Advertisement

ಘಟನೆಗೆ ಕಾರಣರಾದವರ ವಿರುದ್ಧ ಕ್ರಮ: ಸಿಎಂ

07:37 AM Dec 15, 2018 | |

ಮೈಸೂರು: ಸುಳವಾಡಿ ದುರಂತ ಅತ್ಯಂತ ಅಮಾನುಷ. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಘಟನೆಯ ಸುದ್ದಿ ತಿಳಿದು ಚೆನ್ನೈನಿಂದ ವಿಶೇಷ ವಿಮಾನದಲ್ಲಿ ರಾತ್ರಿ 9.05ರ ಸುಮಾರಿಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನೇರವಾಗಿ ಕೆ.ಆರ್‌.ಆಸ್ಪತ್ರೆಗೆ ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ, ಅಸ್ವಸ್ಥರ ಯೋಗ ಕ್ಷೇಮ ವಿಚಾರಿಸಿದರು. 

Advertisement

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹತ್ತು ಜನ ಮೃತಪಟ್ಟಿರುವ ವಿಚಾರ ತಿಳಿದು ನನ್ನ ಮನಸ್ಸು ತಡೆಯಲಿಲ್ಲ. ಅದಕ್ಕಾಗಿ ಎಲ್ಲ ಕೆಲಸ ಮೊಟಕುಗೊಳಿಸಿ ಇಲ್ಲಿಗೆ ಬಂದಿದ್ದೇನೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಮೃತರ ಅಂತ್ಯಕ್ರಿಯೆಗೆ ಸರ್ಕಾರವೇ ವ್ಯವಸ್ಥೆ ಕಲ್ಪಿಸಲಿದೆ’ ಎಂದರು. ಘಟನೆಗೆ ಕಾರಣರಾದವರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯಾರೇ ಇಂತಹ ಘಟನೆಗಳ ಹಿಂದೆ ಇದ್ದರೂ ಕಠಿಣ ಕ್ರಮ ಜರುಗಿಸುತ್ತೇವೆ. ದೇವಾಲಯದಲ್ಲೇ ಇಂತಹ ಘಟನೆ ನಡೆದರೆ, ಯಾರನ್ನು ನಂಬುವುದು ಎಂದು ಪ್ರಶ್ನಿಸಿದ ಅವರು, ಕೆ.ಆರ್‌.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೊರತೆ ಇದ್ದರೆ ಖಾಸಗಿ ಆಸ್ಪತ್ರೆಗೆ ತೆರಳಲು ಮುಕ್ತ ಅವಕಾಶ
ನೀಡಲಾಗಿದೆ ಎಂದರು. ವೆಂಟಿಲೇಟರ್‌ ಇರುವ ಆಂಬ್ಯುಲೆನ್ಸ್‌ಗಳನ್ನು ಬಳಸಲು ಸೂಚಿಸಿದ್ದೆ. ಆದರೆ, ಆಂಬ್ಯುಲೆನ್ಸ್‌ಗಳಲ್ಲಿ ಜೀವ ರಕ್ಷಣೆಗೆ ವೆಂಟಿ ಲೇಟರ್‌ ಇಲ್ಲದಿದ್ದರೂ ಬಳಸಿದ್ದಾರೆ. ಕೆ.ಆರ್‌. ಆಸ್ಪತ್ರೆಯ ಕುಂದುಕೊರತೆ ಬಗ್ಗೆ ನನಗೆ ತಿಳಿದಿದೆ. 600 ಕೋಟಿ ಖರ್ಚಾಗಲಿ, ಎಲ್ಲಾ ಸೌಲಭ್ಯ ಒದಗಿಸಲು ಮಾನಸಿ ಕವಾಗಿ ಸಿದ್ಧನಿದ್ದೇನೆ, ನನಗೊಂದಿಷ್ಟು ಸಮಯ ಕೊಡಿ ಎಂದರು. 

ಘಟನೆಯಲ್ಲಿ ಮೃತಪಟ್ಟಿರುವ ಕೃಷ್ಣಾನಾಯಕ್‌ ಪುತ್ರಿ ರಾಣಿಭಾಯಿ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಈ ವೇಳೆ ರಾಣಿಭಾಯಿಗೆ ಸಚಿವ ಸಿ.ಎಸ್‌.ಪುಟ್ಟರಾಜು ಅವರು ವೈಯಕ್ತಿಕವಾಗಿ 50 ಸಾವಿರ
ರೂ. ನೆರವು ನೀಡಿದರು. ಸಚಿವ ಸಾ.ರಾ.ಮಹೇಶ್‌, ಸಂಸದರಾದ ಪ್ರತಾಪ್‌ಸಿಂಹ, ಆರ್‌.ಧ್ರುವನಾರಾಯಣ, ನಿಖೀಲ್‌ 
ಕುಮಾರಸ್ವಾಮಿ ಇನ್ನಿತರರು ಈ ವೇಳೆ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next