Advertisement

ಆಸಿಡ್ ಟ್ಯಾಂಕರ್ ಬಿರುಕು , ಬೆಂಕಿ : ತಪ್ಪಿದ ಭಾರಿ ಅನಾಹುತ 

09:44 AM Oct 19, 2018 | Team Udayavani |

ಸುರತ್ಕಲ್ : ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಆಸಿಡ್ ತುಂಬಿದ್ದ ಟ್ಯಾಂಕರ್ ನಲ್ಲಿ ಬಿರುಕು ಕಾಣಿಸಿಕೊಂಡು ರಸ್ತೆಯುದ್ದಕ್ಕೂ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ತಡರಾತ್ರಿ 12 ಗಂಟೆಗೆ ಹೊತ್ತಿಗೆ ಸುರತ್ಕಲ್ ಬಳಿ ನಡೆದಿದೆ. 

Advertisement

ಟ್ಯಾಂಕರ್ ನಲ್ಲಿ ಕಾಣಿಸಿಕೊಂಡ ಬಿರುಕು ಚಾಲಕನಿಗೆ ತಿಳಿಯದೇ ಈ ಘಟನೆ ನಡೆದಿದೆ. ಬಿರುಕಿನಿಂದಾಗಿ ಆಸಿಡ್ ರಸ್ತೆಗೆ ಚೆಲ್ಲಿ ಬೆಂಕಿ ಮತ್ತು ಭಾರಿ ಹೊಗೆ ಕಾಣಿಸಿಕೊಂಡಿದೆ. ಟ್ಯಾಂಕರ್ ಸುರತ್ಕಲ್ ಟೋಲ್ ಗೇಟ್ ಬಳಿ ಬಂದಾಗ ಟೋಲ್ ಸಿಬ್ಬಂದಿ ಬೆಂಕಿ ಗಮನಿಸಿದ್ದಾರೆ. ಕೂಡಲೇ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. 

ಮಧ್ಯರಾತ್ರಿ ಸಮಯವಾಗಿದ್ದರಿಂದ ರಸ್ತೆಯಲ್ಲಿ ಸಂಚಾರ ಕಡಿಮೆ ಇದ್ದುದರಿಂದ  ಆಗಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿ ಹೋಗಿದೆ. ಆಸಿಡ್ ಮತ್ತು ಬೆಂಕಿಯಿಂದಾಗಿ ರಸ್ತೆಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. 

ಟ್ಯಾಂಕರ್ ನಲ್ಲಿ ಕಾಣಿಸಿಕೊಂಡ ಬಿರುಕಿನ ಕಾರಣ ಇನ್ನಷ್ಟೇ ತಿಳಿಯಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next