Advertisement

ಆಟೋಮೋಟಿವ್‌ ಬಿಡಿಭಾಗಗಳ ಉತ್ಪಾದನಾ ವಲಯಕ್ಕೆ ಅಭಯ

09:59 PM Feb 01, 2020 | Lakshmi GovindaRaj |

ಆಟೋಮೋಟಿವ್‌ ಬಿಡಿಭಾಗಗಳ ಕ್ಷೇತ್ರವನ್ನು “ಕೈಹಿಡಿದು ಮುನ್ನಡೆಸುತ್ತೇವೆ’ ಎಂಬ ಅಭಯ ನೀಡಿರುವ ಸಚಿವೆ ನಿರ್ಮಲಾ ಸೀತಾರಾಮನ್‌, ಈ ವಲಯದಲ್ಲಿನ ತಂತ್ರ ಜ್ಞಾನ ಉನ್ನತೀಕರಣ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವ್ಯವಹಾರ ಕಾರ್ಯತಂತ್ರ ಯೋಜನೆಗಳಿಗೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂಬ ಭರವಸೆ ನೀಡಿದ್ದಾರೆ. ದೇಶದಲ್ಲಿ ಆಟೋಮೋಟಿವ್‌ ಬಿಡಿಭಾಗಗಳ ಉತ್ಪಾದನೆ ಸೇರಿ ವಿವಿಧ ವಲಯಗಳಲ್ಲಿ ಸಾಕಷ್ಟು ಮಧ್ಯಮ ಪ್ರಮಾಣದ ಕಂಪನಿಗಳಿವೆ.

Advertisement

ಆದರೆ ರಫ್ತು ಮಾರುಕಟ್ಟೆಗೆ ತಮ್ಮ ವ್ಯವಹಾರ ವಿಸ್ತರಿಸಲು ಈ ಕಂಪನಿಗಳು ವಿಫ‌ಲವಾ ಗಿವೆ. ಹೀಗಾಗಿ, ಫಾರ್ಮಸುಟಿಕಲ್‌ (ಔಷಧ), ಆಟೋ ಮೊಬೈಲ್‌ ಬಿಡಿಭಾಗಗಳ ತಯಾರಿಕೆ ಸೇರಿ ಆಯ್ದ ಉದ್ಯಮಗಳಿಗೆ ಹಣಕಾಸು, ವ್ಯವಹಾರ ವಿಸ್ತರಣೆ ಸೇರಿ ಹಲವು ವಿಧಗಳಲ್ಲಿ ನೆರವಿನ ಹಸ್ತ ಚಾಚಲು ಸಿದ್ಧವಿರುವು ದಾಗಿ ಸರ್ಕಾರ ತಿಳಿಸಿದೆ. ಈ ನಿಟ್ಟಿನಲ್ಲಿ ಎಕ್ಸಿಮ್‌ ಬ್ಯಾಂಕ್‌ ಹಾಗೂ ಎಸ್‌ಐಡಿಬಿಗೆ 1,000 ಕೋಟಿ ರೂ.ಗಳನ್ನು ನೀಡುವ ಯೋಜನೆ ರೂಪಿಸಿದೆ.

ಈ ಪೈಕಿ ಎರಡೂ ಸಂಸ್ಥೆಗಳು ತಲಾ 50 ಕೋಟಿ ರೂ. ನೀಡಲಿದ್ದು, ಈ 100 ಕೋಟಿ ರೂ.ಗಳನ್ನು ಬಂಡವಾಳ ಮತ್ತು ತಾಂತ್ರಿಕ ಸಹಕಾರಕ್ಕೆ ವಿನಿಯೋಗಿ ಸಲಾಗುತ್ತದೆ. ಉಳಿದ 900 ಕೋಟಿ ರೂ.ಗಳನ್ನು ಬ್ಯಾಂಕ್‌ಗಳು ಸಾಲದ ರೂಪದಲ್ಲಿ ನೀಡಲಿವೆ. ಇದರಿಂದ ಆಟೋ ಮೋಟಿವ್‌ ಬಿಡಿಭಾಗ ಉತ್ಪಾದಿಸುವ ಉದ್ಯಮಗಳು, ಹೊಸ ಹೊಸ ತಂತ್ರಜ್ಞಾನ ಗಳನ್ನು ಅಳವಡಿಸಿಕೊಳ್ಳಲು, ಉತ್ತಮ ಗುಣಮಟ್ಟದ ಉತ್ಪನ್ನ ತಯಾರಿಸಲು ಮತ್ತು ಆ ಮೂಲಕ ವ್ಯವಹಾರವನ್ನು ರಫ್ತು ಮಾರುಕಟ್ಟೆಗೆ ವಿಸ್ತರಿಸಿಕೊಳ್ಳಲು ನೆರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next