Advertisement

ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕುದೂರಿನ ಭಗತ್ ಸಿಂಗ್ ಅಕಾಡೆಮಿ ಕರಾಟೆ ಶಾಲೆಯ ಸಾಧನೆ

02:10 PM Aug 08, 2022 | Team Udayavani |

ಮಂಡ್ಯ: ಗೊಜು-ರಿಯು ಕರಾಟೆ ಡು ಅಕಾಡೆಮಿ ಸಂಸ್ಥೆ ಮಂಡ್ಯ, ಇದರ ಆಶ್ರಯದಲ್ಲಿ ನಡೆದ 5ನೇ  ರಾಜ್ಯ ಮಟ್ಟದ ಕರಾಟೆ ಟೂರ್ನಮೆಂಟಿನಲ್ಲಿ ಕುದೂರು ಮೂಲದ ಭಗತ್ ಸಿಂಗ್ ಅಕಾಡೆಮಿ ಆಫ್ ಕರಾಟೆ ಸಂಸ್ಥೆಯ ಒಟ್ಟು 44 ವಿದ್ಯಾರ್ಥಿಗಳು ಭಾಗವಹಿಸಿದ್ದು, ಈ ಮೂಲಕ ಕಟಾ ಮತ್ತು ಕುಮಟಿ ವಿಭಾಗದಲ್ಲಿ ಅತಿ ಹೆಚ್ಚಿನ ಬಹುಮಾನಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ.

Advertisement

ಒಟ್ಟು 44 ಕರಾಟೆ ಸ್ಪರ್ಧಿಗಳ ಪೈಕಿ ಕಟಾ ವಿಭಾಗದಲ್ಲಿ, 3 ವಿದ್ಯಾರ್ಥಿಗಳು ಪ್ರಥಮ, 4 ವಿದ್ಯಾರ್ಥಿಗಳು  ದ್ವಿತೀಯ, 18 ವಿದ್ಯಾರ್ಥಿಗಳು  ತೃತೀಯ.

ಕುಮಟಿ ವಿಭಾಗದಲ್ಲಿ 8 ವಿದ್ಯಾರ್ಥಿಗಳು ಪ್ರಥಮ, 10 ವಿದ್ಯಾರ್ಥಿಗಳು  ದ್ವಿತೀಯ, 9 ವಿದ್ಯಾರ್ಥಿಗಳು  ತೃತೀಯ ಬಹುಮಾನ ಗಳಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬಹುಮಾನ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಗತ್ ಸಿಂಗ್ ಅಕಾಡೆಮಿ ಕರಾಟೆ ಪ್ರಾಂಶುಪಾಲ ರಮೇಶ್ ಮಾತನಾಡಿ, ಕರಾಟೆ ಎಂಬುದು ಕೇವಲ ಆತ್ಮ ರಕ್ಷಣೆಯ ಕಲೆಯಲ್ಲ, ಇತ್ತೀಚೆಗೆ ಅದು ವಿಭಿನ್ನ ಕಲೆಯಾಗಿ ಹೊರಹೊಮ್ಮುತ್ತಿದೆ, ರಕ್ಷಣೆಯ ವಿಚಾರದಲ್ಲಿ ಪ್ರಸ್ತುತ ಸಮಾಜ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂತಹ ಸಮಸ್ಯೆಗಳನ್ನು ಎದುರಿಸಲು ಮಕ್ಕಳನ್ನು ಬಾಲ್ಯದಿಂದಲೇ ತಯಾರಿ ಮಾಡಬೇಕು, ಕರಾಟೆ ಕಲೆ ಸ್ವ ರಕ್ಷಣೆಯ ತಂತ್ರವನ್ನು ಕಲಿಸುವ ಜೊತೆಗೆ, ದೇಶಪ್ರೇಮ, ನಾಯಕತ್ವದ ಗುಣಗಳನ್ನೂ ಸಹ ಬೆಳಸುತ್ತದೆ. ಇಂತಹ ಕಲೆಗಳನ್ನು ಕಲಿಸಲು ಪೋಷಕರು ಮಕ್ಕಳಿಗೆ ಸಹಕಾರ ನೀಡಬೇಕು, ಕರಾಟೆ ಕಲಿಯಲು ವಯಸ್ಸಿನ ಬೇಧವಿಲ್ಲ, ಹೀಗಾಗಿ ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸಲು ಇದು ಅತ್ಯಂತ ಉಪಯುಕ್ತ ಎಂದು ಅಭಿಪ್ರಾಯ ಪಟ್ಟರು.

ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗಿ

Advertisement

ಮಂಡ್ಯದಲ್ಲಿ ನಡೆದ ಕರಾಟೆ ಪಂದ್ಯಾವಳಿಯಲ್ಲಿ ಭಗತ್ ಸಿಂಗ್ ಕರಾಟೆ ಸಂಸ್ಥೆಯ ಅಂಗ ಸಂಸ್ಥೆಗಳಿಗೆ ಸೇರಿದ ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಮಕ್ಕಳು ಭಾಗಿಯಾಗಿದ್ದರು. ಕರಾಟೆ ಶಿಕ್ಷಕರಾದ ಅರುಣ್, ಚಂದ್ರಶೇಖರ್, ಚೇತನ್, ಸುನಿಲ್ ಮುಂತಾದವರು ಮಕ್ಕಳ ಜೊತೆಗಿದ್ದು, ಗೆಲುವಿಗಾಗಿ ಅನೇಕ ತಂತ್ರಗಳನ್ನು ರೂಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next