Advertisement
ವಿವಿಧ ರಾಜ್ಯಗಳಲ್ಲಿ 4133 ಹೆಕ್ಟೇರ್ ಪ್ರದೇಶಕ್ಕೆ ಈ ಬೆಳೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿತ್ತು ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯ ದರ್ಶಿ ಡಾ.ಅಭಿಲಕ್ಷ್ ಲಿಖಿ ಹೇಳಿದರು.
Related Articles
Advertisement
ತೋಟದ ಮಾಲಿಕ ನಾರಾಯಣಸ್ವಾಮಿ ಅವರು ಡ್ರ್ಯಾಗನ್ ಹಣ್ಣು ಬೆಳೆಯುವ ವಿಧಾನ, ಸಮಸ್ಯೆಗಳು, ಮಾರುಕಟ್ಟೆ ಕುರಿತು ಮಾಹಿತಿ ನೀಡಿದರು. ಕೇಂದ್ರ ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಗುಲಾಬಿ, ಈರುಳ್ಳಿ ರಫ್ತು ಆಧಾರಿತ ಬೆಳೆಯಾಗಿದ್ದು, ರಫ್ತು ಮಾಡಲು ಪ್ರತ್ಯೇಕ ಎಚ್.ಎಸ್.ಕೋಡ್ ನೀಡಲು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಎಂ.ಗಾಯಿತ್ರಿ ಮನವಿ ಮಾಡಿದರು. ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಪರಶಿವಮೂರ್ತಿ, ಜಂಟಿ ನಿರ್ದೇಶಕ (ಹನಿ ನೀರಾವರಿ) ಪ್ರಸಾದ್ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.
ಕಮಲಂ ಉತ್ಪನ್ನಕ್ಕೆ ವಿಶೇಷ ಮಹತ್ವಹಣ್ಣುಗಳ ಮೇಲೆ ಕಮಲದಂತೆ ದಳಗಳು ಮತ್ತು ಆಕಾರ ಇರುವ ಕಾರಣದಿಂದ ಈ ಹಣ್ಣನ್ನು ಕಮಲಂ ಎಂದು ಜನಪ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಭಾರತದಲ್ಲಿ ಉತ್ಪಾದಿಸಲಾದ ಕಮಲಂನ ಉತ್ಪನ್ನಗಳಿಗೆ ವಿಶೇಷ ಮಹತ್ವ ನೀಡಲು ಮತ್ತು ಭಾರತದಲ್ಲಿ ಉತ್ಪಾದಿಸಲಾದ ಬೆಳೆಯ ಬ್ರ್ಯಾಂಡ್ ಆಗಿ ಮಾನ್ಯತೆ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಈ ಗಿಡ ಮರಳಿನ ಗೋಡು ಮಣ್ಣಿನಿಂದ ಹಿಡಿದು ಜೇಡಿ ಮಣ್ಣು ಮತ್ತು ವಿವಿಧ ತಾಪಮಾನದಲ್ಲಿ ಬದುಕುಳಿಯುತ್ತದೆ. ಅದರ ಬೇಸಾಯಕ್ಕೆ ಉಷ್ಣವಲಯದ ಹವಾಗುಣ ಹೆಚ್ಚು ಸೂಕ್ತವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹೆಚ್ಚಿನ ಮಳೆಯಾಗುತ್ತದೆಯಾದರೂ ಡ್ರ್ಯಾಗನ್ ಫಲವನ್ನು ಸಾವಯವ ಮಾದರಿ ಮತ್ತು ಕೊಳವೆಗಳಲ್ಲಿ ಗಿಡಗಳನ್ನು ಬೆಳೆಯಬಹುದಾಗಿದೆ ಎಂದು ಡಾ.ಅಭಿಲಕ್ಷ್ ಲಿಖಿ ಹೇಳಿದರು.