Advertisement
ಮೊದಲಿಗೆ ಮಾತನಾಡಿದ ನಿರ್ದೇಶಕ ಮಂಸೋರೆ, “ನಾವು ಸಿನಿಮಾ ರಿಲೀಸ್ ಮಾಡಬೇಕೆಂದು ಹೊರಟಾಗ ಒಂದಿಷ್ಟು ಸ್ನೇಹಿತರು ಈ ರಿಸ್ಕ್ ಬೇಕಿತ್ತಾ ಎನ್ನುತ್ತಿದ್ದರು. ಆದರೆ ನಿರ್ಮಾಪಕರು ನಮಗೆ ಬೆಂಬಲವಾಗಿ ನಿಂತು, ನಮಗೆಲ್ಲ ಧೈರ್ಯ ತುಂಬಿದರು. ಈಗ ಸಿನಿಮಾ ಸಕ್ಸಸ್ ಆಗಿದೆ. ಒಳ್ಳೆ ಕಂಟೆಂಟ್ ಸಿನಿಮಾ ಬಂದರೆ ಜನ ಯಾವತ್ತೂ ಕೈಬಿಡುವುದಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ನಮ್ಮ ಸಿನಿಮಾದಲ್ಲಿ ಯಾವುದೇ ಸ್ಟಾರ್ ಇಲ್ಲ, ಆದ್ರೆ ಈಗ ಎಲ್ಲಾ ಸ್ಟಾರ್ ನಮ್ಮ ಸಿನಿಮಾಕ್ಕೆ ಸಪೋರ್ಟ್ ಮಾಡ್ತಿದ್ದಾರೆ. ಪುನೀತ್, ಶಿವಣ್ಣ, ಸುದೀಪ್, ದರ್ಶನ್, ಸತೀಶ್ ಸೇರಿದಂತೆ ಎಲ್ಲರೂ ಸಿನಿಮಾ ಚೆನ್ನಾಗಿದೆ ಎಂದಿದ್ದಾರೆ. ಇಡೀಕನ್ನಡ ಇಂಡಸ್ಟ್ರಿ ನಮಗೆ ಬೆಂಬಲವಾಗಿ ನಿಂತಿದೆ. ಫಸ್ಟ್ ಡೇ ಜನರಿಗೆ ಸ್ವಲ್ಪ ಭಯ ಇತ್ತು. ಯಾವಾಗ ಸಿನಿಮಾದ ಬಗ್ಗೆ ಒಳ್ಳೇ ವಿಮರ್ಶೆ ಬರೋದಕ್ಕೆ ಶುರುವಾಯ್ತೋ ಆಗ ಆಡಿಯನ್ಸ್ ತಾವಾಗಿಯೇ ಥಿಯೇಟರ್‌ಗೆ ಬಂದರು.ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಇಂಡಸ್ಟ್ರಿಕೂಡ ನಮ್ಮ ಸಿನಿಮಾದ ರಿಸಲ್ಟ್ ಏನಾಗುತ್ತೋ ಎಂದು ಎದುರು ನೋಡುತ್ತಿತ್ತು’ ಎಂದರು.
Related Articles
Advertisement
“ಸಿನಿಮಾ ರಿಲೀಸ್ ಆದ ದಿನದಿಂದಲೂ ನಾವು ಥಿಯೇಟರ್‌ಗೆ ಹೋಗುತ್ತಿದ್ದೇವೆ. ಜನ ತುಂಬಾ ಉತ್ಸಾಹದಿಂದ ಸಿನಿಮಾ ನೋಡುತ್ತಿದ್ದಾರೆ. ಆರಂಭದಲ್ಲಿ ನಮಗೂ ನಿರ್ದೇಶಕರು ತುಂಬಾ ರಿಸ್ಕ್ ತೆರೆದುಕೊಳ್ಳುತ್ತಿದ್ದಾರೆ ಎನಿಸಿತ್ತು. ನಮ್ಮ ಶ್ರಮ ವ್ಯರ್ಥ ಆಗಲಿಲ್ಲ’ ಎಂದರು.
