Advertisement
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಹುತೇಕ ಕುಡಿವ ನೀರಿನ ಯೋಜನೆಗಳ ನೀರು ಶುದ್ಧೀಕರಣ ಘಟಕಗಳು ರೋಗಗ್ರಸ್ತವಾಗಿವೆ. ಹೀಗಾಗಿ ಅಧಿ ಕಾರಿಗಳು ಜಂಟಿ ಸದನ ಸಮಿತಿ ಪರಿಶೀಲನೆಗೆ ಬಂದಾಗ ಆರ್‌ಒ ಪ್ಲಾಂಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹಾರಿಕೆ ಉತ್ತರ ನೀಡದೇ ಪ್ರತಿ ಘಟಕದ ನಿಖರ ಮಾಹಿತಿ ನೀಡಬೇಕು. ಹೀಗಾಗಿ ಖುದ್ದಾಗಿ ಸ್ಥಳ ಪರಿಶೀಲಿಸಿ ನೈಜ ಸ್ಥಿತಿಗತಿ ಕುರಿತು ಅಧಿ ಕಾರಿಗಳಿಂದ ವಾಸ್ತವ ವರದಿ ಪಡೆಯಬೇಕು ಎಂದು ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.
Related Articles
ಸದರಿ ಯೋಜನೆಯನ್ನೇ ರದ್ದು ಮಾಡಿ ಎಂದು ಜಿಪಂ ಸದಸ್ಯೆ ಪ್ರತಿಭಾ ಪಾಟೀಲ ಸಲಹೆ ನೀಡಿದರು. ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆ ಅನುಷ್ಠಾನ ತ್ವರಿತಗೊಳ್ಳಬೇಕು. ಕಾಮಗಾರಿ ಆರಂಭಿಸುವಲ್ಲಿ ವಿಳಂಬ ತೋರಿದ ಗುತ್ತಿಗೆದಾರರನ್ನು ನಿರ್ದಾಕ್ಷಿಣ್ಯವಾಗಿ ಕಪ್ಪು ಪಟ್ಟಿಗೆ ಸೇರಿಸಿ ಎಂದು ನಿರ್ದೇಶನ ನೀಡಿದ ಸಚಿವರು, ಯೋಜನೆ ಅನುಷ್ಠಾನಕ್ಕೆ ಕೋವಿಡ್ ನೆಪ ಹೇಳಲು ಮುಂದಾದ ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯೋಜನೆ ಅನುಷ್ಠಾನದ ವಿಷಯದಲ್ಲಿ ಸ್ಪಂದಿಸದ ಗುತ್ತಿಗೆದಾರರನ್ನು ಯಾವ ಒತ್ತಡಕ್ಕೂ ಮಣಿಯದೇ ಕಪ್ಪು ಪಟ್ಟಿಗೆ ಸೇರಿಸಿ. ಅಗತ್ಯ ಬಿದ್ದರೆ ಕ್ರಿಮಿನಲ್ ಕೇಸ್ ಹಾಕಿ ಎಂದು ತಾಕೀತು ಮಾಡಿದರು.
Advertisement
ಬೇರೆ ಉದ್ದೇಶಕ್ಕೆ ಶೌಚಾಲಯ ಬಳಕೆ ಆಗುತ್ತಿವೆ ಎಂದಾದರೆ ಜನರಲ್ಲಿ ಜಾಗೃತಿ ಕೊರತೆ ಇದೆ ಎಂದರ್ಥ. ಹಲವೆಡೆ ಶೌಚಾಲಯಗಳೇ ನಿರ್ಮಾಣಗೊಂಡಿಲ್ಲ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಸಭೆಯಲ್ಲಿ ಗಮನ ಸೆಳೆದಾಗ, ಜಿಲ್ಲೆಯಲ್ಲಿ ಜಾಗೃತಿ ಮೂಡಿಸಿದರೂ ಜಿಲ್ಲೆಯಲ್ಲಿ ಶೇ.30 ಬಯಲು ಶೌಚಾಲಯ ಪದ್ಧತಿ ಜೀವಂತವಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿದ ಶೌಚಾಲಯ ಬಳಕೆ ಆಗುತ್ತಿಲ್ಲ ಎಂದಾದರೆ ಹೇಗೆ?. ಶೌಚಾಲಯ ಬಳಕೆ ವಿಷಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಜೊತೆಗೆ ಗ್ರಾಪಂ ನೂತನ ಸದಸ್ಯರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಪಂ ಸಿಇಒ ಗೋವಿಂದರೆಡ್ಡಿ ಸೇರಿದಂತೆ ಇತರರು ಇದ್ದರು.