Advertisement
ಐದು ವರ್ಷದ ಈ ಸ್ಮಾರ್ಟ್ ಸಿಟಿ ಯೋಜನೆಯಡಿ ಅನೇಕ ಪ್ರದೇಶಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು. ಸ್ಮಾರ್ಟ್ ಸಿಟಿ ಮತ್ತು ಇತರೆ ಯೋಜನೆಗಳಡಿ ನಗರದ ಮಂಡಕ್ಕಿ ಭಟ್ಟಿಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ, ಅಭಿವೃದ್ಧಿ ಪಡಿಸಲು ನೀಲನಕ್ಷೆ ತಯಾರಿಸಲಾಗಿದೆ.
Related Articles
Advertisement
ದುರ್ಗಾಂಬಿಕಾ ದೇವಸ್ಥಾನದ ಸುತ್ತಲೂ ಪರಂಪರೆ ವಾತಾವರಣ ಮತ್ತು ಪಾದಚಾರಿ ರಸ್ತೆ ನಿರ್ಮಾಣ ಅಭಿವೃದ್ಧಿ ಪಡಿಸುವುದರ ಜೊತೆಗೆ ವಾಹನ ಸಂಚಾರ ರಹಿತ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ 6.67 ಕೋಟಿ ರೂ. ಕಾಯ್ದಿರಿಸಲಾಗಿದೆ ಎಂದರು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಾಲಿ 400 ಕೋಟಿ ರೂ. ಬಿಡುಗಡೆಯಾಗಿದೆ.
ಜೊತೆಗೆ ವಿವರವಾದ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆಯುವುದರ ಬಗ್ಗೆ ಪಿಎಂಸಿಯಾಗಿ ಐಡೆಕ್ ಸಂಸ್ಥೆಯ ನೇಮಕವಾಗಿದ್ದು, ಪ್ರಥಮ ಹಂತವಾಗಿ 3 ರಸ್ತೆಗಳಿಗೆ ಅನುಮೋದನೆ ನೀಡಿದ್ದು, 2 ರಸ್ತೆಗಳ ಕಾಮಗಾರಿಗಳಿಗೆ ಈ ದಿನ ಚಾಲನೆ ನೀಡುತ್ತಿರುವುದು ಅತಿ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು. ನಗರದಲ್ಲಿದ್ದ 150 ಪಾರ್ಕ್‌ಗಳ ಪೈಕಿ ಈಗಾಗಲೇ 50 ಪಾರ್ಕ್‌ಗಳನ್ನು ತೋಟಗಾರಿಕೆ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿದೆ.
ಕುಂದವಾಡ ಕೆರೆಯಲ್ಲಿ ಕಾರಂಜಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ವಾಯು ವಿಹಾರಿಗಳಿಗೆ ಅನುಕೂಲವಾಗಲಿದೆ ಎಂದರು. ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಟಾರ್, ಮೇಯರ್ ಅನಿತಾಬಾಯಿ ಮಾಲತೇಶ್, ಉಪ ಮೇಯರ್ ಮಂಜಮ್ಮ ಹನುಮಂತಪ್ಪ, ಪಾಲಿಕೆ ಸದ್ಯಸರಾದ ದಿನೇಶ್ ಕೆ.ಶೆಟ್ಟಿ, ಶಿವನಹಳ್ಳಿ ರಮೇಶ್, ಲಕ್ಷ್ಮೀದೇವಿ ವೀರಣ್ಣ, ಶ್ರೀನಿವಾಸ್, ಚಂದ್ರಪ್ಪ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಪ್ರಭಾರ ಆಯುಕ್ತ ರವೀಂದ್ರ ವೇದಿಕೆಯಲ್ಲಿದ್ದರು.