ನಟ ಸಂಚಾರಿ ವಿಜಯ್. ಹಿರಿಯನಟ ಅವಿನಾಶ್ ಮಾತನಾಡಿ, “ಈ ಸಿನಿಮಾದಲ್ಲಿ ಕಥೆಯೇ ಹೀರೋ. ಥಿಯೇಟರ್‌ಗಳು ಓಪನ್ ಆಗಿ ತಿಂಗಳೇ ಆಗ್ತಾ ಬಂತು. ಸಿನಿಮಾ ರಿಲೀಸ್ ಮಾಡಲು ಯಾರೂ ಮುಂದೆ ಬರ್ತಾ ಇರಲಿಲ್ಲ. ಎಲ್ಲ ನೀನು ಹೋಗು, ನಾನು ಹೋಗು ಎನ್ನುತ್ತಿದ್ದರು. ಬೆಕ್ಕಿಗೆ ಘಂಟೆಕಟ್ಟೊರು ಯಾರು? ಎಂಬ ಪ್ರಶ್ನೆ ಎದುರಾಗಿತ್ತು. ಅಂತಾ ಟೈಮ್‌ನಲ್ಲಿ ಈ ನಿರ್ಮಾಪಕರು ಬೆಕ್ಕಿಗೆ ಘಂಟೆ ಕಟ್ಟಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಒಂದು ಹೊಸ ಚೈತನ್ಯ ತುಂಬಿದ್ದಾರೆ. ನಿರೀಕ್ಷೆಗೂ ಮೀರಿದ ಸಪೋರ್ಟ್ ನಮ್ಮ ಚಿತ್ರಕ್ಕೆ ಸಿಗುತ್ತಿದೆ’ ಎಂದರು.
ಬೆಂಜಮಿನ್ ಆಗಿ ರಾಘುಗೆ ಮೆಚ್ಚುಗೆ :
ಆಕ್ಟ್ 1978 ಚಿತ್ರ ನೋಡಿದವರಿಗೆ ಅಲ್ಲೊಂದು ಪಾತ್ರ ಗಮನ ಸೆಳೆಯುತ್ತದೆ. ಅದು ಬೆಂಜಮಿನ್ ಪಾತ್ರ.ಸೀರಿಯಸ್ ವಾತಾವರಣದ ನಡುವೆ ಆಗಾಗ ತಮ್ಮ ಡೈಲಾಗ್, ಮ್ಯಾನರೀಸಂ ಮೂಲಕ ಗಮನ ಸೆಳೆಯುವ ಬೆಂಜಮಿನ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ರಾಘು ಶಿವಮೊಗ್ಗ. ಚೂರಿಕಟ್ಟೆ ಸಿನಿಮಾನಿರ್ದೇಶಿಸಿ ಮೆಚ್ಚುಗೆ ಪಡೆದಿದ್ದ ರಾಘು ಈಗ ನಟನೆಯತ್ತ ಮುಖಮಾಡಿದ್ದಾರೆ. ಆಕ್ಟ್ 1978 ನೋಡಿದವರಿಂದ ರಾಘು ಅವರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಹೊಸ ಸಿನಿಮಾಗಳ ಆಫರ್ ಕೂಡಾ ಬರುತ್ತಿವೆ. ಈಗಾಗಲೇ ಮತ್ತೂಂದು ಹೊಸಸಿನಿಮಾದಲ್ಲಿ ನಟಿಸುತ್ತಿದ್ದಾರೆ. “ನನಗೆ ಯಾವುದೇ ಪಾತ್ರವಾದರೂ ಮಾಡಲು ಸಿದ್ಧ. ಆದರೆ, ಅದರಲ್ಲಿ ವಿಭಿನ್ನತೆಇರಬೇಕು. ಆಕ್ಟ್ 1978 ಚಿತ್ರದ ನನ್ನ ಪಾತ್ರದ ಬಗ್ಗೆಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದೆ ನಟನೆಯತ್ತ ಹೆಚ್ಚು ಫೋಕಸ್ ಮಾಡುವ ಎಂದಿದ್ದೇನೆ’ ಎನ್ನುವುದು ರಾಘು ಮಾತು.