ದೇವನಹಳ್ಳಿ: ಸಮಾಜದಲ್ಲಿ ಮಹಿಳೆ ಅಬಲೆಯಲ್ಲ ಸಬಲೆ. ಪುರುಷರಂತೆ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದ್ದಾಳೆ. ಆ ಸಾಲಿನಲ್ಲಿ ಕೊಯಿರ ಗ್ರಾಪಂ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ವೀಣಾ ರವಿಕುಮಾರ್ ಕೂಡ ಸೇರುತ್ತಾರೆ.
ಕೊಯಿರ ಹೊಸೂರು ಗ್ರಾಪಂ ಕ್ಷೇತ್ರದಿಂದ ಆಯ್ಕೆ ಆದ ವೀಣಾ ರವಿಕುಮಾರ್ ಎಸ್ಸೆಸ್ಸೆಲ್ಸಿಓದಿದ್ದು, ಜನ ಸೇವೆ ಜೊತೆಗೆ ಕೃಷಿಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಶುಂಠಿ, ಮಾರಿಗೋಲ್ಡ್ ಮತ್ತು ಐಶ್ವರ್ಯ ತಳಿಯ ಹೂ, ಕ್ಯಾಪ್ಸಿಕಂ, ರೇಷ್ಮೆ,ತೊಗರಿ ಹೀಗೆ ವಿವಿಧ ಬೆಳೆಬೆಳೆಯುವ ಮೂಲಕ ಕೃಷಿಹಾಗೂ ತೋಟಗಾರಿಕೆ ಇಲಾಖೆ ಯಿಂದ ಅತ್ಯುತ್ತಮ ಕೃಷಿಪ್ರಶಸ್ತಿ ಪಡೆದು ಇತರರಿಗೆ ಮಾದರಿಯಾಗಿದ್ದಾರೆ. ಪ್ರಸ್ತುತ ಶುಂಠಿ ಬೆಳೆ ಎರಡು ಎಕರೆ, ರೇಷ್ಮೆ ಎರಡು ಎಕರೆ, ಒಂದುಎಕರೆಯ ಪಾಲಿಹೌಸ್‌ನಲ್ಲಿ ಮಾರಿಗೋಲ್ಡ್ ಮತ್ತು ಐಶ್ವರ್ಯ ತಳಿಯ ಹೂ ಬೆಳೆಯುತ್ತಿದ್ದಾರೆ. ಒಂದು ಬೆಳೆ ಆದನಂತರ ಮತ್ತೂಂದು ಬೆಳೆ ಬೆಳೆಯುವ ಮೂಲಕ ಕೃಷಿ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಕೊಟ್ಟಿಗೆ ಗೊಬ್ಬರ ಬಳಕೆ: ರಾಸಾಯನಿಕ ಬಳಸದೇ ಸಾವಯವ ಗೊಬ್ಬರವನ್ನು ಉಪಯೋಗಿಸಿಕೊಂಡು ಬೆಳೆ ಬೆಳೆದು ಪ್ರಗತಿಪರ ಕೃಷಿಕರಾಗಿದ್ದಾರೆ.ಜಾನುವಾರು, ಕುರಿ ಗೊಬ್ಬರ ಬಳಸಿ ಉತ್ತಮಇಳುವರಿ ಪಡೆಯುತ್ತಿದ್ದಾರೆ. ಬೆಳಗ್ಗೆ 7ರಿಂದ 10ಗಂಟೆಯವರೆಗೆ ತೋಟದಲ್ಲಿಕಳೆ ತೆಗೆಯು ವುದು, ನೀರು ಕಟ್ಟುವುದು, ಇತರೆ ಕೆಲಸವನ್ನು ಕೂಲಿಗಾರರ ಜೊತೆ ಮಾಡುತ್ತಿದ್ದಾರೆ. ಇವರಿಗೆ ಪತಿ ರವಿಕುಮಾರ್ ಸಾಥ್ ನೀಡುತ್ತಿದ್ದಾರೆ
ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ: ಈ ವೇಳೆ ತಮ್ಮ ಸಾಧನೆ ಬಗ್ಗೆ ವಿವರಿಸಿದವೀಣಾರವಿಕುಮಾರ್, ಮಹಿಳೆಯರು ನಾಲ್ಕುಗೋಡೆಗೆ ಸೀಮಿತವಾಗದೆ, ಪುರುಷಪ್ರಧಾನಕ್ಷೇತ್ರದಲ್ಲಿ ಕೃಷಿ, ತೋಟಗಾರಿಕೆ ಬೆಳೆ ಬೆಳೆದುಮತ್ತೂಬ್ಬರಿಗೆ ಮಾದರಿ ಆಗಬೇಕು. ಆಗಿನಕಾಲದಲ್ಲಿ ನಮ್ಮ ಹಿರಿಯರು ತೋಟ, ಕೃಷಿಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಆರೋಗ್ಯವಂತರಾಗಿ ನೂರಾರು ವರ್ಷ ಬಾಳುತ್ತಿದ್ದರು ಎಂದು ಹೇಳಿದರು.
ಕುಟುಂಬಸ್ಥರು ಸಹಕರಿಸಲಿ: ಹಿರಿಯರ ಮಾರ್ಗದರ್ಶನದಲ್ಲಿ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಯನ್ನು ಕಳೆದ ನಾಲ್ಕೈದುವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಕೃಷಿಮತ್ತು ತೋಟಗಾರಿಕೆ ಮಾಡಲು ನಮ್ಮ ಪತಿರವಿಕುಮಾರ್, ಮಕ್ಕಳು ಸಹಕಾರ ನೀಡುತ್ತಿದ್ದಾರೆ.ಕಾಲಕಾಲಕ್ಕೆ ಯಾವ ಬೆಳೆ ಹಾಕಬೇಕೆಂದು ಕೃಷಿಮತ್ತು ತೋಟಗಾರಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬೆಳೆ ಬೆಳೆಯಲಾಗುತ್ತಿದೆ.
ಎಲ್ಲಾ ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕೃಷಿ ಮತ್ತು ತೋಟಗಾರಿಕೆ, ರೇಷ್ಮೆ ಅಧಿಕಾರಿಗಳು ಗ್ರಾಮೀಣ ಪ್ರದೇಶದಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳು,ಹೆಚ್ಚಿನ ಸಮಗ್ರ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.
-ಎಸ್.ಮಹೇಶ್