Advertisement

ಸಿದ್ದರಬೆಟ್ಟದ ದಾಸೋಹ ಸೇವಾ ಸಮಿತಿ ಕಾರ್ಯದರ್ಶಿ ವಿರುದ್ಧ ಕ್ರಮ

03:03 PM May 05, 2019 | Team Udayavani |

ಕೊರಟಗೆರೆ: ಸಿದ್ದೇಶ್ವರ ದಾಸೋಹ ಸಮಿತಿ ಕಾರ್ಯದರ್ಶಿ ತಪ್ಪು ಮಾಡಿದ್ದರೆ ಶಿಕ್ಷೆ ಆಗುವುದು ಖಚಿತ. ಆಡಳಿತ ನಿರ್ವಹಣೆ ವೇಳೆ ಲೋಪ ಮತ್ತು ಅಕ್ರಮದ ಸಮಗ್ರ ತನಿಖೆ ನಡೆಸಿ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ ನೀಡುತ್ತೇನೆ ಎಂದು ಮಧುಗಿರಿ ಉಪವಿಭಾಗಾಧಿಕಾರಿ ವೀಣಾ ಸ್ಥಳೀಯರಿಗೆ ಭರವಸೆ ನೀಡಿದರು.

Advertisement

ತಾಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೇಟ್ಟದ ಶ್ರೀಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಕುಡಿಯುವ ನೀರು ಮತ್ತು ದಾಸೋಹ ಸೇವಾ ಸಮಿತಿಯ ಸಮಸ್ಯೆ ಕುಂದುಕೊರತೆ ಸಭೆಯಲ್ಲಿ ಮಾತನಾ ಡಿದರು. ಸಿದ್ದರಬೆಟ್ಟದ ಸಿದ್ದೇಶ್ವರ ಸ್ವಾಮಿ ಹೆಸರಲ್ಲಿ ಯಾವುದೇ ರೀತಿಯ ಸೇವಾ ಸಮಿತಿ ರಚಿಸಲು ಅವಕಾಶವಿಲ್ಲ. ಸ್ಥಳೀಯರು ಮತ್ತು ಅಧಿಕಾರಿಗಳಿಗೆ ಅನಧಿಕೃತ ದಾಸೋಹ ಸಮಿತಿ ಮಾಹಿತಿಯೇ ಇಲ್ಲವೇ, ಯಾರೂ ಅಧಿಕಾರಿಗಳಿಗೆ ದೂರು ನೀಡಿಲ್ಲ ಏಕೆ. ಸಿದ್ದರಬೆಟ್ಟದ ಕಂದಾಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ನಿರ್ವಹಣೆ ಮಾಡುತ್ತಿದ್ದ ಕಾರ್ಯದರ್ಶಿ ರಾಜಣ್ಣಗೆ ಸಭೆಗೆ ಬರಲು ಸೂಚಿಸಿದ್ದೇನೆ. ಗೈರು ಹಿನ್ನೆಲೆಯಲ್ಲಿ ದಾಸೋಹ ಸಮಿತಿ ನಿರ್ವಹಣೆ ಸಂಪೂರ್ಣ ಆಡಳಿತದ ಜವಾಬ್ದಾರಿಯನ್ನು ತಾತ್ಕಲಿಕ ವಾಗಿ ಉಪತಹಶೀಲ್ದಾರ್‌ ಶ್ರೀಧರ್‌ ಮತ್ತು ಪಾರು ಪತ್ತೇದಾರ್‌ ವಿರಮಲ್ಲಯ್ಯ ಅವರಿಗೆ ವಹಿಸಲಾಗಿದೆ. ಸಮಿತಿ ದಾಖಲೆ ಪರಿಶೀಲನೆ ನಡೆಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸುತ್ತೇನೆಂದರು.

