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಭಾಗವಹಿಸಿದ್ದರು. ಗೋಲ್ಡನ್‌ ಲ್ಯಾಡರ್‌ ಸಂಸ್ಥೆಯ ಮುಖ್ಯಸ್ಥೆ ಸ್ನೇಹ, ಭಾವಸಾರ ವಿಜನ್‌ ಇಂಡಿಯಾ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಗಜೇಂದ್ರನಾಥ್‌ ಮಾಳ್ಳೋದೆ, ಖಜಾಚಿ ಡಾ| ಆರ್‌.ಪಿ. ಸಾತ್ವಿಕ್‌, ಸಂಸ್ಥೆಯ ಗವರ್ನರ್‌ ಸಚಿನ್‌ ಸಾಕ್ರೆ, ಎನ್‌.ಇ.ಎಸ್‌. ಕಾರ್ಯದರ್ಶಿ ನಾಗರಾಜ್‌, ಮುಖಂಡರಾದ ಡಾ| ಪುರುಷೋತ್ತಮ್‌, ಎನ್‌.ಟಿ. ನಾರಾಯಣ್‌ ರಾವ್‌, ಶ್ರೀಧರ ಮೂರ್ತಿ ನವಲೆ, ಕಾರ್ಯದರ್ಶಿ ಮೋಹನ್‌ ಎಂ.ಕೆ. ಮತ್ತಿತರರು ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ್‌ ಸಾಕ್ರೆ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next