Advertisement
ಪರಿಷತ್‌ನಲ್ಲಿ ಗುರುವಾರ ಕರ್ನಾಟಕ ಧನ ವಿನಿಯೋಗ ವಿಧೇಯಕ (ಪೂರಕ ಅಂದಾಜು) ಮಂಡನೆ ಮಾಡಿ ಮಾತನಾಡಿದ ಅವರು, ವೇತನಕ್ಕೆ ತಕ್ಕ ರೀತಿಯ ಕೆಲಸ ನಿಗದಿ ಹಾಗೂ ಮೌಲ್ಯಾಂಕನಕ್ಕೆ ಒತ್ತು ನೀಡಲಾಗುವುದು. ಐದು ವರ್ಷದ ಯೋಜನೆ ಇದಾಗಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದರು.
Related Articles
Advertisement
ಇದೀಗ 8001.13 ಕೋಟಿ ರೂ.ಗಳ ಪೂರಕ ಅಂದಾಜು ಮಂಡನೆ ಮಾಡುತ್ತಿದ್ದು, ವಿವಿಧ ಆಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳ ಉದ್ದೇಶದೊಂದಿಗೆ ಇದನ್ನು ಕೈಗೊಳ್ಳುತ್ತಿದ್ದೇನೆ. ಒಟ್ಟು ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಎರಡು ಪೂರಕ ಅಂದಾಜುಗಳ ಪ್ರಮಾಣ ಶೇ.8.38ರಷ್ಟು ಮಾತ್ರ ಆಗಿದೆ ಎಂದು ಹೇಳಿದರು.
ಶೀಘ್ರ ಶಾಸಕರ ಸಭೆಅಂಬೇಡ್ಕರ್, ಪರಿಶಿಷ್ಟ ಪಂಗಡ ಸೇರಿ ಬಹುತೇಕ ಎಲ್ಲಾ ನಿಗಮಗಳಲ್ಲಿ ಅನುದಾನದ ಕೊರತೆ ಇಲ್ಲ. ಬಜೆಟ್‌ನಲ್ಲಿ ಮೀಸಲಿಟ್ಟ ಹಣದ ಜತೆಗೆ 800 ಕೋಟಿ ರೂ. ನೀಡಿದ್ದೇನೆ. ಶೀಘ್ರವೇ ಶಾಸಕರ ಸಭೆ ಕರೆದು ನಿಗಮದಲ್ಲಿ ಉಳಿದಿರುವ ಕಡತಗಳನ್ನು ವಿಲೇ ಮಾಡಲು ಸೂಚಿಸಲಾಗುವುದು. ಹೆಚ್ಚಿನ ಅನುದಾನ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪೂರಕ ಅಂದಾಜಿನ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಲೋಕೋಪಯೋಗಿ, ಸಣ್ಣ ನೀರಾವರಿ, ಕಂದಾಯ ಇಲಾಖೆ, ವಸತಿ ಇಲಾಖೆಗೆ ಹೆಚ್ಚಿನ ಅನುದಾನವನ್ನು ವಿಪಕ್ಷಗಳ ಶಾಸಕರು ಕೇಳಿದ್ದು, 3ನೇ ಕಂತಿನ ಪೂರಕ ಅಂದಾಜಿನಲ್ಲಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.