Advertisement

ಆನ್‌ಲೈನ್‌ ಪಾಸ್‌ ವಿತರಣೆಗೆ ಕ್ರಮ

03:16 PM May 01, 2020 | Suhan S |

ಧಾರವಾಡ: ಕೋವಿಡ್ 19 ನಿಯಂತ್ರಣದ ಲಾಕ್‌ಡೌನ್‌ ಅವಧಿಯಲ್ಲಿ ವಿವಿಧ 72 ಪ್ರಕಾರಗಳ ಸೇವೆಗಳು ಮತ್ತು ತುರ್ತು ಕಾರ್ಯಗಳಿಗೆ 12 ಇಲಾಖೆಗಳ ಮೂಲಕ ಆನ್‌ಲೈನ್‌ನಲ್ಲಿ ಪಾಸ್‌ಗಳನ್ನು ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಅಗತ್ಯ ದಾಖಲೆಗಳೊಂದಿಗೆ //www.supportdharwad.in ವೆಬ್‌ಸೈಟ್‌ ಮೂಲಕ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು.

Advertisement

ಜಿಲ್ಲಾ ಪಂಚಾಯತ್‌ :  ನರೇಗಾ ಚಟುವಟಿಕೆಗಳು, ಆಯ್ದ ಸೇವೆಗಳ ಹೋಂ ಡೆಲಿವರಿ, ರಾಜ್ಯ-ಕೇಂದ್ರ ವಲಯದ ಯೋಜನೆಗಳಡಿ ಕುಡಿಯುವ ನೀರು, ನೀರಾವರಿ ಚಟುವಟಿಕೆಗಳು, ಗ್ರಾಪಂ ಮಟ್ಟದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳು.

ಹು-ಧಾ ಮಹಾನಗರ ಪಾಲಿಕೆ :  ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆ, ಉತ್ಪಾದನೆ ಸಗಟು-ಚಿಲ್ಲರೆ ವಹಿವಾಟು, ಪ್ರತ್ಯೇಕವಾಗಿರುವ ಕಿರಾಣಿ, ಹಣ್ಣು, ತರಕಾರಿ, ಹಾಲಿನ ಡೈರಿ, ಮಾಂಸದ ಉತ್ಪನ್ನಗಳ ಅಂಗಡಿ, ಬೇಕರಿ ಹಾಗೂ ಮತ್ತಿತರ ಚಟುವಟಿಕೆಗಳು.

ಪಶು ಇಲಾಖೆ :  ಪಶು ಆಸ್ಪತ್ರೆಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಗ್ರಹ, ಸಾಗಣೆ ಮತ್ತು ಮಾರಾಟ, ಪಶು ಸಂಗೋಪನೆ, ಕೋಳಿ ಫಾರಂಗಳು ಹಾಗೂ ಪಶು ಆಹಾರ ಪೂರೈಕೆ.

ಜಿಲ್ಲಾ ಕೈಗಾರಿಕಾ ಕೇಂದ್ರ :  ಔಷಧಿ, ವೈದ್ಯಕೀಯ, ಅರೆವೈದ್ಯಕೀಯ, ಉಪಕರಣಗಳ ಉತ್ಪಾದನಾ ಘಟಕಗಳು, ವೈದ್ಯಕೀಯ ಆಮ್ಲಜನಕ, ಅದರ ಪ್ಯಾಕಿಂಗ್‌ ಮತ್ತು ಕಚ್ಚಾ ಸಾಮಗ್ರಿಗಳ ಪೂರೈಕೆ.

Advertisement

ಕೃಷಿ ಇಲಾಖೆ :  ಕೃಷಿ ಚಟುವಟಿಕೆಗಳು, ಕೃಷಿ ಉತ್ಪನ್ನಗಳ ಖರೀದಿದಾರರು, ಎಪಿಎಂಸಿ, ರೈತ ಉತ್ಪಾದಕರ ಸಂಸ್ಥೆಗಳು ಮತ್ತು ಸಹಕಾರ ಸಂಘಗಳ ಚಟುವಟಿಕೆಗಳು, ಕೃಷಿ ಯಂತ್ರೋಪಕರಣ ಹಾಗೂ ಬಿಡಿಭಾಗಗಳ ವ್ಯಾಪಾರ, ರಸಗೊಬ್ಬರ-ಕೀಟನಾಶಕ-ಬೀಜ ಮಾರಾಟ.

