Advertisement
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಇಲಾಖೆ ಅಧಿಕಾರಿಗಳ ಪ್ರಗತಿ ವಿವರ ಪಡೆದುಕೊಂಡರು. ದೇವರಹಿಪ್ಪರಗಿ ಮತಕ್ಷೇತ್ರದ ಬಸವನಬಾಗೇವಾಡಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳಿಗೆ ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಸಾರ್ವಜನಿಕರಿಗೆ ದೊರಕಿಸಿಕೊಡುವಲ್ಲಿ ಅಧಿಕಾರಿಗಳು ಜಾಗೃತವಾಗಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಗ ಯಾಳವಾರ ಹಾಗೂ ಕುದರಿಸಾಲವಾಡಗಿಯಲ್ಲಿ ಜಾಗೆ ಇದ್ದರು ಅಲ್ಲಿಯ ಸ್ಥಳೀಯ ಕೆಲವರು ಕಟ್ಟಡ ಮಾಡಲಿಕ್ಕೆ
ವಿರೋಧ ಮಾಡುತ್ತಿದ್ದಾರೆ ಎಂದಾಗ ತಹಶೀಲ್ದಾರ್ ಸುಭಾಷ್ ಸಂಪಗಾವಿ ಅವರು ಪೊಲೀಸ್ ಭದ್ರತೆಯಲ್ಲಿ ಕಟ್ಟಡ ಕಾರ್ಯ ಆರಂಭಿಸಬಹುದಿತ್ತಲ್ಲ ಎಂದಾಗ ಅದಕ್ಕೆ ತಾಪಂ ಅಧಿಕಾರಿ ಸ್ಥಳೀಯರು ಗ್ರಾಪಂನವರೊಂದಿಗೆ ಕಿರಿ ಕಿರಿ ಮಾಡುತ್ತಾರೆ ಎಂದಾಗ ಶಾಸಕ ಸೋಮನಗೌಡರು ಅದನ್ನು ಸರಿಪಡಿಸುವ ಕಾರ್ಯ ಮಾಡುತ್ತೇನೆ ಎಂದರು.
Related Articles
Advertisement
ತಾಲೂಕಿನ ಅಕ್ಷರ ದಾಸೋಹದ ಯೋಜನೆಯಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆ ನೀಡುತ್ತಿರುವ ಆಹಾರ ಪದಾರ್ಥದಲ್ಲಿ ಕಳಪೆ ಮಟ್ಟದ ತೊಗರಿ ಬೆಳೆ ಸೇರಿದಂತೆ ಇನ್ನಿತರ ಪದಾರ್ಥಗಳು ಕಳಪೆ ಮಟ್ಟದ್ದು ಬರುತ್ತಿವೆ ಎಂದು ಶಾಲೆ ಮಕ್ಕಳಿಂದ ಮತ್ತು ಪಾಲಕರಿಂದ ತಿಳಿದು ಬರುತ್ತಿದೆ. ಆದರೆ ಅಧಿಕಾರಿಗಳು ನೀವೇನು ಮಾಡುತ್ತೀದ್ದಿರಿ ಎಂದು ಅಕ್ಷರ ದಾಸೋಹ ಅಧಿಕಾರಿ ಎಚ್.ಎಸ್. ಚಲವಾದಿ ಅವರಿಗೆ ಪ್ರಶ್ನಿಸಿದಾಗ ಇಲ್ಲ. ಸರ್ ಮುಂದೆ ಈ ರೀತಿ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ಸುಭಾಷ್ ಸಂಪಗಾವಿ, ತಾಪಂ ಅಧಿಕಾರಿ ಚಂದ್ರಶೇಖರ ಮ್ಯಾಗೇರಿ, ಜಿಪಂ ಸದಸ್ಯರಾದ ಸಂತೋಷ ನಾಯಕ, ಕಲ್ಲಪ್ಪ ಮಟ್ಟಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.