ಮಂಗಳೂರು: ನಗರದ ಬೆಂಗ್ರೆಯಲ್ಲಿ ಮಂಗಳವಾರ ತಡರಾತ್ರಿ ನಡೆದ ಅಹಿತಕರ ಘಟನೆಗಳಿಗೆ ಕಾರಣ ರಾದವರ ವಿರುದ್ಧ ಸೂಕ್ತ ಕ್ರಮ ಕೈ ಗೊಳ್ಳಬೇಕು. ಜತೆಗೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸು ವಂತೆ ಈಗಾಗಲೇ ಪೊಲೀಸ್ ಇಲಾ ಖೆಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಜೆ.ಆರ್. ಲೋಬೊ ತಿಳಿಸಿದರು.
ಬುಧವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಲ್ಪೆಯಲ್ಲಿ ನಡೆದ ಮೀನು ಗಾರರ ಸಮಾವೇಶದಲ್ಲಿ ಭಾಗವಹಿಸಿ ಹಿಂದಿರುಗುವ ವೇಳೆ ಈ ಘಟನೆ ನಡೆ ದಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಆದರೆ ಅಹಿತಕರ ಘಟನೆಗೆ ಕಾರಣರಾದವರು ಯಾರು ಎಂಬುದು ತಿಳಿದಿಲ್ಲ. ಸಮಾವೇಶಕ್ಕೆ ತೆರಳಿದ್ದ 4 ಬಸ್‌ಗಳು ಹೋಗುವವರೆಗೆ ಯಾವುದೇ ಘಟನೆ ನಡೆದಿಲ್ಲ. 5ನೇ ಬಸ್ ಬರುವ ಸಂದರ್ಭದಲ್ಲಿ ಘೋಷಣೆ ಕೂಗುವ ವಿಚಾರದಲ್ಲಿ ಘರ್ಷಣೆ ನಡೆದಿದೆ. ಬಳಿಕ ಸ್ಥಳೀಯ ಮುಖಂಡರು ಮಾತುಕತೆ ನಡೆಸಿ ಪರಿ ಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ತಡರಾತ್ರಿ 2.30ರ ವೇಳೆಗೆ ಕಿಡಿಗೇಡಿಗಳು ತೋಟ ಬೆಂಗ್ರೆಯ ಮಸೀದಿ ಹಾಗೂ ಸ್ಥಳೀಯ ಮನೆಯೊಂದಕ್ಕೆ ಹಾನಿ ಮಾಡಿದ್ದಾರೆ ಎಂದು ಪೊಲೀಸ್ ಮಾಹಿತಿ ತಿಳಿಸಿದೆ. ಘಟನೆಯಿಂದ ನಾಲ್ಕೈದು ಮಂದಿ ಗಾಯಗೊಂಡಿದ್ದು, ಕೆಲವು ಪೊಲೀಸರಿಗೂ ಗಾಯವಾಗಿದೆ ಎಂದು ಹೇಳಿದರು.
ಅತ್ಯಂತ ಶಾಂತಿಯಿಂದ ಕೂಡಿದ್ದ ತೋಟಬೆಂಗ್ರೆ- ಕಸ್ಬಾಬೆಂಗ್ರೆಯ ಪ್ರದೇಶ ದಲ್ಲಿ ನಡೆದ ಘಟನೆ ನನಗೆ ನೋವು ತಂದಿದೆ. ಯಾರೋ ಕಿಡಿಗೇಡಿಗಳು ಈ ರೀತಿ ಶಾಂತಿ ಕದಡಲು ಪ್ರಯತ್ನಿಸಿರು ವುದು ಖಂಡನೀಯ. ಇದಕ್ಕೆ ಕಾರಣರಾ ದವರು ಯಾರೇ ಆಗಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಜತೆಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಶಾಸಕ ಲೋಬೊ ವಿವರಿಸಿದರು.
ವಸತಿರಹಿತರಿಗೆ ಮನೆ ಕೊಡುವ ವಿಚಾರದ ಕುರಿತ ಆರೋಪಕ್ಕೆ ಪ್ರತಿ ಕ್ರಿಯಿಸಿದ ಶಾಸಕರು, ಶಕ್ತಿನಗರದಲ್ಲಿ ಮನೆ ಕೊಡುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಯೋಜನಾ ವರದಿ ತಯಾ ರಿಸಿ, ವಿವಿಧ ಸಭೆಗಳನ್ನು ನಡೆಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ಅನುಮತಿ ಪಡೆದ ಬಳಿಕ ಮನೆಗಳ ಹಂಚಿಕೆ ಪ್ರಕ್ರಿಯೆ ನಡೆದಿದೆ ಎಂದು ಲೋಬೊ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ಟಿ.ಕೆ. ಸುಧೀರ್, ಎ.ಸಿ. ವಿನಯ ರಾಜ್, ಅಬ್ದುಲ್ ಸಲೀಂ, ಮೋಹನ್ ಮೆಂಡನ್, ರಮಾನಂದ ಪೂಜಾರಿ, ಚೇತನ್ ಉರ್ವ ಉಪಸ್ಥಿತರಿದ್ದರು.