ಮೀನುಗಾರಿಕೆ ಇಲಾಖೆ :  ಒಳನಾಡು ಮೀನುಗಾರಿಕೆ, ಮತ್ಸ್ಯೋದ್ಯಮ, ಆಹಾರ ನಿರ್ವಹಣೆ, ಪ್ಯಾಕಿಂಗ್‌, ಕೋಲ್ಡ್‌ಚೈನ್‌, ವಾಣಿಜ್ಯ ಅಕ್ವೇರಿಯಂ ಮತ್ತು ಮಾರುಕಟ್ಟೆ ಚಟುವಟಿಕೆಗಳು, ಮೀನುಗಾರರ ಮತ್ತು ಸಹಾಯಕರ ಸಂಚಾರಕ್ಕೆ ಅನುಮತಿ.

ಕೆಎಂಎಫ್‌ : ಪಶು ಆಹಾರ ಉತ್ಪಾದನೆ, ಮೆಕ್ಕೆಜೋಳ, ಸೋಯಾ ಸೇರಿದಂತೆ ಕಚ್ಚಾ ವಸ್ತುಗಳ ಪೂರೈಕೆ, ಗೋಶಾಲೆಗಳ ನಿರ್ವಹಣೆ.

ಲೀಡ್‌ಬ್ಯಾಂಕ್‌ ಮ್ಯಾನೇಜರ್‌ :  ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಂದ ನಿಯಂತ್ರಿಸಲ್ಪಟ್ಟ ಹಣಕಾಸು ಚಟುವಟಿಕೆಗಳು, ಬ್ಯಾಂಕ್‌ ಶಾಖೆಗಳು, ಎಟಿಎಂ ಮತ್ತು ಆನ್‌ಲೈನ್‌ ವಹಿವಾಟುಗಳ ನಿರ್ವಹಣೆ, ವಿಮಾ ಕಂಪನಿಗಳ ಚಟುವಟಿಕೆಗಳು.

ಮಹಿಳಾ-ಮಕ್ಕಳ ಇಲಾಖೆ : ಬಾಲಮಂದಿರಗಳು, ವಿಕಲಚೇತನರು, ಮಾನಸಿಕ ಅಸ್ವಸ್ಥರು, ಹಿರಿಯ ನಾಗರಿಕರು, ನಿರಾಶ್ರಿತರು, ಮಹಿಳೆಯರು ಹಾಗೂ ವಿಧವೆಯರ ವಸತಿಗೃಹಗಳು, ಅಂಗನವಾಡಿ ಕೇಂದ್ರಗಳು ಮತ್ತು ಮಕ್ಕಳು-ಗರ್ಭಿಣಿಯರಿಗೆ ಆಹಾರ ವಿತರಣೆ.

ಆಹಾರ ಇಲಾಖೆ :  ಅಡುಗೆ ಅನಿಲ, ಅಡುಗೆ ಎಣ್ಣೆ ಹಾಗೂ ಇಂಧನ ಪೂರೈಕೆ, ಅಂಚೆ ಸೇವೆಗಳು ಹಾಗೂಕುಡಿಯುವ ನೀರು, ನೈರ್ಮಲ್ಯ, ಘನತ್ಯಾಜ್ಯ ವಿಲೇವಾರಿ ಸಂಬಂಧಿತ ಸಾರ್ವಜನಿಕ ಸೇವೆಗಳು.

ಜಿಲ್ಲಾಧಿಕಾರಿ ಕಚೇರಿ :  ವೈದ್ಯಕೀಯ ತುರ್ತು, ಅಂತ್ಯಸಂಸ್ಕಾರ, ಔಷಧ ಪೂರೈಕೆ, ಸರ್ಕಾರಿ ಕರ್ತವ್ಯ, ವಾಹನ ಪಾಸ್‌, ಆರೋಗ್ಯ ಸೇವೆ, ಅಂತರ್ಜಿಲ್ಲೆ ಮತ್ತು ಅಂತಾರಾಜ್ಯ ಕೃಷಿ ಸಂಬಂಧಿತ ಚಟುವಟಿಕೆಗಳು, ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ವಿತರಣೆ, ಆನ್‌ಲೈನ್‌ಶಿಕ್ಷಣ-ತರಬೇತಿ, ವಾಣಿಜ್ಯ-ಖಾಸಗಿ ವ್ಯವಹಾರಗಳು, ಉದ್ಯಮಗಳು.

Advertisement

Udayavani is now on Telegram. Click here to join our channel and stay updated with the latest news.

Next