ಪ್ರಶ್ನಿಸುವವರಿಲ್ಲ:ಸಿದ್ದರಬೆಟ್ಟದ ಸ್ಥಳೀಯ ಮುಖಂಡ ನಂಜುಂಡ ಸ್ವಾಮಿ, ಅಕ್ರಮಗಳೇ ಹೆಚ್ಚಾಗಿದೆ. ಲೆಕ್ಕಾಚಾರದ ಮಾಹಿತಿಯೇ ನಿಗೂಢ. ಕಾರ್ಯದರ್ಶಿ ರಾಜಣ್ಣ ತನಗೆ ಬೇಕಾದ ರೀತಿಯಲ್ಲಿ ಆಡಳಿತ ಲೆಕ್ಕಾಪತ್ರ ತಿರುಚುವ ಕೆಲಸ ಮಾಡುತ್ತಾನೆ. ತಕ್ಷಣ ದಾಸೋಹ ಸೇವಾ ಸಮಿತಿಯನ್ನು ಸೂಪರ್‌ಸೀಡ್‌ ಮಾಡಬೇಕು ಎಂದು ತೋವಿನಕೆರೆ, ಕುರಂಕೋಟೆ ಮತ್ತು ಬೂದಗವಿ ಗ್ರಾಪಂ ನೂರಾರು ಭಕ್ತರು ಆಗ್ರಹಿಸಿ ದರು. ಸಿದ್ದರಬೆಟ್ಟದ ಭಕ್ತಾದಿ ಗಳಾದ ನಂಜಾರಾಧ್ಯ, ಸಿದ್ದರಬೆಟ್ಟ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಪೂರೈಕೆ ಆಗುವ ಕುಡಿಯುವ ನೀರನ್ನು ಕಾರ್ಯ ದರ್ಶಿ ರಾಜಣ್ಣ ತಮ್ಮ ಜಮೀನಿಗೆ ಬಿಡು ತ್ತಿದ್ದಾರೆ. ಹರಕೆ ತೀರಿಸಲು ಬರುವ ಭಕ್ತರಿಗೆ ಸ್ನಾನ ಮತ್ತು ಶೌಚಾಲಯಕ್ಕೆ ನೀರು ಬಿಡುತ್ತಿಲ್ಲ. ಪ್ರಶ್ನಿಸುವವರೇ ಇಲ್ಲವಾಗಿದ್ದಾರೆಂದರು.

ಸಿದ್ದರಬೆಟ್ಟ ಗ್ರಾಪಂ ಅಧ್ಯಕ್ಷ ರಂಗಶಾಮಯ್ಯ ಮಾತನಾಡಿ, ಮುಜರಾಯಿ ಇಲಾಖೆ ಆಡಳಿತ ಹಸ್ತಕ್ಷೇಪ ಇಲ್ಲದ ಖಾಸಗಿ ಸಿದ್ದೇಶ್ವರ ಸೇವಾ ಸಮಿತಿ ಆಡಳಿತವನ್ನು ತಕ್ಷಣ ರದ್ದುಗೊಳಿಸಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.

Advertisement

ಸಭೆಯಲ್ಲಿ ತಹಶೀಲ್ದಾರ್‌ ಶಿವರಾಜು, ಉಪತಹ ಶೀಲ್ದಾರ್‌ ಶ್ರೀಧರ್‌, ಕಂದಾಯ ನಿರೀಕ್ಷಕ ನಟರಾ ಜು, ಪಾರುಪತ್ತೇದಾರ್‌ ವೀರಮಲ್ಲಯ್ಯ, ಪಪಂ ಮುಖ್ಯಾಧಿಕಾರಿ ಗ್ರಾಪಂ ಪಿಡಿಒ ವಿಜಯಲಕ್ಷ್ಮೀ, ತಾಪಂ ಸದಸ್ಯ ಗಿರಿಜಾ, ತಾಪಂ ಮಾಜಿ ಉಪಾಧ್ಯಕ್ಷ ವಿಜಯಶಂಕರ್‌, ಗ್ರಾಪಂ ಉಪಾಧ್ಯಕ್ಷೆ ಆದಿಲಕ್ಷ್ಮಮ್ಮ, ಸದಸ್ಯ ಗಿರೀಶ್‌, ಮುಖಂಡರಾದ ಅಖಂಡರಾಧ್ಯ, ಸಿದ್ದರಾಜು, ಪಾಂಡುರಂಗಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next