Advertisement

UK: ಮಲ್ಯ, ನೀರವ್‌ ವಿರುದ್ಧ ಕ್ರಮ ಖಚಿತ: ಭಾರತದಲ್ಲಿನ ಯು.ಕೆ. ರಾಯಭಾರಿ ಎಲಿಸ್‌ ಹೇಳಿಕೆ

10:01 PM Aug 22, 2023 | Team Udayavani |

ನವದೆಹಲಿ: ಉದ್ಯಮಿಗಳಾಗಿರುವ ವಿಜಯ್‌ ಮಲ್ಯ ಮತ್ತು ನೀರವ್‌ ಮೋದಿ ಸೇರಿದಂತೆ ಜಗತ್ತಿನ ದೇಶಭ್ರಷ್ಟರಿಗೆ ಯು.ಕೆ. ಆಕರ್ಷಿತ ತಾಣವಾಗಲು ಸಾಧ್ಯವೇ ಇಲ್ಲ. ಈ ಬಗ್ಗೆ ನಮ್ಮ ದೇಶದ ಸರ್ಕಾರ ಬಯಕೆಯನ್ನೂ ಹೊಂದಿಲ್ಲ ಎಂದು ಭಾರತದಲ್ಲಿ ಬ್ರಿಟನ್‌ನ ರಾಯಭಾರಿಯಾರಿ ಅಲೆಕ್ಸ್‌ ಎಲಿಸ್‌ ಹೇಳಿದ್ದಾರೆ.

Advertisement

ಆಂಗ್ಲ ಸುದ್ದಿವಾಹಿನಿ “ನ್ಯೂಸ್‌18’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮಲ್ಯ ಮತ್ತು ನೀರವ್‌ರನ್ನು ಯಾವಾಗ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

“ಭಾರತೀಯರ ನೋವು ನಮಗೆ ಅರಿವಾಗುತ್ತದೆ. ಈ ವಿಚಾರದಲ್ಲಿ ಎಲ್ಲ ರೀತಿಯ ಸಹಕಾರ ನೀಡಲು ನಾವು ಸಿದ್ಧ. ಸರ್ಕಾರ ಈಗಾಗಲೇ ಇಬ್ಬರನ್ನೂ ಗಡಿಪಾರು ಮಾಡಲು ಈಗಾಗಲೇ ಒಪ್ಪಿಗೆ ನೀಡಲಾಗಿದೆ. ಆದರೆ ವಿಷಯ ನ್ಯಾಯಾಲಯದಲ್ಲಿದೆ. ಒಂದು ಸ್ವತಂತ್ರ ನ್ಯಾಯವ್ಯವಸ್ಥೆಯನ್ನು ಇಂಗ್ಲೆಂಡ್‌ ಹೊಂದಿರುವುದರಿಂದ ಅದರ ತೀರ್ಪುಗಳಂತೆ ನಾವು ನಡೆಯಬೇಕಾಗುತ್ತದೆ’ ಎಂದು ಅಲೆಕ್ಸ್‌ ಎಲಿಸ್‌ ಹೇಳಿದ್ದಾರೆ. 76 ವರ್ಷಗಳಿಂದ ಹಿಂದೆ ಇದ್ದ ಇಂಗ್ಲೆಂಡ್‌ಗೂ, ಈಗಿನ ಇಂಗ್ಲೆಂಡ್‌ಗೂ ಬಹಳ ವ್ಯತ್ಯಾಸವಿದೆ. ಈಗ ಇಂಗ್ಲೆಂಡ್‌ ಪ್ರಧಾನಿ ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಜೈಶ್ರೀರಾಮ್‌ ಎಂದು ಹೇಳುತ್ತಾರೆ ಎಂದು ಎಲಿಸ್‌ ಹೇಳಿದ್ದಾರೆ. ಇದಲ್ಲದೆ ಎರಡೂ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬರುವುದು ಅಗತ್ಯವಾಗಿದೆ ಎಂದೂ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next