Advertisement

ಸೌಲಭ್ಯ ದುರ್ಬಳಕೆಯಾದರೆ ಕ್ರಮ

01:49 PM Apr 02, 2021 | Team Udayavani |

ಕೋಲಾರ: ವಿವಿಧ ಇಲಾಖೆಗಳಲ್ಲಿ ಎಸ್‌.ಸಿ, ಎಸ್‌.ಟಿ ಜನಾಂಗದ ಫ‌ಲಾನುಭವಿಗಳ ಸೌಲಭ್ಯಗಳನ್ನು ಇತರೆ ಜಾತಿಯವರು ಸುಳ್ಳು ದಾಖಲೆ, ನಕಲಿ ಪ್ರಮಾಣ ಪತ್ರ ನೀಡಿ ಸೌಲಭ್ಯ ಪಡೆದಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಡೀಸಿ ಡಾ.ಆರ್‌.ಸೆಲ್ವಮಣಿ ತಿಳಿಸಿದರು.

Advertisement

ನಗರದ ಡೀಸಿ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಗುರುವಾರ ನಡೆದ ಅನುಸೂಚಿತ ಜಾತಿ ಮತ್ತುಅನುಸೂಚಿತ ಬುಡಕಟ್ಟುಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಪ.ಜಾ, ಪಂ.ಜಾ ಪ್ರಮಾಣ ಪತ್ರಗಳನ್ನು ಪಡೆದು ಇತರೆವರ್ಗದವರು ಸೌಲಭ್ಯ ಪಡೆಯುತ್ತಿರುವ ಬಗ್ಗೆ ದೂರುಗಳಿದೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳು ಪಹಣಿ, ಇತರೆ ದಾಖಲೆಗಳನ್ನುಸೂಕ್ತ ಸಮಯಕ್ಕೆ ನೀಡದಿದ್ದರೆ, ಅವರಿಗೆ ನೋಟಿಸ್‌ ನೀಡಿ, ಇತರೆ ಫಲಾನುಭವಿಗಳನ್ನು ಆಯ್ಕೆಮಾಡಬೇಕು. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಕೊರೆದಿರುವ ಕೊಳವೆ ಬಾವಿಗಳಿಗೆ ಪಂಪು, ಮೋಟಾರ್‌ ಅಳವಡಿಸಿ ವಿದ್ಯುತ್‌ ಸೌಲಭ್ಯ ಕಲ್ಪಿಸಿ. ಮುಂದಿನ ಸಭೆಯ ಒಳಗೆ ಜಿಲ್ಲೆಯಲ್ಲಿ ವಾಲ್ಮೀಕಿ ಭವನಗಳ ನಿರ್ಮಾಣವಾಗಬೇಕು ಎಂದು ಸೂಚಿಸಿದರು.

ಇತರೆ ವರ್ಗದವರಿಗೆ ಸೌಲಭ್ಯ: ಸಮಿತಿಯ ಸದಸ್ಯ ನಾಗನಾಳ ಮುನಿಯಪ್ಪ ಮಾತನಾಡಿ, ದೌರ್ಜನ್ಯ ಸಮಿತಿ ಸಭೆಗೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬರಬೇಕು.ಕೆಲವು ದಲಿತರು ಜಮೀನನ್ನು ಅನುಭೋಗ ಮಾಡುತ್ತಿದ್ದಾರೆ. ಆದರೆ ಅವರ ಒಡೆತನದಲ್ಲಿ ಜಮೀನುಇಲ್ಲ. 2004 ರಿಂದ ಮಂಜೂರು ಆಗಿರುವ ಜಮೀನುಗಳಿಗೆ ಸಾಗುವಳಿ ಚೀಟಿ ನೀಡದೆ ತಹಶೀಲ್ದಾರ್‌ಗಳು ಬಾಕಿ ಉಳಿಸಿಕೊಂಡಿದ್ದಾರೆ. ಕೃಷಿ ಇಲಾಖೆಯಲ್ಲಿ ಟಿಲ್ಲರ್‌, ಟ್ರ್ಯಾಕ್ಟರ್‌ ಮತ್ತು ಹನಿ ನೀರಾವರಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಆದರೆ, ಎಸ್‌.ಸಿ. ಎಸ್‌.ಟಿ ಜಾತಿ ಪ್ರಮಾಣಪತ್ರವನ್ನು ಪಡೆದು ಇತರೆ ವರ್ಗದವರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಜಿಪಂ ಸಿಇಒ ಎನ್‌.ಎಂ.ನಾಗರಾಜ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಕೆ.ಜಿ.ಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾಕರುಣಾಕರನ್‌, ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ, ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಉಪ ವಿಭಾಗಾಧಿಕಾರಿ ಸೋಮಶೇಖರ್‌, ಸಮಿತಿ ಸದಸ್ಯ ವೆಂಕಟರಾಮ್‌, ವೆಂಕಟೇಶ್‌, ರವೀಂದ್ರ ಉಪಸ್ಥಿತರಿದ್ದರು.

ಹಕ್ಕುಪತ್ರ ನೀಡಿಲ್ಲ, ಮೂಲ ಸೌಲಭ್ಯಗಳಿಲ್ಲ: ದೂರು :

Advertisement

ಕೋಲಾರದ ಸ್ಲಮ್‌ ಕಾಲೋನಿಯಲ್ಲಿ ಸುಮಾರು 90 ಮನೆಗಳಲ್ಲಿ ಜನ ವಾಸವಾಗಿದ್ದಾರೆ. ಅವರಿಗೆ ಹಕ್ಕುಪತ್ರ ನೀಡಿಲ್ಲ. ಮೂಲ ಸೌಲಭ್ಯಗಳಿಲ್ಲ, ಅಬಕಾರಿ ಇಲಾಖೆಯಲ್ಲಿ ಸಿ.ಎಲ್‌ 7 ಅಡಿ ಬಾರ್‌ ತೆರೆಯಲು ಎಸ್‌.ಸಿ, ಎಸ್‌.ಟಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ಅಂಬೇಡ್ಕರ್‌ ಅಭಿವೃದ್ಧಿನಿಗಮದಿಂದ ಕೊರೆಸಿರುವ ಕೊಳವೆಬಾವಿಗಳಿಗೆ ಪಂಪು ಮೋಟರ್‌ ಮತ್ತು ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ ಎಂದು ಸಮಿತಿ ಸದಸ್ಯ ಹಾಗೂ ಕೋಲಾರ ನಗರಸಭೆ ಸದಸ್ಯ ಅಂಬರೀಶ್‌ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next