ಚಿಕ್ಕಬಳ್ಳಾಪುರ: ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ತಿಳಿಸಿದರು.
ಕ್ಷೇತ್ರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ ಗಡಿ ಜಿಲ್ಲೆಗಳಲ್ಲಿ ಯಾವ ರೀತಿ ನಿಯಮ ಪಾಲಿಸಬೇಕೆಂದು ಚರ್ಚಿಸಬೇಕಿದೆ.ಈಬಗ್ಗೆ ಮುಖ್ಯಮಂತ್ರಿಗಳೊಂದಿಗೆ
ಮಾತುಕತೆ ಮಾಡಲಾಗುವುದು. ಪ್ರತಿ ದಿನ ಗಡಿ ಜಿಲ್ಲೆಗಳಿಗೆ ಬರುವ ಜನರಿಗೆ ಯಾವ ರೀತಿ ನಿಯಮ ಪಾಲಿಸಬೇಕೆಂದು ಚರ್ಚಿಸಲಾಗುವುದು ಎಂದು ತಿಳಿಸಿದರು.
ಸಾಂಸ್ಥಿಕ ಕ್ವಾರಂಟೈನ್: ಕೇರಳದಿಂದ ಪ್ರತಿ ದಿನ ಅನೇಕರು ಗಡಿಜಿಲ್ಲೆಗಳಿಗೆ ಬರುತ್ತಾರೆ. ಶಿಕ್ಷಣ,ಆರೋಗ್ಯ ಸೇವೆ, ನಿತ್ಯದ ವಹಿವಾಟುಗಳಿಗೆ ದಕ್ಷಿಣ ಕನ್ನಡ, ಉಡುಪಿ ಮೊದಲಾದ ಜಿಲ್ಲೆಗಳಿಗೆ ಜನರು ಬರುತ್ತಾರೆ. ಇನ್ನು ವಿಮಾನ, ರೈಲುಗಳ ಮೂಲಕ ಬರುವವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕಿದೆ. ಇದಕ್ಕಾಗಿ ಕೋವಿಡ್ ಮಾರ್ಗಸೂಚಿ ರೂಪಿಸಲಾಗುವುದು ಎಂದು ಹೇಳಿದರು. ಕೆಜಿಎಫ್‌ನ ಶಿಕ್ಷಣ ಸಂಸ್ಥೆಯಲ್ಲಿ 32 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಈ ಎಲ್ಲಾ ವಿದ್ಯಾರ್ಥಿಗಳು ಕೇರಳದಿಂದ ಬಂದವರಾಗಿದ್ದಾರೆ. ಬುಧವಾರ ಸಂಸ್ಥೆಗೆ ಹೋಗಿ ಅದರ ಮೇಲೂ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಕೇರಳದಿಂದ ಬಂದಾಗಲೇ ಅವರ ನೆಗೆಟಿವ್ ವರದಿ ಪಡೆಯಬೇಕಿತ್ತು. ಇದು ಸಂಸ್ಥೆ ಯ ಜವಾಬ್ದಾರಿಯಾೂ ಆಗಿದೆ ಎಂದು ವಿವರಿಸಿದರು.
ಇದನ್ನೂ ಓದಿ:ಆಣೆ ಮಾಡಿದ್ರೆ ಹಣ ಫಿಕ್ಸ್: ರಾಜಕೀಯದ ಹೊಸ ರಣತಂತ್ರ
ರಾಜ್ಯದಲ್ಲಿ 50 ಸಾವಿರ ಪ್ರಕರಣಗಳನ್ನು700-800ಕ್ಕೆ ತರಲಾಗಿದೆ. ಸರ್ಕಾರ ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದೆ ಎಂದ ಸಚಿವರು, ಮಕ್ಕಳಿಗೆ ಶೈಕ್ಷಣಿಕ ಭವಿಷ್ಯ ಹಾಗೂ ಸಂರಕ್ಷಣೆ ಸರ್ಕಾರದ ಜವಾಬ್ದಾರಿ. ಎಲ್ಲಾ ಶಾಲೆಗಳಲ್ಲಿ ವಿಶೇಷ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ. ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ಕಂಡು ಬಂದರೆ ಶಾಲೆ ಮುಚ್ಚಿ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ,ಸಮಾರಂಭಗಳನ್ನುಮಾಡಬೇಕೆನ್ನುವುದು ಎಲ್ಲರಿಗೂ ಇದೆ. ಆದರೆ ಕೋವಿಡ್ ಸುರಕ್ಷತಾ ಕ್ರಮ ಗಳನ್ನು ಎಲ್ಲರೂ ಪಾಲಿಸಲೇ ಬೇಕು. ಕೋವಿಡ್ ತಡೆಗೆ ತಾಂತ್ರಿಕ ಸಲಹಾ ಸಮಿತಿಯಾ ಸಲಹೆ, ಆರೋಗ್ಯ ಇಲಾಖೆಯಾ ಸಲಹೆಗಳನ್ನು ಸರ್ಕಾರಕ್ಕೆ ತಿಳಿಸಲಾಗಿದೆ.ಕೋವಿಡ್ ನಿಯಾಂತ್ರಿಸುವ ಒಂದೇ ದೃಷ್ಟಿಯಿಂದ ನಾವು ನೋಡುತ್ತಿದ್ದೇವೆ.. ಮುಖ್ಯಮಂತ್ರಿಗಳು ಎಲ್ಲಾ ದೃಷ್ಟಿಕೋನದಿಂದ ನೋಡಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.