Advertisement

ಅನಧಿಕೃತ ಚಾನೆಲ್‌ಗ‌ಳ ವಿರುದ್ಧ ಕ್ರಮ: ಡಿಸಿ

03:59 PM Sep 29, 2020 | Suhan S |

ಬೀದರ: ಅನಧಿಕೃತವಾಗಿ ನ್ಯೂಸ್‌ ಚಾನೆಲ್‌ ಹಾಗೂ ವರದಿಗಾರರ ಹುದ್ದೆಯ ಹೆಸರು ಬಳಸಿಕೊಂಡು ಗೊಂದಲ ಹುಟ್ಟಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಬೀದರ ಎಲೆಕ್ಟ್ರಾನಿಕ್‌ ಮಿಡಿಯಾ ಸಂಘ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅಂತಹ ನಕಲಿ ಪತ್ರಕರ್ತರ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಎಚ್ಚರಿಕೆ ನೀಡಿದ್ದಾರೆ.

Advertisement

ನಕಲಿ ನ್ಯೂಸ್‌ ಚಾನೆಲ್‌ಗ‌ಳು ಮತ್ತು ಪತ್ರಕರ್ತರ ಹಾವಳಿಗೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ವೃತ್ತಿಪರ ಪತ್ರಕರ್ತರಿಗೆ ಇರಿಸು ಮುರಿಸು ಉಂಟಾಗುತ್ತಿದೆ. ನಕಲಿ ಲೋಗೋ ಇಟ್ಟುಕೊಂಡು ಜನಪ್ರತಿನಿಧಿಗಳ ಮುಂದೆ ಹೋಗಿ ಅಸಮಂಜಸ ಪ್ರಶ್ನೆಗಳನ್ನು ಕೇಳುತ್ತಾರೆ. ನಕಲಿ ನ್ಯೂಸ್‌ ಚಾನೆಲ್‌ ತೆಗೆದು ಅದರದೊಂದು ಲೋಗೋ ಇಟ್ಟುಕೊಂಡು ಒಂದೆರಡು ವಿಡಿಯೋ ಕ್ಲಿಪ್‌ಗ್ಳನ್ನು ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್‌, ಫೇಸ್‌ ಬುಕ್‌ ಹಾಗೂ ಯೂಟೂಬ್‌ಗಳಲ್ಲಿ ಹರಿಬಿಟ್ಟು ಸಾರ್ವಜನಿಕವಾಗಿ ಮಾಧ್ಯಮ ಕ್ಷೇತ್ರವನ್ನು ಹಾಳು ಮಾಡುತ್ತಿವೆ. ಅಂಥವರಿಂದ ಅ ಧಿಕೃತ ಸುದ್ದಿ ಸಂಸ್ಥೆಗಳ ಧ್ಯೇಯ ಮತ್ತು ಉದ್ದೇಶ ನೆಲ ಕಚ್ಚುತ್ತಿದೆ. ಈ ಬಗ್ಗೆ ಪರಿಶೀಲಿಸಿ, ಯಾರೇ ಇರಲಿ ಅಂತಹ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಆದ್ದರಿಂದ ಈ ಕುರಿತು ಪರಿಶೀಲನೆ ವೇಳೆಯಲ್ಲಿ ಯಾರಾದರೂ ಅನಧಿಕೃತವಾಗಿ ನ್ಯೂಸ್‌ ಚಾನೆಲ್‌ ಹಾಗೂ ವರದಿಗಾರರ ಹುದ್ದೆಯ ಹೆಸರು ಬಳಸಿಕೊಂಡು ಗೊಂದಲ ಹುಟ್ಟಿಸುವುದು ಕಂಡು ಬಂದರೆ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

…………………………………………………………………………………………………………………………………………………………….

ಬೆಟ್ಟಿಂಗ್‌: 1.90 ಲಕ್ಷ ರೂ. ಜಪ್ತಿ :

ಬೀದರ: ಹುಮನಾಬಾದ್‌ ಪಟ್ಟಣದ ಜೋಶಿ ಗಲ್ಲಿಯಲ್ಲಿ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ವ್ಯಕ್ತಿಗಳ ಮೇಲೆ ಪೊಲೀಸರು ದಾಳಿ ನಡೆಸಿ 1.90 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ. ಐಪಿಎಲ್‌ ಕ್ರಿಕೆಟ್‌ ಟೂರ್ನಾಮೆಂಟ್‌ನಲ್ಲಿ ಕಿಂಗ್‌ ಎಲೆವೆನ್‌ ಪಂಜಾಬ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ಗಳ ಮಧ್ಯೆ ಪಂದ್ಯ ನಡೆಯುತ್ತಿದ್ದ ವೇಳೆ ಹುಮಾನಾಬಾದ ಡಿವೈಎಸ್‌ಪಿ ಸೋಮಲಿಂಗ ಕುಂಬಾರ, ಚಿಟಗುಪ್ಪಾ ಸಿಪಿಐ ಶರಣಬಸವೇಶ್ವರ ಭಜಂತ್ರಿ ನೇತೃತ್ವದಲ್ಲಿ ಪಿಎಸ್‌ಐ ರವಿಕುಮಾರ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಹುಮನಾಬಾದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

Advertisement

Udayavani is now on Telegram. Click here to join our channel and stay updated with the latest news.

Next