ಮೈಸೂರು: ಬ್ಯಾಂಕ್ ವಹಿವಾಟು ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕರ್ಣಾಟಕ ಬ್ಯಾಂಕ್ ನೌಕರರು ಭಾನುವಾರ ಜಾಗೃತಿ ಜಾಥಾ ನಡೆಸಿದರು.
ಕುವೆಂಪುನಗರದ ನ್ಯೂ ಕಾಂತರಾಜ ಅರಸು ರಸ್ತೆಯಲ್ಲಿರುವ ಬ್ಯಾಂಕ್ ಆವರಣದಿಂದ ಹೊರಟ ಜಾಥಾದಲ್ಲಿ ಸಾಗಿದ ಬ್ಯಾಂಕ್ ನೌಕರರು, ಬ್ಯಾಂಕ್ ಖಾತೆ ತೆರೆಯುವುದು ಹೇಗೆ?, ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಿ, ನಗದು ರಹಿತ ವ್ಯವಹಾರ ರೂಢಿಸಿಕೊಳ್ಳಿ,
ಎಂಟಿಎಂ ಗುಪ್ತ ಸಂಖ್ಯೆಯನ್ನು ಯಾರಿಗೂ ಹೇಳಬೇಡಿ, ಕರ್ಣಾಟಕ ಬ್ಯಾಂಕ್‌ನಲ್ಲಿ ಲಭ್ಯವಿರುವ ಸಾಲ ಸೌಲಭ್ಯಗಳ ಜತೆಗೆ ಸಂಚಾರಿ ನಿಯಮಗಳನ್ನು ಪಾಲಿಸುವ ಹಾಗೂ ಪರಿಸರವನ್ನು ಸ್ವತ್ಛವಾಗಿರಿಸುವ ಕುರಿತಾದ ಸಂದೇಶಗಳನ್ನು ಸಾರಿದರು.
ಜಾಥಾಕ್ಕೆ ಹಸಿರು ನಿಶಾನೆ ತೋರಿದ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ಜಗದೀಶ್ ಮಾತನಾಡಿ, ಜನಸಾಮಾನ್ಯರಿಗೆ ಕರ್ಣಾಟಕ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಅರಿವು ಮೂಡಿಸಿ ಉಳಿತಾಯ ಸಂಸ್ಕೃತಿ ಬೆಳಸಬೇಕಿದೆ ಎಂದರು. ಬ್ಯಾಂಕ್ ಆವರಣದಿಂದ ಆರಂಭವಾದ ಜಾಥಾ, ವಿಶ್ವಮಾನವ ರಸ್ತೆ,
ಕುಕ್ಕರಹಳ್ಳಿ ಕೆರೆ, ಸರಸ್ವತಿಪುರಂ, ಆದಿಚುಂಚನಗಿರಿ ರಸ್ತೆ, ಜಾnನಗಂಗಾ ರಸ್ತೆ, ವಿಶ್ವಮಾನವ ಜೋಡಿ ರಸ್ತೆ ಮಾರ್ಗವಾಗಿ ಸಾಗಿ, ಕಚೇರಿ ಆವರಣದಲ್ಲಿ ಅಂತ್ಯಗೊಂಡಿತು. ಪ್ರಧಾನ ವ್ಯವಸ್ಥಾಪಕ ತಿಮ್ಮಯ್ಯ, ಬಾಲಕೃಷ್ಣ, ಉಮೇಶ್ ¸ಟ್, ಸೇರಿದಂತೆ ಕರ್ಣಾಟಕ ಬ್ಯಾಂಕ್‌ನ ಎಲ್ಲಾ ಶಾಖೆಯ ನೂರಾರು ಸಿಬ್ಬಂದಿ ಜಾಥಾದಲ್ಲಿ ಬಾಗವಹಿಸಿದ್ದರು.