Advertisement

ಆಹಾರ ಕಿಟ್‌ ನೀಡಲು ವೇತನ ಮೀಸಲಿಟ್ಟ ಎಸಿಪಿ

11:03 AM Apr 26, 2020 | Suhan S |

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ ನಿಂದ ಆಹಾರ ಪದಾರ್ಥಗಳು ಸಿಗದೇ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಆಹಾರ ಕಿಟ್‌ಗಳನ್ನು ನೀಡಲು ದೇವನಹಳ್ಳಿ ಉಪವಿಭಾಗದ ಎಸಿಪಿ ಸುಬ್ರಹ್ಮಣ್ಯ ದಂಪತಿ ತಮ್ಮ ತಿಂಗಳ ವೇತನ ಮೀಸಲಿಟ್ಟಿದ್ದಾರೆ.

Advertisement

ಎಸಿಪಿ ಸುಬ್ರಹ್ಮಣ್ಯ ದಂಪತಿಯ ಒಂದು ತಿಂಗಳ ವೇತನ 1.20 ಲಕ್ಷ ರೂ. ಹಣವನ್ನು ಮೀಸಲಿಟ್ಟು, ಅಗತ್ಯವಿದ್ದರಿಗೆ ಆಹಾರ ಕಿಟ್‌ಗಳನ್ನು ನೀಡುತ್ತಿದ್ದಾರೆ. ನೂರಾರು ಆಹಾರ ಕಿಟ್‌ಗಳನ್ನು ಬಡವರು, ಕೂಲಿ ಕಾರ್ಮಿಕರು ಅಗತ್ಯವಿದ್ದವರಿಗೆ ತಾವೇ ಜೀಪಿನಲ್ಲಿ ತೆರಳಿ ಬಡ ಜನರನ್ನ ಗುರುತಿಸಿ ವಿತರಣೆ ಮುಂದಾಗಿದ್ದಾರೆ. “ಲಾಕ್‌ಡೌನ್‌ ಆದಾಗಿನಿಂದಲೂ ದಾನಿಗಳ ನೆರವಿನಿಂದ ಅಗತ್ಯವಿದ್ದವರಿಗೆ ಆಹಾರ ಕಿಟ್‌ ಗಳನ್ನು ನೀಡುತ್ತಿದ್ದೇವೆ. ದೇಶದ ಸಂಕಷ್ಟದ ಸಮಯದಲ್ಲಿ ನಮ್ಮದು ಒಂದು ಸಣ್ಣ ಸಹಾಯ ಮಾಡಬೇಕು ಎಂದು ಪತ್ನಿ ಹಾಗೂ ನನ್ನ ಒಂದು ತಿಂಗಳ ವೇತನ ಮೀಸಲಿಟ್ಟು ಆಹಾರ ಕಿಟ್‌ ಗಳನ್ನು ನೀಡುತ್ತಿದ್ದೇವೆ ಎಂದು ಎಸಿಪಿ ಸುಬ್ರಹ್ಮಣ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next